ಪೊನ್ನಂಪೇಟೆ, ಜ.13: ಕಳೆದ 35 ವರ್ಷಗಳಿಂದ ಕೊಡವರ ಸಂವಿಧಾನ ಬದ್ದ ಹಕ್ಕಿಗಾಗಿ ಹೋರಾಡುತ್ತಿರುವ ನಂದಿನೆರವಂಡ ನಾಚಪ್ಪ ಅವರ ಹೋರಾಟ ಮತ್ತು ಕೊಡವ ಹಕ್ಕನ್ನು ವಿರೋಧಿಸುತ್ತಿರುವ ದುಷ್ಟ ಕೂಟದ ಸಂಚಿನ ಭಾಗವೇ ಇಂದು ನಾಚಪ್ಪ ಅವರ ವಿರುದ್ದ ಪ್ರಕರಣ ಎಂದು ಸಿ.ಎನ್.ಸಿ ಸದಸ್ಯರು ಆರೋಪಿಸಿದ್ದಾರೆ.
ಸುದ್ದಿಘೋಷ್ಟಿಯಲ್ಲಿ ಮಾತನಾಡಿದ ಸಂಘಟನೆಯ ಕಾರ್ಯಕರ್ತರಾದ ಕಾಂಡೆರ ಸುರೇಶ್, ಪಾರುವಂಗಡ ನವೀನ್, ಅಪ್ಪೆಂಗಡ ಮಾಲೆ ಪೂಣಚ್ಚ ಅವರುಗಳು, ಕೊಡವರ ಹಕ್ಕು ಮತ್ತು ಸಂಸ್ಖೃತಿಯ ಅವಹೇಳನ ಮಾಡುವ ಷಡ್ಯಂತ್ರದ ಭಾಗವಾಗಿ ನಾಚಪ್ಪ ಅವರ ವಿರುದ್ದ ಅಪವಾದ ಹೊರಿಸುತಿದ್ದು, ನಾಚಪ್ಪ ಅವರು ಹೇಳಿದ್ದು ಇತಿಹಾಸದ ಸತ್ಯವಾಗಿದ್ದು, ಇದರಲ್ಲಿ ಯಾರನ್ನೂ ಅಗುರಿಯಾಗಿಸಿ ಅಪವಾದಿಸಿಲ್ಲ ಎಂದಿದ್ದಾರೆ.
ನಾಚಪ್ಪ ಅವರ ಮೇಲೆ ಒತ್ತಾಯ ಪೂರ್ವಕವಾಗಿ ಹಾಕಿರುವ ಪ್ರಕರಣವನ್ನು ಕೈಬಿಡದಿದ್ದರೆ, ಇಡೀ ಕೊಡವ ಸಮುದಾಯದ ಸಹಕಾರದೊಂದಿಗೆ ತೀವೃ ಪ್ರತಿಭಟನೆಗೆ ಕರೆಕೊಡಲಿದ್ದೇವೆ ಎಂದು ಎಚ್ಚರಿಸಿದರು.
ಕೊಡವರು ತಮ್ಮ ಸಂವಿಧಾನಬಧದ್ದವಾಗಿರುವ ಹಕ್ಕನ್ನು ಪ್ರತಿಪಾದಿಸಿದ ಕಾರಣಕ್ಕೆ ನಾಚಪ್ಪ ಅವರ ವಿರುದ್ದ ಪ್ರಕರಣ ದಾಖಲಿಸಲು ಪ್ರತಿಪಾದಿಸಿದ ಕೂಟವು ಕಳೆದ ಅಷ್ಟೂ ವರ್ಷಗಳಿಂದ ಕೊಡವ ಏಳಿಗೆಯನ್ನು ಸಹಿಸದೆ ಪಿತೂರಿ ನಡೆಸುತ್ತಲೇ ಇದ್ದು, ಇದಕ್ಕೆ ಉದಾಹರಣೆಯಾಗಿ ಕೆಳಗಿನ ಅಂಶಗಳನ್ನು ನೀಡುರುವ ಸಿ.ಎನ್.ಸಿ. ಕಾರ್ಯಕರ್ತರು,
1.ಕೊಡವರ ಪುಣ್ಯಕ್ಷೇತ್ರ ತಲಕಾವೇರಿ ಪ್ರವೇಶಕ್ಕೆ ಕೊಡವರಿಗೆ ನಿರ್ಬಂಧ ಯತ್ನ.
2. ದೇವಾಟ್ ಪರಂಬು ಕೊಡವ ನರಮೇಧ ಸ್ಮಾರಕ ಭಗ್ನ.
3. ವೀರ ಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆಗೆ ಸೆಗಣಿ ಮೆತ್ತಿದ್ದು.
4. ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ್ದು.
5. ಜನರಲ್ ಕೆ.ಎಸ್.ತಿಮ್ಮಯ್ಯನವರ ಪ್ರತಿಮೆಯನ್ನು ಕೆಡವಿದ್ದು.
6. ಕೊಡವರ ನಾಮಪದವನ್ನು ರಾಜ್ಯಪತ್ರದಲ್ಲಿ ಪ್ರಕಟವಾಗದಂತೆ ತಡೆದಿದ್ದು.
7. ಕೊಡವರ ವಿಶೇಷ ತೋಕ್ (ಕೋವಿ) ಹಕ್ಕನ್ನು ಕಸಿದುಕೊಳ್ಳಲು ನ್ಯಾಯಾಲಯದಲ್ಲಿ ತಕರಾರು. ಅರ್ಜಿ ಸಲ್ಲಿಸಿದ್ದು.
8. ಕೋವಿಯ ವಿನಾಯಿತಿ ಪತ್ರ ಕೊಡವರಿಗೆ ಲಭ್ಯವಾಗದಂತೆ ತಡೆಯಲು ಪ್ರಯತ್ನಿಸಿದ್ದು.
9. ಕೊಡವ ಬೈ ರೇಸ್ ವಿನಾಯಿತಿ ಪತ್ರವನ್ನು ಗೌಡ ಬೈ ರೇಸ್ ಎಂದು ಫೋರ್ಜರಿ ಮಾಡಲು ಗೃಹ ಇಲಾಖೆಯ ದಾರಿ ತಪ್ಪಿಸಿದ್ದು.
10. ಹೆಮ್ಮೆಯ ಸೇನಾನಿ ಭಾರತ ಸೇನೆಯ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರನ್ನು ಸಾಮಾಜಿಕ ಜಾಲತಾಣದಲ್ಲಿ ಹೀನಾಯವಾಗಿ ನಿಂದಿಸಿ ದೇಶದ್ರೋಹ ಎಸಗಿದ್ದು
11. ಕೊಡವ ರೈತರಿಗೆ 2008ರಲ್ಲಿ ನಕ್ಸಲ್ ಬೆದರಿಕೆ ಪತ್ರ ಕಳುಹಿಸಿದ್ದು.
12. ದಕ್ಷಿಣ ಕೊಡಗಿನಲ್ಲಿ ರೈತ ಕೊಡವರ ಮೇಲೆ ಅನ್ಯರನ್ನು ಪ್ರೇರೇಪಿಸಿ ಅಟ್ರಾಸಿಟಿ ಕೇಸು ಹಾಕಿದ್ದು.
13. ಕೊಡವರ ಎಸ್.ಟಿ.ಟ್ಯಾಗ್ ಹಕ್ಕಿಗೆ ನಿರಂತರ ತಡೆವೊಡ್ಡುತ್ತಾ ಬಂದಿದ್ದು.
14. ಕೊಡವರ ಸಾಂಪ್ರದಾಯಿಕ ಉಡುಗೆಯಾದ ಕುಪ್ಯ ಚೇಲೆ, ಕೊಡವತಿ ಪೊಡಿಯ( ಸೀರೆ) ಬಗ್ಗೆ ನಿಂದಿಸಿ ಅಸ್ಪೃಶ್ಯತೆ ಆಚರಣೆ ಮಾಡಿದ್ದು.
15. ಕೊಡವರ ಹಬ್ಬ ಹರಿದಿನಗಳು ಮತ್ತು ಜಾನಪದ ಹಾಡುಗಳು ಹಾಗು ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ನಕಲು ಮಾಡಿ ತಾವೇ ಕೊಡವರೆಂದು ಪರಾಕಾಯ ಪ್ರವೇಶ ಮಾಡಿದ್ದು.
16. ಬೆಂಗಳೂರು – ಮಂಡ್ಯ ಕನ್ನಡಿಗರು ಮತ್ತು ಒಕ್ಕಲಿಗ ಸಮುದಾಯಕ್ಕೆ ಕೊಡವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ನಿರಂತರ ಅಪಪ್ರಚಾರದಲ್ಲಿ ತೊಡಗಿದ್ದು.
17. ಕೊಡವತಿ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿ ಅಪಪ್ರಚಾರ ಮಾಡಿರುವುದು.
18. ಕೊಡವರ ಎಸ್.ಟಿ.ಟ್ಯಾಗ್ ಹೋರಾಟದ ಪರವಾಗಿ ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞ ಡಾ|| ಸುಬ್ರಮಣ್ಯನ್ ಸ್ವಾಮಿಯವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಇಂಫೀಡಿಂಗ್ ಅರ್ಜಿಯನ್ನು ಸಲ್ಲಿಸಿ ನಿರಂತರವಾಗಿ ಕಿರುಕುಳ ನೀಡುತ್ತಿರುವುದು.
19. 235 ವರ್ಷಗಳ ಹಿಂದೆ ದೇವಾಟ್ ಪರಂಬು ಹತ್ಯಾಕಾಂಡದ ನಂತರ ಅರೆಭಾಷೆ ಗೌಡ ಜನಾಂಗದವರು ಸುಳ್ಯದಿಂದ ಬಂದು ಕೊಡಗಿನ ಕೊಡವ ಜನಾಂಗದ ಆಸ್ತಿಯಲ್ಲಿ ನೆಲೆನಿಂತವರಾಗಿರುತ್ತಾರೆ. ಇದು ಇತಿಹಾಸ.
20. ಕೊಡವರನ್ನು ಅವಮಾನಿಸಿ ಯಾತನೆ ಪಡುವಂತೆ ಮಾಡಲು ಟಿಪ್ಪು ಜಯಂತಿಗೆ ಕುಮ್ಮಕ್ಕು ನೀಡಿದ್ದು,
21. ಕಟ್ಟೆಮಾಡು ದೇವಸ್ಥಾನದಲ್ಲಿ ಕೊಡವರ ಸಾಂಪ್ರದಾಯಿಕ ಉಡುಪಿನಲ್ಲಿ ಬಂದ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದು.
22. ನಾರ್ದನ್ ಕಮಾಂಡಿನ ಮುಖ್ಯಸ್ಥರಾಗಿದ್ದ ಭಾರತದ ದಂಡನಾಯಕರ ಹುದ್ದೆಗೆ ಮುಂಚೂಣಿಯಲ್ಲಿದ್ದ ಅತ್ಯಂತ ಗೌರವಾನ್ವಿತ ಸೇನಾಧಿಕಾರಿ ಜನರಲ್ ಬಿದ್ದಂಡ ಸಿ ನಂದಾರವರ ಮೇಲೆ 1997 ರಲ್ಲಿ ಸಂಪಾಜೆಯಲ್ಲಿ ಸುಳ್ಳು ಕೇಸು ಹಾಕಿಸಿ ಎಫ್.ಐ.ಆರ್.ದಾಖಲಿಸಿದ್ದು.
23. ಸಿ.ಎನ್.ಸಿ. ಅಧ್ಯಕ್ಷ ನಾಚಪ್ಪರವರನ್ನು ಹತ್ಯೆಗೆಯ್ಯಲು ಪೊಲೀಸ್ ಎಂಟರಿಗೆ ಸಂಚು ರೂಪಿಸಿದ್ದು.
24. ಜೆ.ಎನ್.ಯು, ಹಂಪಿ ವಿಶ್ವವಿದ್ಯಾನಿಲಯದ ನಕ್ಷಲರ ಪ್ರಭಾವ ಬಳಸಿ ಕೊಡವರ ವಿರುದ್ಧ ಸುಳ್ಳು ಅಪಚಾರದ ಇತಿಹಾಸ ಸೃಷ್ಟಿಸಿದ್ದು.
25. ಕೊಡವ ಸಂಸ್ಕೃತಿ, ಭಾಷೆಯ ಏಳಿಗೆಗಾಗಿ ಸ್ಥಾಪಿತವಾದ ಮಡಿಕೇರಿ ಆಕಾಶವಾಣಿಯಲ್ಲಿ ಇಂದಿರಗಜರಾಜರನ್ನು ಬಳಸಿಕೊಂಡು ಕೊಡವರ ವಿರುದ್ಧ ನಾಲಕ್ಕು ಗಂಟೆಗಳ ಸುಳ್ಳು ಡಾಕ್ಯುಮೆಂಟರಿ ಮಾಡಿ ಅದನ್ನು ಪ್ರಾಚ್ಯ ದಾಖಲಾತಿ ಇಲಾಖೆಗೆ ರವಾನಿಸಿದ್ದು.
26. ಯಾವುದೇ ಪಕ್ಷದವರಾದರೂ ಕೊಡವ ನಾಯಕರ ತೇಜೋವಧೆ ಮಾಡಿ ಅವರನ್ನು ವಿಫಲ ನಾಯಕರೆಂದು ಬಿಂಬಿಸುವುದು.
27. ಕೊಡವರ ಎಲ್ಲ ಗ್ರಾಮಗಳ ಪುರಾತನ ಗ್ರಾಮ ದೇವರ ಹೆಸರುಗಳನ್ನು ಬದಲಿಸಿ ಅವುಗಳನ್ನು ಬಲವಂತವಾಗಿ ಕಬ್ಬಾ ಮಾಡಲು ಸಂಚು ಹೂಡುವುದು. ಉದಾಹರಣೆಗೆ ಕಟ್ಟೆಮಾಡುವಿನ ಮಾದೇವರ ಹೆಸರನ್ನು ಮೃತ್ಯುಂಜಯ ದೇವಸ್ಥಾನವೆಂದು ಬದಲಿಸಿ ಮಂಕು ಬೂದಿ ಎರಚಿದ್ದು.
28. ಪನ್ನಂಗಾಲತಮ್ಮೆ ಮತ್ತು ಇತರ ಪುರಾತನ ಇತಿಹಾಸವಿರುವ ದೇವಸ್ಥಾನಗಳನ್ನು ಕಬ್ಬಾ ಮಾಡಲು ಸಂಚು ಹಾಕುತ್ತಿರುವುದು.
29. ಕೊಡಗಿನ ಎರಡನೇ ಪುಣ್ಯಕ್ಷೇತ್ರ ಬಲಂಬೇರಿಯಲ್ಲಿ ತಲಕಾವೇರಿ ತೀರ್ಥೋದ್ಭವದ ಮಾರನೇ ದಿನ ನಡೆಯುವ ಜಾತ್ರೆಯಲ್ಲಿ (ಬಲಂಬೇರಿ ಕುಳಿಪೊ) ಬಲವಂತದಿಂದ ಆ ಕ್ಷೇತ್ರಕ್ಕೆ ಅಪರಿಚಿತವಾದ ಕೊಡವೇತರ ಸಾಂಸ್ಕೃತಿಕ ಚಟುವಟಿಕೆಯನ್ನು ಆಯೋಜಿಸಿ ಸಾಂಸ್ಕೃತಿಕ ದುರಾಕ್ರಮಣ ಮಾಡುವುದು.
30. ಸರಕಾರಿ ದಾಖಲೆಗಳಲ್ಲಿ ಕೊಡಗನ್ನು ಮಡಿಕೇರಿ ಜಿಲ್ಲೆಯೆಂದು ಬಿಂಬಿಸಲು ಸಾಧ್ಯವೇರಿನಲ್ಲಿ ಕೈಚಳಕ ಮಾಡಿರುವುದು.
ಈ ಮೂವತ್ತು ಅಂಶಗಳು ಮಾತ್ರ ಅಲ್ಲದೆ, ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಕೊಡವರ ಹಿತಾಶಕ್ತಿಗೆ ವಿರುದ್ದವಾಗಿ ನಡೆಯುತ್ತಿರುವ ಈ ದುಷ್ಟಕೂಟವು, ಕೊಡಗಿನಲ್ಲಿ ಜಾತಿ ಜನಾಂಗಗಳ ನಡುವೆ ವೈಶಮ್ಯಬೆಳಸಲು ಸಲ್ಲದ ವಿವಾದಗಳನ್ನು ಸೃಷ್ಟಿಸುತಿದ್ದು ಇದನ್ನು ಇಲಾಖೆ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಪ್ರಪಂಚ ಖಂಡ ಮಹಾನ್ ಯೋಧರಿಗೆ ಅವಮಾನ ಮಾಡುವ ದೇಶದ್ರೋಹಿಗೆ ಒಂದೇದಿನದಲ್ಲಿ ಜಾಮೀನು ಮಂಜೂರಾದರೆ, ಇಡೀ ಜನಾಂಗದ ಅಸ್ತಿತ್ವ ಮತ್ತು ಹಕ್ಕಿಗಾಗಿ ಹೋರಾಡುವ ನಾಚಪ್ಪ ಅವರಿಗೆ ಜಾಮೀನುರಹಿತ ಪ್ರಕರಣ ದಾಖಲಿಸಲಾಗಿದೆ. ಇಲಾಖೆಯ ಈ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಅವರು ಹೇಳಿದ್ದಾರೆ.