ಟಿ.ಶೆಟ್ಟಿಗೇರಿ, ನ.20: ಕರ್ನಾಟಕ ಲೇಖಕಿಯರ ಸಂಘ ಕೊಡಗು ಶಾಖೆಯ ವಾರ್ಷಿಕ ಸಭೆಯು ಗೂಗಲ್ ಮೀಟ್ ವೆಬಿನಾರ್ನಲ್ಲಿ, ದಿನಾಂಕ 17-11-2024 ರಂದು ಅಧ್ಯಕ್ಷರಾದ ಶ್ರೀಮತಿ ವಿಜಯ ವಿಷ್ಣು ಭಟ್ ಅವರ ಸಮ್ಮುಖದಲ್ಲಿ ನಡೆದು, ಮುಂದಿನ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶ್ರೀಮತಿ ವಿಜಯ ವಿಷ್ಣು ಭಟ್ ಅವರು ಪುನರಾಯ್ಕೆಯಾದರೆ,ಉಪಾಧ್ಯಕ್ಷರಾಗಿ ಶ್ರೀಮತಿ ಉಳುವಂಗಡ ಕಾವೇರಿ ಉದಯ, ಕಾರ್ಯದರ್ಶಿಯಾಗಿ ಶ್ರೀಮತಿ ಶರ್ಮಿಳಾ ರಮೇಶ್ ಮತ್ತು ನಿರ್ದೇಶಕರನ್ನಾಗಿ, ಶ್ರೀಮತಿ ಜಯಲಕ್ಷ್ಮಿ ಎಂ. ಬಿ , ಶ್ರೀಮತಿ ಶೋಭ ರಕ್ಷಿತ್ , ಶ್ರೀಮತಿ ಮಾಲಾಮೂರ್ತಿ, ಶ್ರೀಮತಿ ಗೀತಾಂಜಲಿ, ಶ್ರೀಮತಿ ಮುಕ್ಕಾಟಿರ ಮೌನಿ ನಾಣಯ್ಯ ಇವರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸಂಘಟನೆಯ ಮುಂದಿನ ಕಾರ್ಯಯೋಜನೆ ಮತ್ತು ನಾವೆಂಬರ್ ತಿಂಗಳಿನಲ್ಲಿ ನಡೆಯಬೇಕಾದ ಕನ್ನಡ ಪರ ಕಾರ್ಯಕ್ರಮಗಳ ಕುರಿತು ಚರ್ಚಿಸಲಾಯಿತು.