
ವಿರಾಜಪೇಟೆ,ಏ.21: 2025-30ರ ಆವಧಿಗೆ ಕೊಡಗು ಹೆಗ್ಗಡೆ ಸಮಾಜದ ನೂತನ ಅಧ್ಯಕ್ಷರಾಗಿ ಕೊರಕುಟ್ಟಿರ ಸರಾ ಚಂಗಪ್ಪ, ಉಪಾಧ್ಯಕ್ಷರಾಗಿ ಚರ್ಮಂಡ ಅಪ್ಪುಣು ಪೂವಯ್ಯ, ಗೌರವ ಕಾರ್ಯದರ್ಶಿಯಾಗಿ ಪಡಿಞಾರಂಡ ಪ್ರಭು ಕುಮಾರ್, ಕೋಶಾಧ್ಯಕ್ಷರಾಗಿ ಕೊರಂಡ ಪ್ರಕಾಶ್ ನಾಣಯ್ಯನವರನ್ನು ಅವಿರೋಧವಾಗಿ ಅಯ್ಕೆ ಮಾಡಿದರು ನಿರ್ದೆಶಕರುಗಳಾಗಿ ಕೊಂಗೇಪಂಡ ರವಿ, ಕೊಪ್ಪಡ ಪಟ್ಟು ಪಳಂಗಪ್ಪ, ಪಾನಿಕುಟ್ಟಿರ ಕುಟ್ಟಪ್ಪ, ತಂಬಂಡ ಮಂಜುನಾಥ್, ಕೊಕ್ಕೇರ ಜಗನಾಥ್, ತೊರೇರ ರಾಜ ಪೂವಯ್ಯ, ಪಂದಿಕಂಡ ಕುಶದಿನೇಶ್, ಚಳಿಯಂಡ ಕಮಲಾ ಉತ್ತಯ್ಯ, ಮೂರೀರ ಶಾಂತಿ, ಪೊಟ್ಟಂಡ ವಸಂತಿ ಗಣೇಶ್ ಆಯ್ಕೆಯಾದರು. ಕೊಡಗು ಹೆಗ್ಗಡೆ ಸಮಾಜದ ನಿರ್ಗಮಿತ ಅಧ್ಯಕ್ಷರಾದ ಪಡಿಞಾರಂಡ ಅಯ್ಯಪ್ಪನವರ ಉಸ್ತುವಾರಿಯಲ್ಲಿ ಬಿಟ್ಟಂಗಾಲ ಕೊಡಗು ಹೆಗ್ಗಡೆ ಸಮಾಜದಲ್ಲಿ ವಿವಿಧ ವಲಯಗಳಿಂದ ಅಯ್ಕೆಯಾದ ಹದಿನಾಲ್ಕು ಮಂದಿ ಚುನಾಯಿತ ಪ್ರತಿನಿಧಿಗಳು.
ನಿರ್ಗಮಿತ ಅಧ್ಯಕ್ಷರಾದ ಪಡಿಞಾರಂಡ ಅಯ್ಯಪ್ಪನವರು ನೂತನವಾಗಿ ಅಯ್ಕೆಯಾದ ಅಧ್ಯಕ್ಷರಾದ ಕೊರಕುಟ್ಟಿರ ಸರ ಚಂಗಪ್ಪನವರಿಗೆ ಅಧಿಕಾರ ಹಸ್ತಾಂತರಿಸಿದರು. ನಂತರ ಸರ ಚಂಗಪ್ಪ ನವರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಅಡಳಿತ ಮಂಡಳಿಯ ಸಭೆಯಲ್ಲಿ ಕ್ರೀಡಾ ಕ್ಷೇತ್ರದಿಂದ ಪಂದಿಕಂಡ ನಾಗೇಶ್, ಅಡಳಿತ ಮಂಡಳಿಯ ಲೆಕ್ಕಪರಿಶೋಧನೆ ಮತ್ತು ಅಂತರಿಕ ವ್ಯವಹಾರದ ಮೇಲುಸ್ತುವಾರಿ ದೃಷ್ಟಿಯಿಂದ ತೊರೇರ ಮುದ್ದಯ್ಯ, ಮಹಿಳಾ ಕ್ಷೇತ್ರದಿಂದ ಮಳ್ಳಡ ಸುಥಾರವರ ಅಯ್ಕೆ ಪ್ರಕ್ರಿಯೆ ನಡೆಯಿತು. ನಂತರ ಅಧ್ಯಕ್ಷರಾದ ಕೊರಕುಟ್ಟಿರ ಸರಾಚಂಗಪ್ಪ, ಮುಂದಿನ ಅಡಳಿತ ಅವಧಿಯಲ್ಲಿ ಜನಾಂಗ ಭಾಂದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರ ಸಹಕಾರದೊಂದಿಗೆ ಸಮಾಜದ ಪ್ರಗತಿಗೆ ಶ್ರಮಿಸಿವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು ಉಪಾಧ್ಯಕ್ಷರಾದ ಚರ್ಮಂಡ ಪೂವಯ್ಯನವರು ಹಿರಿಯರು ಹಾಕಿಕೊಟ್ಟ ಅಡಿಪಾಯದಂತೆ ಸಮಾಜದ ಪ್ರಗತಿಗೆ ಅಡಳಿತ ಮಂಡಳಿಯವರು ಶ್ರಮಿಸೋಣವೆಂದು ಕರೆ ನೀಡಿದರು ಕಾರ್ಯದರ್ಶಿಗಳಾದ ಪಡಿಞಾರಂಡ ಪ್ರಭುಕುಮಾರ್ ವಂದಿಸಿದರು.