Site icon nadubadenews.com

ಕೊಡವಾಮೆರ ಒಕ್ಕಟ್ಟ್‌ಲ್‌ ಚೋತ ಸಮಾಜಕಾರ, ಬೆಂಗಳೂರ್ ಸಮಾಜ, ಯೂತ್‌ಕೌನ್ಸಿಲ್‌ ಅಡ್ವೈಸರಿ ಬೋರ್ಡ್‌ರ ಎಲ್ಲಾ ಪಧಾದಿಕಾರಿಯಡ ರಾಜೀಮೆ…

Spread the love

ಬೆಂಗಳುರ್‌, ಜ.10: ಇಂದ್‌ ಕೊಡವಾಮೆರ ಬೇರ್‌ಕ್‌ ಚೆನ್ನಂಗಾಳ್‌ ಕೈ ಇಟ್ಟಿತ್‌, ತಾರಾವರಿ ರೀತಿಲ್‌ ಕೊಡವಳ ಅಂವುಂಕಿ ಬೆಪ್ಪಕ್‌ ನೋಟ್ಯಂಡುಳ್ಳಲ್ಲಿ, ಕೊಡವಡ ನಲ್ಲಾಮೆಕ್ಂದ್‌ ಉದ್‌ಚಿ ಬಂದ ಕೊಡವ ಸಮಾಜಕಾರ ಎಲ್ಲಾರ್ನೂ ಒಕ್ಕಚೆ ಕೂಟ್ಯಂಡ್‌, ನಂಗಡ ತನತ್‌ನ ಕಾತ್‌ ಬೆಪ್ಪದ್‌ ಬುಟ್ಟಿತ್‌ ತಂಗಡೋಟ್ಟ್‌ಕ್‌ ಮುಂಡತೇ ಅಳ್ತಾನ ನೋಟಿತ್‌, ಬೆಂಗಳೂರ್‌ ಕೊಡವ ಸಮಾಜ ಯೂತ್‌ ಕೌನ್ಸಿಲ್‌ರ ಅಡ್ವೈಸರೀ ಬೋರ್ಡ್‌ರ ಎಲ್ಲಾ ಪಧಾದಿಕಾರಿಯ ತಂಗಡ ಜವಾಬ್ದಾರಿಕ್‌ ರಾಜೀನಾಮೆ ಕೊಡ್ತಿತ್ಂದ್‌ ಅರ್ಂಜಿ ಬಂದಿತ್.‌

ಕೊಡವ ಸಮಾಜತ್‌ರ ಪೆರಿಯ ಅಣ್ಣಂಡ ಪೋಲೆ ಉಳ್ಳ ಕೊಡವ ಸಮಾಜ ಬೆಂಗಳೂರ್‌ ಇಂದೆತ ಈ ನ್ಯಾರತ್‌ ಕೊಡವಾಮೆಕ್‌ ತಾಂಗಿ ನಿಕ್ಕೊಂಡಿಂಜತ್‌, ಅಲ್ಲತೆ  ಕೊಡವ ಸಮಾಜ ಒಕ್ಕೂಟತ್‌ಲೂ ತಂಗಡ ಬಲ್ಯ ಪುಡ್ತ ಉಳ್ಳ ಬೆಂಗಳೂರ್‌ ಕೊಡವ ಸಮಾಜ, ಫೆಡರೇಶನ್‌ಕಾರಕ್‌ ಎಣ್ಣಿತ್‌ ಎಲ್ಲಾ  ಕೊಡವ ಸಮಾಜ, ಸಂಘಟನೆಯ ಕೂಡ್‌ನನೆಕೆ ಕೊಡವಾಮೆಕಾಯಿತ್‌ ನೈಪ ಎಲ್ಲಾರ್ನೂ ಕಾಕಿ ಕೂಟಿತ್‌, ಕೊಡವಾಮೆರ ಮೀದ ಆಯಂಡುಳ್ಳ ಇಂತ ಕೇತರೆನ ಎಲ್ಲಾ ರೀತಿಲೂ ತಡ್ತ್‌ ಬೆಪ್ಪಕ್‌, ಒತ್ತೋರ್ಮೆಲ್ ಪೇಚಾಡೋಂಡಿಂಜತ್.‌ ಆಚೇಂಗಿ ಬೆಂಗಳೂರ್‌ ಕೊಡವ ಸಮಾಜ ಆಡ್‌, ಫೆಡರೇಷನ್‌ ಆಡ್‌ ಈ ನ್‌ಟ್ಟ್‌ಲ್‌ ಒಂದೂ ಮಾಡತೆ ಬರೀ ಮಾದ್ಯಮ ಹೇಳಿಕೆಲ್‌ ಕಾಲ ಕೈಚಂಡುಂಡ್‌. ಫೆಡರೇಷನ್‌ ಅಧ್ಯಕ್ಷ, ತನ್ನ ಪ್ರಶ್ನೆ ಕೇಪೈಂಗಳ ಉಢಾಫೆಲ್‌ ತಕ್ಕ್‌ ಪರ್ಂದಂಡ್‌, ನಂಗಕೂ ಇದಂಗೂ ಸಮ್ಮಂಧ ಇಲ್ಲೆ ಎಣ್ಣುವನ್ನಕೆ ಕಳ್ಚಂಡಿಂಜಕಲೂ, ಬೆಂಗಳೂರ್‌ ಕೊಡವ ಸಮಾಜವೂ ಓರೇ ಓರ್‌ ಚೌಟ್‌ ಮಿಂಞಕ್‌ ಎಡ್ಕತೆ ಅಳ್ತದ್‌ ಸೆರಿಯಲ್ಲ. ಇಂದಿಕ್ಕ ಬೆಂಗಳೂರ್‌ ಕೊಡವ ಸಮಾಜನ ಜನ  ಸಾಮಾಜಿಕ ಮಾಧ್ಯಮತ್‌ ಕೊಸ್ನೆ ಕೇಪಕ್‌ ಶುರು ಮಾಡಿತ್‌. ಇದಂಗ್‌ ನಂಗಳಿಂಜ ಉತ್ತರ ಇಲ್ಲೆ. ಜನಡ ಇರಾದೆಕೊತ್ತನ್ನಕೆ ನಂಗ ಕೆಲಸ ಮಾಡೋಕ್‌ ಚೋತಿತುಳ್ಳಲ್ಲಿ, ನಂಗ ಈ ಜಾಗತ್‌ ಇಪ್ಪದ್‌ ನಲ್ಲದಲ್ಲಾಂದ್‌ ಗ್ಯಾನ ಮಾಡಿತ್‌ ಅಂಜಾಳ್‌ ಉಳ್ಳ ಅಡ್ವೈಸರೀ ಬೋರ್ಡ್‌ರ ಎಲ್ಲಾ ಸದಸ್ಯಂಗ ರಾಜೀನಾಮೆ ಕೊಡ್ಪಕ್‌ ಮಿಂಞಕ್‌ ಬಂದಿತ್ಂದ್ ಅರ್ಂಜಿ ಬಂದಿತ್.‌

ದಾರ್‌ ಈ ಯೂತ್‌ ಕೌನ್ಸಿಲ್‌ ಅಡ್ವೈಸರೀ ಬೋರ್ಡ್‌…?!!, ಬೆಂಗಳೂರ್‌ ಕೊಡವ ಸಮಾಜ ಯೂತ್‌ ಕೌನ್ಸಿಲ್‌ ತಾಂಡದೇ ಆನ ಪೆದ, ಪೊದತ್‌ನ ನೇಡಿ ಬೆಚ್ಚಿತ್‌. ಇಡೀ ಕೊಡವಾಮೆ ಪುದಿಯ ದಿಕ್ಕ್‌ಲ್‌ ನಡ್ಪಕೂ, ಪಳಿಯಾಮೆರ ಪದ್ದತಿನ ಪುನಬೊಳಿಕ್‌ ಕೊಂಡಬಪ್ಪಲ್ಲಿ ಬಾರೀ ನೈಚಿತ್‌, ಸಾಧನೆ ಮಾಡಿತ್‌, ಓರ್‌ ಪೋಲ್‌ ಅರಿವು ಒಂಡಬಂದಿತ್.‌ ಬೆಂಗಳೂರ್‌ ಕೊಡವ ಸಮಾಜ ಎನ್ನತದೇ ಆಯಿಮೆ ಕೊಯಿಮೆ ಮಾಡ್ನಕಲೂ ಅದಂಡ ಬೆಂಬರಿಯತ್‌ರ ನೈಪು, ಯೂತ್‌ ಕೌನ್ಸಿಲ್‌ ಮಕ್ಕ.  ಇನ್ನತ ಯೂತ್‌ ಕೌನ್ಸಿಲ್‌ಕ್‌ ಕೊಂಡಿ ಆಯಿತ್‌ ಉಳ್ಳದೇ  ಅಂಜಾಳ್‌ರ ಅಡ್ವೈಸರೀ ಬೋರ್ಡ್‌. ‌

ಈ ಅಡ್ವೈಸರೀ ಬೋರ್ಡ್‌, ಬಾಲೆಕಾರ ಮಕ್ಕ ಏದ್‌, ಎಕ್ಕ, ಎಂತ ಮಾಡೋಂಡು, ಯೂತ್‌ ಕೌನ್ಸಿಲ್‌ರ ನಡ್ಪು, ನಡೆರ ಏತುಲ್‌, ಅಳ್ತ್‌ ತಕ್ಕ್‌, ಬಾಕ್‌ ಮಾಡಿತ್‌, ಕುಯ್ಯೋಡೆ ಬೇರ್‌ಚಿಟ್ಟಿತ್‌, ಕಾಲಕೊತ್ತನ್ನಕೆ ಕೊಡ್ಪ, ಅವಶ್ಯ ಅರಿವು, ಇಂದ್‌ ಬೆಂಗಳೂರ್‌ ಕೊಡವ ಸಮಾಜ ಯೂತ್‌ ಕೌನ್ಸಿಲ್‌ ಇಚ್ಚಕೋರ್‌ ಗಟ್ಟಿಮುಟ್ಟಾಯಿತ್‌, ಕೊಡವಾಮೆಕ್‌ ತಾಂಗಿ ನಿಪ್ಪಕ್‌ ಏತು. ಇದ್‌ ಪಂಡ್‌ತೊಟ್ಟ್‌ ನಡ್ಂದಂಡುಳ್ಳದ್.‌ 

ಆಚೇಂಗಿಂದ್‌ ಕೊಡವಾಮೆರ ಬೇರಾನ ನಂಗಡ ಪೊರಪಾಡ್‌ನ ಬೆದ್‌ಕನದೇ ಅಲ್ಲತೆ, ಕೊಡವಡ ಮೀದ ಪೊಟ್ಟ್‌ ಪರ್ಂದಂಡ್‌, ಎಲ್ಲಲ್ಲಿಯೂ ಸುತ್ತಿಯಂಡ್‌, ಪೋರಮೆ ಮಾಡಿಯಂಡ್‌ ಉಂಡೇಂಗೂ  ನಂಗ ನೋಟ್ಯಂಡ್‌ ಕೈ ಕಟ್ಟಿತ್‌ ಅಳ್ತಂಡದ್‌ ಸೆರಿಯಲ್ಲ. ನಂಗ ಮುಂಡತೇ ಅಳ್ಪಾಂಗಿಂಜ ತೆರ್ಪ ಇಂಜಿತ್‌, ಕೊಡವಾಮೆಕಾಯಿತ್‌ ನೈಪ ಎಣ್ಣುವ ತೀರ್ಮಾನಕ್‌ ಅಡ್ವೈಸರೀ ಬೋರ್ಡ್‌ರ ಎಲ್ಲಾ ಸದಸ್ಯಂಗ ಬಂದಿತ್‌ಲೋ

Exit mobile version