https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಜನಾಂಗದ ವ್ಯಯಕ್ತಿಕ ಸಾಧನೆಯಿಂದ ಕೊಡವರನ್ನು ವಿಶ್ವ ಗುರುತ್ತಿಸಿ, ಗೌರವಿಸುತ್ತಿದೆ : ತಾವಳಗೇರಿ ಮೂಂದ್‌ ನಾಡ್‌ ಕೊಡವ ಸಮಾಜದ ಪತ್ತಲೋದಿ ಸಮಾರೋಪದಲ್ಲಿ ಶಾಸಕ  ಎ. ಎಸ್. ಪೊನ್ನಣ್ಣ ಅಭಿಮತ

ಜನಾಂಗದ ವ್ಯಯಕ್ತಿಕ ಸಾಧನೆಯಿಂದ ಕೊಡವರನ್ನು ವಿಶ್ವ ಗುರುತ್ತಿಸಿ, ಗೌರವಿಸುತ್ತಿದೆ : ತಾವಳಗೇರಿ ಮೂಂದ್‌ ನಾಡ್‌ ಕೊಡವ ಸಮಾಜದ ಪತ್ತಲೋದಿ ಸಮಾರೋಪದಲ್ಲಿ ಶಾಸಕ  ಎ. ಎಸ್. ಪೊನ್ನಣ್ಣ ಅಭಿಮತ

Uncategorized
28/10/202428/10/2024nadubadenews@gmail.comLeave a Comment on ಜನಾಂಗದ ವ್ಯಯಕ್ತಿಕ ಸಾಧನೆಯಿಂದ ಕೊಡವರನ್ನು ವಿಶ್ವ ಗುರುತ್ತಿಸಿ, ಗೌರವಿಸುತ್ತಿದೆ : ತಾವಳಗೇರಿ ಮೂಂದ್‌ ನಾಡ್‌ ಕೊಡವ ಸಮಾಜದ ಪತ್ತಲೋದಿ ಸಮಾರೋಪದಲ್ಲಿ ಶಾಸಕ  ಎ. ಎಸ್. ಪೊನ್ನಣ್ಣ ಅಭಿಮತ
Spread the love
ಜನಾಂಗದ ವ್ಯಯಕ್ತಿಕ ಸಾಧನೆಯಿಂದ ಕೊಡವರನ್ನು ವಿಶ್ವ ಗುರುತ್ತಿಸಿ, ಗೌರವಿಸುತ್ತಿದೆ : ತಾವಳಗೇರಿ ಮೂಂದ್‌ ನಾಡ್‌ ಕೊಡವ ಸಮಾಜದ ಪತ್ತಲೋದಿ ಸಮಾರೋಪದಲ್ಲಿ ಶಾಸಕ  ಎ. ಎಸ್. ಪೊನ್ನಣ್ಣ ಅಭಿಮತ

ಶ್ರೀಮಂಗಲ, ಅ.28: (ವರದಿ: ಅಣ್ಣಿರ ಹರೀಶ್‌ ಮಾದಪ್ಪ) : ಕೊಡವರು ವಿವಿಧ ಕ್ಷೇತ್ರದಲ್ಲಿ ವೈಯಕ್ತಿಕ ಸಾಧನೆ ಮಾಡಿದವರಿಂದ ಇಂದು ಜನಾಂಗವನ್ನು ವಿಶ್ವ ಗುರುತಿಸಿ ಗೌರವಿಸುತ್ತಿದೆ, ಈ ಆದರ್ಶದಿಂದ ನಾವು ಸಾಧನೆ ಮಾಡಿ ಜನಾಂಗಕ್ಕೆ ಹೆಮ್ಮೆ ತರಬೇಕು.ನಮ್ಮ  ಹಿರಿಯರ ಒಳ್ಳೆಯ ಗುಣ, ಸತ್ಯ, ಧರ್ಮ, ನ್ಯಾಯ, ಪ್ರಾಮಾಣಿಕತೆ ಮೂಲಕ ನಾವು ಹೆಸರುಗಳಿಸಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.

ಟಿ.ಶೆಟ್ಟಿಗೇರಿ ಕೊಡವ ಸಮಾಜದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲ ಮುಖ್ಯ ಪಾತ್ರ ವಹಿಸುತ್ತದೆಯಾದ್ದರಿಂದ ಜಾತಿ ಬಲದಲ್ಲಿ ಪ್ರಾಬಲ್ಯ ಮತ್ತು ಪ್ರಾತಿನಿಧ್ಯ ಸಹ ಜಾಸ್ತಿ ಇರುತ್ತದೆ. ನಾವು ಜಾತಿಯನ್ನು ಮೀರಿ ಸಾಧಿಸಲು ಬುದ್ಧಿಶಕ್ತಿ,ವಿದ್ಯಾಶಕ್ತಿ, ಪ್ರತಿಭೆಯಿಂದ ಮಾತ್ರ ಸಾಧ್ಯ. ಆದ್ದರಿಂದ  ವಿದ್ಯಾವಂತರಾಗಿ ಉನ್ನತ ಹುದ್ದೆಗಳನ್ನು ಪಡೆಯುವ ದಾರಿಯನ್ನು ಕೊಡವ ಸಮಾಜಗಳು ತೋರಿಸಿಕೊಡಬೇಕು ಎಂದು ಅಭಿಪ್ರಾಯಪಟ್ಟರು.

            ಕೊಡವ ಹಬ್ಬ ಆಚಾರ,ವಿಚಾರ ಸಂಸ್ಕೃತಿಯನ್ನು ಕಾಪಾಡುವುದು ಕೊಡವ ಸಮಾಜದ ಆದ್ಯ ಕರ್ತವ್ಯ, 32 ಕೊಡವ ಸಮಾಜಗಳು ಈ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು. ಟಿ.ಶೆಟ್ಟಿಗೇರಿ ಕೊಡವ ಸಮಾಜ ಜನಾಂಗ ಹೆಮ್ಮೆಪಡುವಂತಹ ಬಹಳ ಜವಾಬ್ದಾರಿಯುತವಾದ ಸೇವೆಯನ್ನು ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

  ಕೊಡವ ಸಮಾಜ ಕಲ್ಯಾಣ ಮಂಟಪ ಹಾಗೂ ಇತರ ಕಾರ್ಯಕ್ರಮಗಳಿಗೆ ಸೀಮಿತವಾಗಬಾರದು, ಕೊಡವರು ಸಣ್ಣ ಜನಾಂಗವಾದರೂ ವೈಯಕ್ತಿಕವಾಗಿ ಉನ್ನತ ಮಟ್ಟದ ಸಾಧನೆ ಮಾಡಿದ್ದಾರೆ. ಸೇನೆ,ನ್ಯಾಯಾಂಗ ವ್ಯವಸ್ಥೆ,ವಿದೇಶಾಂಗ ಸೇವೆ,ರಾಜಕೀಯ, ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ.  ಇಂಥವರ ವೈಯಕ್ತಿಕ ಸಾಧನೆಗಳನ್ನು ಗುರುತಿಸಿ, ಅದನ್ನು ಆದರ್ಶವಾಗಿಟ್ಟುಕೊಂಡು ಜನಾಂಗದ ಮಕ್ಕಳು ಬೆಳೆಯಬೇಕು ಹಾಗೂ ಉನ್ನತ ಸ್ಥಾನಮಾನವನ್ನು ಪಡೆಯಬೇಕು ಎಂದು ಪೊನ್ನಣ್ಣ ಅವರು ಹೇಳಿದರು.

  ಕೊಡವ ಸಮಾಜಗಳು ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿ ಉನ್ನತ ಸ್ಥಾನಮಾನಕ್ಕೆ ಮಕ್ಕಳು ಏರಿದಾಗ, ನಮ್ಮ ವಯಸ್ಸು ಕಾಲದಲ್ಲಿ ನಮ್ಮ ಮಕ್ಕಳ ಸಾಧನೆ ನೋಡಿ  ಹೆಮ್ಮೆ ಪಡುವಂತ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕೆಂದು ನನ್ನ ಆಶಯ ಎಂದು ಅವರು ವಿವರಿಸಿದರು.

            ಹೀಗಾದಾಗ ನಮ್ಮ ಆಚಾರ- ವಿಚಾರ ಸಂಸ್ಕೃತಿ -ಪರಂಪರೆ ಪರಿಸರಗಳನ್ನು ಸೂರ್ಯ ಚಂದ್ರ ಇರುವವರಿಗೆ ಸಂರಕ್ಷಣೆ ಮಾಡಲು ಸಾಧ್ಯವಿದೆ ಎಂದು ಅವರು ಉದಾಹರಣೆ ಸಹಿತ ಪ್ರತಿಪಾದಿಸಿದರು.

  ಮತ್ತೋರ್ವ ಮುಖ್ಯ ಅತಿಥಿ ಬಿಜೆಪಿ ರಾಜ್ಯ ಶಿಸ್ತು ಸಮಿತಿಯ ಸದಸ್ಯೆ ಪಟ್ಟಡ ರೀನಾ ಪ್ರಕಾಶ್ ಅವರು ಮಾತನಾಡಿ ಪ್ರತಿಯೊಂದು ಕೊಡವ ಸಮಾಜಗಳು ಟಿ. ಶೆಟ್ಟಿಗೆರಿ ಕೊಡವ ಸಮಾಜದ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಮಾಡಿದರೆ ಜನಾಂಗದ ಆಚಾರ- ವಿಚಾರ,ಸಂಸ್ಕೃತಿ ಬಗ್ಗೆ ಮಕ್ಕಳಿಗೆ ಅರಿವು ಬರುತ್ತದೆ. ಹೊರಗೆ ಇರುವವರು ಸಹ ಬಂದು ಸೇರಲು ಅವಕಾಶವಾಗುತ್ತದೆ. ಕಾವೇರಿ ಚಂಗ್ರಾಂದಿ ಹಬ್ಬವನ್ನು 10 ದಿನಗಳವರೆಗೆ ಜನೋತ್ಸವವಾಗಿ ಮಾಡುತ್ತಿರುವ ಸಂದರ್ಭ ಕಾವೇರಿ ನದಿಯ ಪಾವಿತ್ರ್ಯತೆಯನ್ನು ಕಾಪಾಡಬೇಕಾಗಿದೆ. ಕೋಟ್ಯಾಂತರ ಜನರಿಗೆ ಜೀವ ಹಾಗೂ ಜೀವನವನ್ನು ಕಾವೇರಿ ನಡಿಯಾಗಿ ಕರುಣಿಸಿದೆ. ಆದ್ದರಿಂದ ಕಾವೇರಿ ನದಿಯ ಕಲುಷಿತವಾಗದಂತೆ ಕಾಪಾಡಬೇಕೆಂದು ಕರೆ ನೀಡಿದರು.

ಜನಸಂಖ್ಯೆ ವೃದ್ಧಿಗೆ ಪ್ರೋತ್ಸಾಹ ನಿರ್ಣಯ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಅವರು ನಮ್ಮ ಸಂಸ್ಕೃತಿ ಜನಪದ ಕಲೆ ಆಚಾರ ವಿಚಾರಗಳನ್ನು ನಾವು ಕಲಿತು ವೇದಿಕೆಯಲ್ಲಿ ಪ್ರದರ್ಶನ ಮಾಡುತ್ತೇವೆ. ಆದರೆ ಇದರ ಹಿಂದೆ ನಮ್ಮ ಜನಾಂಗದ ಜನಸಂಖ್ಯೆಯನ್ನು ವೃದ್ಧಿಸುವ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ. ಈ ನಿಟ್ಟಿನಲ್ಲಿ ಟಿ. ಶೆಟ್ಟಿಗೇರಿ ಕೊಡವ ಸಮಾಜದ ವ್ಯಾಪ್ತಿಯಲ್ಲಿ ಕೊಡವ ದಂಪತಿಗಳಿಗೆ ಮೂರನೇ ಮಗುವಾದರೆ, 50 ಸಾವಿರ ಹಾಗೂ ನಾಲ್ಕನೇ ಮಗುವಾದರೆ ಒಂದು ಲಕ್ಷ ಬಹುಮಾನವಾಗಿ ನೀಡಲು  ನಿರ್ಣಯ ಕೈಗೊಂಡಿರುವುದಾಗಿ ಘೋಷಿಸಿದರು.

            ಈ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟು ಮಗುವಿಗೆ 18 ವಯಸ್ಸು ಆದಾಗ ಅದನ್ನು ತೆಗೆದುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ವಿವರಿಸಿದರು.

            ಸಭೆಯ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ ಅವರು 2017 ರಿಂದ ಆರಂಭವಾದ ಈ ಪತ್ತಲೋದಿ ಕಾರ್ಯಕ್ರಮ ಆರಂಭದಲ್ಲಿ ಈ ಕಾರ್ಯಕ್ರಮ ಮಾಡಲು ಪ್ರಸ್ತಾವನೆಯನ್ನು ಕೊಡವ ಸಮಾಜದ ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಮಂಡಿಸಿದ್ದರು. ಅದಕ್ಕೆ ಅಂದಿನ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ  ಹಾಗೂ ಆಡಳಿತ ಮಂಡಳಿ ಬೆಂಬಲ ನೀಡಿತು.ಆದರೆ ಆ ಸಂದರ್ಭದಲ್ಲಿ ಕೆಲವರು ನಕಾರಾತ್ಮಕವಾಗಿ ಮಾತನಾಡುತ್ತಿದ್ದರು. ಆದರೆ ಕಳೆದ ಎಂಟು ವರ್ಷದಿಂದ ವಿವಿಧ ಆಡಳಿತ ಮಂಡಳಿ ತನು,ಮನ, ಧನ ಸಹಾಯದಿಂದ ಪತ್ತಲೋದಿ ಕಾರ್ಯಕ್ರಮ 8ನೇ ವರ್ಷಕ್ಕೆ ಕಾಲಿಟ್ಟಿದ್ದು, ಕಾವೇರಿ ಮಾತೆಯ ಆಶೀರ್ವಾದದಿಂದ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ ಎಂದು ವಿವರಿಸಿದರು.

 ಸನ್ಮಾನ ಕಾರ್ಯಕ್ರಮ:

ಈ ಸಂದರ್ಭ ಈಚೆಗೆ ರಾಜ್ಯ ಸರ್ಕಾರದ ಹಿರಿಯ ನಾಗರಿಕ ಸೇವಾ ಪ್ರಶಸ್ತಿ ಪಡೆದ ಕೈಬುಲಿರ ಪಾರ್ವತಿ ಬೋಪಯ್ಯ, ದಾನಿಗಳಾದ ಅಜ್ಜಮಾಡ ವೇಣು ಸುಬ್ಬಯ್ಯ, ಅಜ್ಜಮಾಡ ಲವ ಕುಶಾಲಪ್ಪ, ಅಜ್ಜಮಾಡ ಪ್ರಮೀಳಾ ಕರುಂಬಯ್ಯ, ಅಜ್ಜಮಾಡ ಚಿಮ್ಮ ತಿಮ್ಮಯ್ಯ ಹಾಗೂ ಸಮಾಜದ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ ನಿರ್ದೇಶಕಿ, ಚಂಗುಲಂಡ ಅಶ್ವಿನಿ ಸತೀಶ್ ಅವರನ್ನು ಸನ್ಮಾನಿಸಲಾಯಿತು.

            ಚೆಟ್ಟಂಡ ಲತಾ ಚರ್ಮಣ ಪ್ರಾರ್ಥಿಸಿ, ಬಾದುಮಂಡ ವಿಷ್ಣು ಕಾರ್ಯಪ್ಪ ಸ್ವಾಗತಿಸಿ ಚಂಗುಲಂಡ ಅಶ್ವಿನಿ ಸತೀಶ್  ಅವರು ನಿರೂಪಿಸಿ ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ವಂದಿಸಿದರು.

 ಸಾಂಸ್ಕೃತಿಕ ಕಾರ್ಯಕ್ರಮ:

ಟಿ-ಶೆಟ್ಟಿಗೇರಿ ರೂಟ್ಸ್ ಶಾಲೆಯ ಮಕ್ಕಳು ಹಾಗೂ   ಚೆಟ್ಟಂಗಡ ಕುಟುಂಬದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

            ವೇದಿಕೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ,ರೂಟ್ಸ್ ಶಾಲೆಯ ಮುಖ್ಯ ಶಿಕ್ಷಕಿ ನೆಲ್ಲೀರ ಪೂರ್ಣಿಮಾ ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ಸಹ ಕಾರ್ಯದರ್ಶಿ ಆಂಡಮಾಡ ಸತೀಶ್ ವಿಶ್ವನಾಥ್, ಖಜಾಂಚಿ ಚಂಗುಲಂಡ ಸತೀಶ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ, ಕ್ರೀಡಾ ಸಂಚಾಲಕ ತಡಿಯಂಗಡ ಶಮ್ಮಿ ಸುಬ್ಬಯ್ಯ, ನಿರ್ದೇಶಕರುಗಳಾದ ಚಂಗುಲಂಡ ಅಶ್ವಿನಿ ಸತೀಶ್, ತಡಿಯಂಗಡ ಸೌಮ್ಯ ಕರುಂಬಯ್ಯ, ತೀತಿರ ಅನಿತಾ ಸುಬ್ಬಯ್ಯ, ಬಾದುಮಂಡ ವಿಷ್ಣು ಕಾರ್ಯಪ್ಪ, ಮುಕ್ಕಾಟೀರ ಸಂದೀಪ್, ಕರ್ನಂಡ ರೂಪ ದೇವಯ್ಯ, ಬೊಳ್ಳೇರ ಅಪ್ಪುಟ ಪೊನ್ನಪ್ಪ ಹಾಜರಿದ್ದರು.

 ಯಶಸ್ವಿಯಾಗಿ ನಡೆದ ಪತ್ತಲೋದಿ ಕಾರ್ಯಕ್ರಮ:

2017ರಿಂದ ಗೌರಿ ಗಣೇಶ ಹಾಗೂ ದಸರಾ ಹಬ್ಬದಂತೆ ಕಾವೇರಿ ಚಂಗ್ರಾಂದಿ ಹಬ್ಬವನ್ನು ಕೊಡವ ಪದ್ಧತಿಯಂತೆ ಪತ್ತಲೋದಿವರೆಗೆ ಪ್ರತಿನಿತ್ಯ ಟಿ. ಶೆಟ್ಟಿಗೇರಿ ಕೊಡವ ಸಮಾಜ ಹಬ್ಬದ ಸಂಭ್ರಮದಂತೆ ನಡೆಸುತ್ತಿದೆ.   10 ದಿನ ಉತ್ತಮ ಜನ ಬೆಂಬಲ ವ್ಯಕ್ತವಾಗಿದೆ.ಕೊಡವರು ಗೌರಿ -ಗಣೇಶ್, ದಸರಾ ಹಬ್ಬದ ಯಶಸ್ವಿಯಲ್ಲಿ ತೊಡಗಿಸಿಕೊಂಡು, ಈ ಮಣ್ಣಿನ ಹಬ್ಬದ ಆಚರಣೆಯನ್ನು ಮರೆಯಬಾರದು  ಹಾಗೂ ಕೊಡವ ಸಂಸ್ಕೃತಿಗೆ ಉತ್ತೇಜನ ನೀಡುವ ಪರಿಕಲ್ಪನೆಯೊಂದಿಗೆ ಆಚರಣೆಗೆ ಬಂದ ಪತ್ತಲೋದಿ ಕಾರ್ಯಕ್ರಮ ಯಶಸ್ವಿ ಹಾದಿಯಲ್ಲಿ ಮುಂದುವರೆದಿದೆ.ಈ ಬಾರಿ 8ನೇ ವರ್ಷದ ಹತ್ತು ದಿನದ ಕಾರ್ಯಕ್ರಮ ಪ್ರತಿದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಕೊಡವಾಮೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆಯ ಪ್ರಮುಖರನ್ನು ಅತಿಥಿಗಳಾಗಿ ಸಮಾರಂಭಕ್ಕೆ ಆಹ್ವಾನಿಸಿ ಕಾರ್ಯಕ್ರಮ ನಡೆಸಿದೆ. ಈ ಬಾರಿ 80 ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನವಾಗಿದೆ. ಈ ಮೂಲಕ ಕೊಡವ  ಸಂಸ್ಕೃತಿ ಜಾನಪದ ಕಲೆ, ಕಲಿತು ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ವೇದಿಕೆ ನೀಡಿ ಪ್ರೋತ್ಸಾಹಿಸಿದೆ. ಪ್ರತಿದಿನ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಕಲಾತಂಡಗಳು ಅತ್ಯಂತ ಸಂಭ್ರಮದಿಂದ ಪಾಲ್ಗೊಂಡು ಮುಂದಿನ ಬಾರಿಯೂ ಕಾರ್ಯಕ್ರಮ ನೀಡಲು ಉತ್ಸುಕತೆ ತೋರಿದೆ. ಇದಲ್ಲದೆ ಪ್ರತಿದಿನ ಆಗಮಿಸುವ ಸಾರ್ವಜನಿಕರು ಹಾಗೂ ಕಲಾತಂಡಗಳಿಗೆ ಊಟದ ವ್ಯವಸ್ಥೆ ಮತ್ತು ಕಾಫಿ ತಿಂಡಿಗಳನ್ನು ಕೊಡವ ಸಮಾಜ ಅತ್ಯಂತ ಅಚ್ಚುಕಟ್ಟಾಗಿ ನಡೆಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Post navigation

ಗ್ರೀಕ್‌ ಮತ್ತು ಯುರೋಪಿಗೂ  ಮುನ್ನ, ಕೊಡಗಿನಲ್ಲಿ ಪ್ರಜಾಪ್ರಭುತ್ವ ಮತ್ತು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ಇತ್ತು…
ಕೊಡವ ದಂಪತಿಯಕ್‌ ಮೂಂದನೇ ಕುಂಞಿಯಾನಕ 50000, ನಾಲಾಂಗ್‌  ಓರ್‌ ಲಕ್ಷ ಇನಾಂ – ಟಿ. ಶೆಟ್ಟಿಗೇರಿ ಕೊಡವ ಸಮಾಜ ಘೋಷಣೆ

Related Posts

ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

ಏಲಕ್ಕಿ ಬೆಳೆಗಾರರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ…

03/10/202403/10/2024nadubadenews@gmail.com
ಡಿ.25ಕ್‌ ಪೊನ್ನಂಪೇಟೆ ಕೊಡವ ಸಮಾಜತ್‌ ಕೊಡವ ಸಾಂಸ್ಕೃತಿಕ ನಾಳ್‌ ಪಿಂಞ ಪುತ್ತರಿ ಕೋಲ್ ಮಂದ್

ಡಿ.25ಕ್‌ ಪೊನ್ನಂಪೇಟೆ ಕೊಡವ ಸಮಾಜತ್‌ ಕೊಡವ ಸಾಂಸ್ಕೃತಿಕ ನಾಳ್‌ ಪಿಂಞ ಪುತ್ತರಿ ಕೋಲ್ ಮಂದ್

22/12/202422/12/2024nadubadenews@gmail.com
ಕುಮಾರಿ ಸುಶ್ಮಿತ ಪಿ.ವಿ ಅವರಿಗೆ ಡಾಕ್ಟರೇಟ್ ಪದವಿ

ಕುಮಾರಿ ಸುಶ್ಮಿತ ಪಿ.ವಿ ಅವರಿಗೆ ಡಾಕ್ಟರೇಟ್ ಪದವಿ

28/10/202428/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version