https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೌಟುಂಬಿಕ ಹಾಕಿ ಹಬ್ಬಕ್ಕೆ 25ನೇ ವರ್ಷದ ಸಂಭ್ರಮ, “2025”ರ ವರೆಗೆ ನಡೆದ ಹಾದಿ…

ಕೌಟುಂಬಿಕ ಹಾಕಿ ಹಬ್ಬಕ್ಕೆ 25ನೇ ವರ್ಷದ ಸಂಭ್ರಮ, “2025”ರ ವರೆಗೆ ನಡೆದ ಹಾದಿ…

News, Informatin , Enteetinement and Advertisement
08/03/202508/03/2025nadubadenews@gmail.comLeave a Comment on ಕೌಟುಂಬಿಕ ಹಾಕಿ ಹಬ್ಬಕ್ಕೆ 25ನೇ ವರ್ಷದ ಸಂಭ್ರಮ, “2025”ರ ವರೆಗೆ ನಡೆದ ಹಾದಿ…
Spread the love
ಕೌಟುಂಬಿಕ ಹಾಕಿ ಹಬ್ಬಕ್ಕೆ 25ನೇ ವರ್ಷದ ಸಂಭ್ರಮ, “2025”ರ ವರೆಗೆ ನಡೆದ ಹಾದಿ…

            1935 ನೇ ಇಸವಿ ಮಾರ್ಚ್ 15 ರಂದು ಪಾಂಡಂಡ ಕುಟ್ಟಪ್ಪ ಅವರು ವಿರಾಜಪೇಟೆಯಲ್ಲಿ ಜನಿಸಿದರು. ಕರಡ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದರು. ಇವರ ಧರ್ಮಪತ್ನಿ ಅಮ್ಮಣಿಚಂಡ ಲೀಲಾ ಕುಟ್ಟಪ್ಪ. ಇವರ ಮಗಳು ಸುಮನ್ ಬಿದ್ದಾಟಂಡ  ಪ್ರದೀಪ್ ಅವರನ್ನು, ಇನ್ನೊಬ್ಬಳು ಮಗಳು ಸುಚಿತ ಬಲ್ಲಚಂಡ ಸುಬ್ರಮಣಿ ಅವರನ್ನು ಹಾಗೂ ಅವರ ಮಗ ಬೋಪಣ್ಣ ನುಚ್ಚಿಮಣಿಯಂಡ ಜ್ಯೋತಿ ಅವರನ್ನು ಮದುವೆಯಾದರು.

      ಹಾಕಿಯಲ್ಲಿ ಬಹಳಷ್ಟು ಪ್ರೀತಿ ಹೊಂದಿದ್ದ ಇವರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೌಕರಿಗೆ ಸೇರಿದರು. ಅತಿ ಉನ್ನತ ತೀರ್ಪುಗಾರರಾಗಿ ಹೊರಹೊಮ್ಮಿದರು ಹಾಗೂ ಉನ್ನತ ಅಧಿಕಾರಿಯಾಗಿ ನಿವೃತ್ತಿ ಹೊಂದಿದರು. 1997ರಲ್ಲಿ ಕರಡದಲ್ಲಿ ಕೌಟಂಬಿಕ ಹಾಕಿ ಹಬ್ಬವನ್ನು ಆಯೋಜಿಸಬೇಕೆಂಬ ಚಿಂತನೆಯನ್ನು ತನ್ನ ಸಹೋದರ ಹಾಗೂ ಗ್ರಾಮಸ್ಥರೋಡನೆ ಚರ್ಚಿಸಿ, 60 ಕುಟುಂಬಗಳನ್ನು ಒಳಗೊಂಡ ಕೌಟುಂಬಿಕ ಹಾಕಿಯನ್ನು ಪ್ರಥಮವಾಗಿ ಪ್ರಾರಂಭಿಸಿದರು.

 ಉದ್ದೇಶ

      ಗ್ರಾಮದಲ್ಲಿ ಎಲ್ಲರೂ ಒಂದೆಡೆ ಸೇರುವಂತೆ, ಮಹಿಳೆಯರಿಗೆ ಸಮಾನವಾದ ಹಕ್ಕು, ಕೊಡಗಿನ ಆಚಾರ, ವಿಚಾರ, ಪದ್ಧತಿ, ಪರಂಪರೆಯನ್ನು ಕಾಪಾಡುವ, ವಧು-ವರರನ್ನು ನೋಡುವ,  ಸಾಂಪ್ರದಾಯಿಕ ಕ್ರೀಡೆಯನ್ನು ಬೆಳೆಸುವ ನಿಟ್ಟಿನಲ್ಲಿ, ಗ್ರಾಮ  ಗ್ರಾಮಗಳಲ್ಲಿ, ಹಾಕಿ ಹಬ್ಬ ಮಾಡುವುದರಿಂದ ಮೈದಾನ ರಚನೆಯಾಗುತ್ತದೆ ಇದರಿಂದ ಶಾಲಾ ಮಕ್ಕಳು ಆಡಲಿ ಎಂಬ ಉದ್ದೇಶದಿಂದ ಪ್ರಾರಂಭವಾಯಿತು.

 ನಿಯಮಗಳು

      ಕೌಟುಂಬಿಕ ಹಾಕಿ ಹಬ್ಬದಲ್ಲಿ ತಮ್ಮದೇ ಆದ ತಾಂತ್ರಿಕ ಸಮಿತಿ, ತೀರ್ಪುಗಾರರು, ವೀಕ್ಷಕ ವಿವರಣೆಗಾರರು ಹಾಗೂ ಮೈದಾನ ತಯಾರು ಮಾಡುವವರು ರಚನೆಯಾಗಬೇಕು. ಎಲ್ಲರೂ ಕೊಡವರೇ ಆಗಿರಬೇಕು. ಮಹಿಳೆಯರು ತನ್ನ ಗಂಡನ ಮನೆಗೆ, ಇಲ್ಲವೇ ತವರು ಮನೆಗೆ ಆಡಬಹುದು. ವಯಸ್ಸಿನ ಮಿತಿಯಲ್ಲ.

ಹಾಕಿಯ ದಿಗ್ಗಜರ ಆಗಮನ

        ವರ್ಷಗಳಿಂದ ಹಾಕಿಯ ದಿಗ್ಗಜರಾಗ ಎಂ.ಪಿ.ಗಣೇಶ್, ಬಿ.ಪಿ.ಗೋವಿಂದ, ಎಂ.ಎಂ.ಸೋಮಯ್ಯ, ಅಶೋಕ್ ಕುಮಾರ್, ಲೆಸ್ಲಿ ವಾಲ್ಟರ್ ಕ್ಲಾಡಿಯಸ್, ಧನರಾಜ್ ಪಿಳ್ಳೆ, ಸಮೀರ್ ದಾದ, ರಘುನಾಥ್, ಎಸ್.ವಿ.ಸುನಿಲ್, ಅರ್ಜುನ ಹಾಲಪ್ಪ, ಜಾಫರ್  ಇಕ್ಬಾಲ್ ಇವರೆಲ್ಲರ ಆಗಮನವನ್ನು ಇಲ್ಲಿ ಸ್ಮರಿಸಬಹುದು.

      2012ರಲ್ಲಿ ಲಂಡನ್ ಒಲಂಪಿಕ್ಸ್ನ ಭಾರತ ತಂಡದ ಅಂದಿನ ತರಬೇತಿದಾರರಾದ ಮೈಕಲ್ ನಾಬ್ಸ್ ಹಾಗೂ ಭಾರತ ತಂಡ ಆಗಮಿಸಿ ಪ್ರದರ್ಶನ ಪಂದ್ಯಾವಳಿ ಆಡಿದರು.

 V.V.I.P ಗಳ  ಆಗಮನ

       ಇದುವರೆಗೆ ಕರ್ನಾಟಕದ ಮಾಜಿ ರಾಜ್ಯಪಾಲರಾದ ಶ್ರೀಮತಿ ರಮಾದೇವಿ, ಕೇಂದ್ರ ಸಚಿವರಾದ ಎಂ.ಎಸ್.ಗಿಲ್, ಕೇಂದ್ರ ರಕ್ಷಣಾ ಸಚಿವರಾದ ಮನೋಹರ್ ಪರಿಕರ್, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜು ಬೊಮ್ಮಾಯಿ,  ಮಾಜಿ ಮಂತ್ರಿ ಗಳಾದ ಎಂ.ಸಿ.ನಾಣಯ್ಯ,  ಅಪ್ಪಚ್ಚು ರಂಜನ್ , M.L.C ಗಳಾದ ಸುಜಾ ಕುಶಲಪ್ಪ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ,  ಅರುಣ್ ಮಾಚಯ್ಯ, ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ, ಪ್ರಸ್ತುತ ವಿರಾಜಪೇಟೆಯ ಶಾಸಕರಾದ ಎ.ಎಸ್.ಪೊನ್ನಣ್ಣ ಇವರುಗಳು ಆಗಮಿಸಿದ್ದನ್ನು ಸ್ಮರಿಸಬಹುದು.

 ಸಿನಿ ತಾರೆಯರು

       2010 ರಲ್ಲಿ ರೆಬೆಲ್ ಸ್ಟಾರ್ ಸಿನಿಮಾ ನಟ ಅಂಬರೀಶ್ ಅವರು ಆಗಮಿಸಿ ಎಲ್ಲರ ಮನಸ್ಸು ಸೆಳೆದರು.

 ಮನೋರಂಜನೆ ಕಾರ್ಯಕ್ರಮ

      ಇಷ್ಟು ವರ್ಷ ನಡೆದ ಹಾಕಿ ಪಂದ್ಯಾವಳಿಯಲ್ಲಿ ಕೊಡಗಿನ ಸಾಂಪ್ರದಾಯಿಕ ನೃತ್ಯ, ಡಾಗ್ ಶೋ, ಫೈರ್ ಶೋ, ಗುರುಕಿರಣ್ ನೈಟ್ಸ್, ಸಿಡಿಮದ್ದುಗಳ ಪ್ರದರ್ಶನ, ವಧು-ವರರ ಅನ್ವೇಷಣೆ, ತಿಂಡಿ ತಿನಿಸುಗಳ ಮೇಳ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಕೊಡಗಿನ ಸಾಂಪ್ರದಾಯಿಕ ಬಾಳೋಪಾಟ್ ಕಲಿಕೆ ಎಲ್ಲವೂ ನಡೆಯುತ್ತಿತ್ತು.

  ಅದ್ಭುತ ಬಹುಮಾನ

    ಫೈನಲ್ ನಲ್ಲಿ ಗೆದ್ದವರಿಗೆ ವಧು ವರರು ಹಾಕುವ ಚಿನ್ನದ ಆಭರಣ, ಅತೀಹೆಚ್ಚು ಗೋಲು ಭಾರಿಸಿದವರಿಗೆ ಅಪ್ಪಾಚಿ ಬೈಕ್, ಲಾಟ್ರಿಯ ಮೂಲಕ ಕಾರುಗಳನ್ನು, ಒಡಿ ಕತ್ತಿ ಹಾಗು ಗೆಜ್ಜೆ ತಂಡನ್ನು ಬಹುಮಾನವಾಗಿ ನೀಡಿದರು.

 ಸನ್ಮಾನ

  ಪ್ರಥಮ ಬಾರಿಗೆ 2024ರ ಕುಂಡ್ಯೋಳಂಡ ಹಾಕಿ ಹಬ್ಬದ ಸೆಮಿ ಫೈನಲ್ಸ್ ನಲ್ಲಿ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಆಟಗಾರರು, ತರಬೇತಿದಾರರು, ಹಾಗು ತೀರ್ಪುಗಾರರನ್ನು ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾದ ಚೆಪ್ಪುಡೀರ ಪೂಣಚ್ಚ ಅವರಿಂದ ಸನ್ಮಾನಿಸಲಾಯಿತು.

 ಮುನ್ಸೂಚನೆ

 ಕೌಟುಂಬಿಕ ಹಾಕಿ ಹಬ್ಬದಲ್ಲಿ ಇದುವರೆಗೆ ಅಂತರಾಷ್ಟ್ರೀಯ ತೀರ್ಪುಗಾರರು, ವೀಕ್ಷಕ ವಿವರಣೆಗಾರರು, ಮೈದಾನ ತಯಾರು ಮಾಡುವಂತಹ ತಜ್ಞರು ಹಾಗೂ ಅಂತರಾಷ್ಟ್ರೀಯ ಆಟಗಾರರಾದ ಎಸ್.ಕೆ.ಉತ್ತಪ್ಪ, ಚೀಯಣ್ಣ, ಪೂಣಚ್ಚ, ಅಮರ್ ಅಯ್ಯಮ್ಮ, ಎ.ಬಿ.ಸುಬ್ಬಯ್ಯ, ಬಿ.ಸಿ.ಪೂಣಚ್ಚ, ಬಿ.ಕೆ.ಸುಬ್ರಮಣಿ, ಪೊನ್ನಮ್ಮ, ಲೀಲಾವತಿ, ನಿಲನ್, ಪ್ರಧಾನ್ ಸೋಮಣ್ಣ, ನಿಕಿನ್ ತಿಮ್ಮಯ್ಯ, ನಿತಿನ್ ತಿಮ್ಮಯ್ಯ, ಕುಟ್ಟಪ್ಪ, ಚಂದುರ ಪೂವಣ್ಣ, ಕೆ ಕೆ ಪೂಣಚ್ಚ, ಉತ್ತಯ್ಯ, ಜಗದೀಶ್ ಪೊನ್ನಪ್ಪ, ರೋಹಿಣಿ ಬೋಪಣ್ಣ ಹಾಗೂ ಹಲವಾರು ಅಂತಾರಾಷ್ಟ್ರೀಯ ಹಾಕಿ ಆಟಗಾರರು ಆಡಿದ್ದನ್ನು ಇಲ್ಲಿ ಸ್ಮರಿಸಬಹುದು.

 ಪ್ರಶಸ್ತಿಗಳು

ಪಾಂಡಂಡ ಕುಟ್ಟಪ್ಪನವರಿಗೆ ಪೀಪಲ್ ಆಫ್ ದಿ ಇಯರ್  ಪ್ರಶಸ್ತಿಯು ನವ ದೆಹಲಿಯ ಇಂದ್ರ ಪ್ರಸ್ತ ಸಭಾಂಗಣದಲ್ಲಿ ಜಾನ್ ವಾಲ್ಟರ್ ಹಾಗೂ ಶಭಾನ ಆಸ್ಮಿ(ಸಿನಿ ತಾರೆ) ಅವರುಗಳ ಸಮ್ಮುಖದಲ್ಲಿ ನೀಡಲಾಯಿತು. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭ್ಯವಾಗಿದೆ.

      2018ರಲ್ಲಿ ಕೋವಿಡ್ ಹಾಗೂ ಜಲಪ್ರಳಯದಿಂದ ಕೌಟುಂಬಿಕ ಹಾಕಿ ಸ್ಥಗಿತಗೊಂಡಿತ್ತು. 2022 ರಲ್ಲಿ ಕುಟ್ಟಪ್ಪ ಅವರ ಜ್ಞಾಪಕಾರ್ಥವಾಗಿ ರಿಂಕ್ ಹಾಕಿಯನ್ನು ನಡೆಸಲಾಯಿತು. 2023ರಲ್ಲಿ ಕುಟ್ಟಪ್ಪ ಅವರ ಮಗ ಬೋಪಣ್ಣ ಅವರ ಅಧ್ಯಕ್ಷತೆಯಲ್ಲಿ ಕೌಟುಂಬಿಕ ಹಾಕಿ ಮರುಚಾಲನೆಗೊಂಡಿತ್ತು.

 ಬೆಳ್ಳಿಯ ಸ್ಟಿಕ್ನ ಉದ್ಘಾಟನೆ

     2000ನೇ ಇಸವಿಯಲ್ಲಿ ಚೆಪ್ಪುಡೀರ ಕುಟುಂಬದವರು ಆಯೋಜಿಸಿದ ಪಂದ್ಯಾವಳಿಯಿಂದ, ಪ್ರತಿ ವರ್ಷವೂ ಬೆಳ್ಳಿಯ ಸ್ಟಿಕ್ ಹಾಗೂ ಚೆಂಡಿನಿಂದಲೇ ಪಂದ್ಯಾಟ ಉದ್ಘಾಟನೆಯಾಗಬೇಕೆಂಬ ನಿಯಮ ನಡೆದು ಬರುತ್ತಿದೆ. ಇದು ವಿಶ್ವದಲ್ಲಿ ಎಲ್ಲಿಯೂ ಇಲ್ಲ.

 ಕೊಡವ ಹಾಕಿ ಅಕಾಡೆಮಿ

     ಕುಟ್ಟಪ್ಪ ಅವರ ನಿಧನದ ನಂತರ ಅವರ ಮಗ ಬೋಪಣ್ಣ ಹಾಕಿ ಅಕಾಡೆಮಿಯನ್ನು ಕಾರ್ಯರೂಪಕ್ಕೆ ತಂದರು. 23ನೇ ಹಬ್ಬದಲ್ಲಿ ಕುಟ್ಟಪ್ಪನವರನ್ನು ಸ್ಮರಿಸುವ ಉದ್ದೇಶದಿಂದ ಗೆದ್ದವರಿಗೆ ಬೆಳ್ಳಿಯ ರೋಲಿಂಗ್ ಟ್ರೋಫಿ ನೀಡಿದರು.

 ಲಿಮ್ಕಾ ಹಾಗು ಗಿನ್ನಿಸ್ ದಾಖಲೆ

      ಕೌಟುಂಬಿಕ ಹಾಕಿ ಹಬ್ಬವು ನೆಲ್ಲಮಕ್ಕಡ, ಶಾಂತೆಯಂಡ  ಹಾಗೂ ಕುಪ್ಪಂಡ ಕುಟುಂಬಸ್ಥರು ಆಯೋಜಿಸಿದ್ದ ಸಮಯದಲ್ಲಿ 3 ಬಾರಿ ಲಿಮ್ಕಾ ದಾಖಲೆ ನಿರ್ಮಿಸಿತು. 2024ರ ಕುಂಡ್ಯೋಳಂಡ ಹಾಕಿ ಹಬ್ಬದಲ್ಲಿ 4834 ಆಟಗಾರರು ಆಡಿ, ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿ ಕ್ರೀಡಾಭಿಮಾನಿಗಳ ಮೆಚ್ಚುಗೆ ಗಳಿಸಿ, ಕುಟ್ಟಪ್ಪನವರನ್ನು ನೆನೆಯುತ್ತಾ ಕುಣಿದು ಕುಪ್ಪಳಿಸಿ ಜೈಕಾರ ಹಾಕಿದರು, ಇದು ಮರೆಯಲಾಗದ ಅದ್ಭುತ ಕ್ಷಣ.

  ಈಶ್ವರ ತಂಬುರಾನ್ ನ ಕೃಪೆ

       27 ವರ್ಷದ ಹಿಂದೆ ಕರಡದಲ್ಲಿ ಕೌಟುಂಬಿಕ ಹಾಕಿ ಪ್ರಾರಂಭವಾಯಿತು. ಈ ಕಳೆದುಹೋದ ನೆನಪುಗಳನ್ನು ಇಲ್ಲಿನ ಗ್ರಾಮಸ್ಥರು ಮೆಲುಕು ಹಾಕುತ್ತಾ. ತಂಬುರಾನ್ ಈಶ್ವರನ ಕೃಪೆಯಿಂದ ಹಬ್ಬವು ಇಷ್ಟು ಎತ್ತರಕ್ಕೆ ಬೆಳೆದಿದ್ದನ್ನು ನೆನೆಯುತ್ತಾ. ಈ ವರ್ಷ ಕುಟ್ಟಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಭಾವುಕರಾದರು. ಕುಟ್ಟಪ್ಪನವರ ಪುತ್ಥಳಿಯನ್ನು ಕರಡದಲ್ಲಿ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಿದರು. 

 ಅಂತರಾಷ್ಟ್ರೀಯ ತೀರ್ಪುಗಾರಿಕೆ

     ಈ ಹಾಕಿ ಹಬ್ಬದಲ್ಲಿ ಕುಟ್ಟಪ್ಪನವರ ಮಾರ್ಗದರ್ಶನದಲ್ಲಿ ಕೊಡಗಿನ ತೀರ್ಪುಗಾರರಿಗೆ ಉಚಿತ ತರಬೇತಿ ಶಿಬಿರವನ್ನು ಏರ್ಪಡಿಸಿದ್ದರು. ಅಂತರಾಷ್ಟ್ರೀಯ ತೀರ್ಪುಗಾರರಾದ ಪಳಂಗಪ್ಪ ಹಾಗೂ ವೇಣು ಉತ್ತಪ್ಪನವರು ಉಚಿತವಾಗಿ ತರಬೇತಿ ನೀಡಿ, ಪಂದ್ಯಾವಳಿಯಲ್ಲಿ ತೀರ್ಪುಗಾರರ ತಯಾರಿ ಮಾಡಿದ್ದನ್ನು ಇಲ್ಲಿ ಗಮನಿಸಬಹುದು.

 ಕ್ರೀಡಾ ಶಾಲೆಗೆ ಪ್ರವೇಶ

      ಬಹಳಷ್ಟು ಕಿರಿಯ ಆಟಗಾರರು ಅದ್ಭುತ ಆಟವನ್ನು ಆಡಿ ವಸತಿ, ಕ್ರೀಡಾ ಶಾಲೆಗೆ ಪ್ರವೇಶ ಪಡೆದರು. ಕೆಲವರು ಸರ್ಕಾರಿ ನೌಕರಿಯನ್ನು ಪಡೆದುಕೊಂಡರು, ಇನ್ನು ಕೆಲವು ಯುವಕರು ಸೇನೆಯನ್ನು ಕೂಡ ಸೇರಿದರು.

 ಹೊರಹೊಮ್ಮಿದ ಕ್ರೀಡಾ ತಾರೆಯರು.

 ಈ ಕಳೆದ 24 ವರ್ಷಗಳಿಂದ ಅದೆಷ್ಟೋ ತೀರ್ಪುಗಾರರು, ಅದ್ಭುತ ಆಟಗಾರರು, ವೀಕ್ಷಕ ವಿವರಣೆಗಾರರು ಹೊರ ಹೊಮ್ಮಿದರು. ಅವರಿಗೆ ಆಡುವ ವೇದಿಕೆಯು ಸಿಕ್ಕಿದಂತಾಯಿತು.

 ವಿಶ್ವದ ಭೂಪಟ

    ಕೌಟುಂಬಿಕ ಹಾಕಿಯಿಂದಲೇ ವಿಶ್ವದ ಭೂಪಟದಲ್ಲಿ ಕೊಡಗನ್ನು ಗುರುತಿಸಲಾಯಿತು. ವಿಶ್ವದಲ್ಲೆಡೆ ಪ್ರಚಾರ ಕೂಡ ಆಯಿತು. ಇದುವರೆಗೆ ಅಂದಾಜು 85,000 ಕ್ರೀಡಾಪಟುಗಳು ಆಡಿದ್ದು. 1000ಕ್ಕೂ ಹೆಚ್ಚು ತಾಂತ್ರಿಕ ಸಮಿತಿಯವರು ಕಾರ್ಯನಿರ್ವಹಿಸಿದ್ದು. ಹಾಕಿಯನ್ನು ಹಾಗು ಕೊಡವರನ್ನು ಬಲಿಷ್ಠ ಗೊಳಿಸಿದೆ. ಇದು ಒಂದೇ ವೇದಿಕೆ ವರ್ಷಕ್ಕೊಮ್ಮೆ ಸೇರುವ ಸಂಭ್ರಮದ ದಿನವಾಗಿರುತ್ತದೆ.

ಇದು ಎಂದಿಗೂ ಮರೆಯಲಾಗದ ಕಟುಸತ್ಯ.

 2024ನೇ ಕೌಟುಂಬಿಕ ಹಾಕಿ, ಕುಂಡ್ಯೋಳಂಡ ಕುಟುಂಬ

      24ನೇ ವರ್ಷದ ಹಾಕಿ ಹಬ್ಬವನ್ನು ಕುಂಡ್ಯೋಳಂಡ ಕುಟುಂಬದವರು ವಹಿಸಿದ್ದು. 18 ಕೊಡಗಿನ ಒಲಂಪಿಯನ್ಸ್ ಅವರ ಭಾವಚಿತ್ರವನ್ನು ಅಳವಡಿಸಿದ್ದರು, ಕುಟ್ಟಪ್ಪನವರ ಪುತ್ಥಳಿಯನ್ನು ಐನ್ ಮನೆಯಲ್ಲಿ ನಿರ್ಮಿಸಿದ್ದರು. ಕರ್ನಾಟಕದ ಮುಖ್ಯಮಂತ್ರಿಯಾದ ಶ್ರೀ  ಸಿದ್ದರಾಮಯ್ಯ ಹಾಗೂ ವಿರಾಜಪೇಟೆಯ ಶಾಸಕರಾದ ಎ.ಎಸ್.ಪೊನ್ನಣ್ಣಅವರಿಂದ ಲೋಗೋ ಬಿಡುಗಡೆಗೊಳಿಸಿದರು. ಚಿಕ್ಕ ಕುಟುಂಬವಾದರೂ ಹಾಕಿಯನ್ನು ಬೆಳೆಸಬೇಕು ಎಂಬ ಉದ್ದೇಶದಿಂದ ಬಹಳಷ್ಟು ಪ್ರಯತ್ನ ಪಟ್ಟರು. ಇದಕ್ಕೆ ಕೊಡವ ಹಾಕಿ ಅಕಾಡೆಮಿ ಅಧೀನದಲ್ಲಿ ಊರಿನವರು ಹಾಗು ಹಾಕಿ ಪ್ರಿಯರು ಸೇರಿ ಪಂದ್ಯಾಟವನ್ನು ಯಶಸ್ವಿಗೊಳಿಸಿದರು ಹಾಗೂ ಯುಗ ಪುರುಷ ಕುಟ್ಟಪ್ಪ ಅವರ ಹೆಸರು ಅಜರಾಮರವಾಗಿ ಉಳಿಸಿದರು.

 2025ರ ಮುದ್ದಂಡ ಕಪ್

       25ನೇ ಕೌಟುಂಬಿಕ ಹಾಕಿ ಹಬ್ಬದ ಜವಾಬ್ದಾರಿಯನ್ನು ಮುದ್ದಂಡ ಕುಟುಂಬವು ವಹಿಸಲಿದ್ದು, ಇದು ಕೊಡವ ಹಾಕಿ ಅಕಾಡೆಮಿ ಅಧೀನದಲ್ಲಿ ಇದೇ ಮಾರ್ಚ್ 28 ರಿಂದ ಮಡಿಕೇರಿಯಲ್ಲಿ ಆರಂಭಗೊಳ್ಳಲಿದೆ. ಎಲ್ಲಾ ಕೊಡಗಿನ ಸಮಸ್ತ ಕ್ರೀಡಾಭಿಮಾನಿಗಳು ಹಾಗೂ ಆಟಗಾರರ ಪರವಾಗಿ ಯಶಸ್ಸನ್ನು ಕಾಣಲಿ ಎಂದು ಹಾರೈಸುತ್ತೇನೆ.

“ಇದು ಕೌಟುಂಬಿಕ ಹಾಕಿ ನಡೆದು ಬಂದ ಹಾದಿ”

 ಕೊಡವಾಮೆ ಬಾಳೊ

   ಚೆಪ್ಪುಡೀರ ಕಾರ್ಯಪ್ಪ, ವೀಕ್ಷಕ ವಿವರಣೆಗಾರ, ಹಾಗು ಬರಹಗಾರ

  ದೂರವಾಣಿ: 9900369212

Post navigation

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್‌
ನಾಳೆ ಮಡಿಕೇರಿಯಲ್ಲಿ ಪೊಲೀಸರ ಓಟ…

Related Posts

ಭಾಗಮಂಡಲ ಪ್ರವಾಹ ಪ್ರದೇಶಕ್ಕೆ ಉಪವಿಭಾಗಾಧಿಕಾರಿ ಭೇಟಿ

ಭಾಗಮಂಡಲ ಪ್ರವಾಹ ಪ್ರದೇಶಕ್ಕೆ ಉಪವಿಭಾಗಾಧಿಕಾರಿ ಭೇಟಿ

29/05/202529/05/2025nadubadenews@gmail.com
ಮುದ್ದಂಡ ಕಪ್ ಹಾಕಿ ಉತ್ಸವ : ಏ.23 ರಂದು ನಡೆದ ಪುರುಷರ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯಾವಳಿಯ ವಿಜೇತರ ವಿವರ

ಮುದ್ದಂಡ ಕಪ್ ಹಾಕಿ ಉತ್ಸವ : ಏ.23 ರಂದು ನಡೆದ ಪುರುಷರ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯಾವಳಿಯ ವಿಜೇತರ ವಿವರ

23/04/202523/04/2025nadubadenews@gmail.com
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ…

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ…

13/05/202513/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version