https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೊಡಗು ಸೇರಿದಂತೆ  ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ….

ಕೊಡಗು ಸೇರಿದಂತೆ  ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ….

Uncategorized
27/09/202427/09/2024nadubadenews@gmail.comLeave a Comment on ಕೊಡಗು ಸೇರಿದಂತೆ  ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ….
Spread the love
ಕೊಡಗು ಸೇರಿದಂತೆ  ವಿವಿಧ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ….

ನಡುಬಾಡೆ ನ್ಯೂಸ್, ಸೆ. 27: ಕೊಡಗು  ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ. ಮುಂದಿನ 5 ದಿನಗಳ ಕಾಲ ರಾಜ್ಯದ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ವ್ಯಾಪಕವಾಗಿ ಮಳೆಯಾಗಲಿದ್ದು, ಸೆಪ್ಟೆಂಬರ್ 30 ರಂದು ಭಾರಿ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

 ಕರಾವಳಿ ಭಾಗದಲ್ಲಿ ಮೋಡ ಮುಸುಕಿದ ವಾತಾವರಣ ಹಾಗೂ ತುಂತುರು ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಸಾಂದರ್ಬಿಕ ಚಿತ್ರ

ದಕ್ಷಿಣ ಒಳನಾಡು ಕೆಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗುತ್ತಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಛತ್ತೀಸ್‌ಗಢ ಮತ್ತು ಲಾಗೋವಾ ಪ್ರದೇಶದಲ್ಲಿ ಚಂಡಮಾರುತವಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಇದು ಕ್ರಮೇಣ ದಕ್ಷಿಣಕ್ಕೆ ಚಲಿಸುತ್ತಿದೆ. ಮಾನ್ಸೂನ್ ರೇಖೆಯು ಪ್ರಸ್ತುತ ಮಹಾರಾಷ್ಟ್ರದಿಂದ ಹಲವಾರು ರಾಜ್ಯಗಳಿಗೆ ವಿಸ್ತರಿಸಲಿದೆ ಎಂದು ಹೇಳಲಾಗಿದೆ.

ಇನ್ನು ರಾಜ್ಯದಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಕೆರೆ-ಕಟ್ಟೆ ಹಾಗೂ ಕರ್ನಾಟಕದ ಬಹುತೇಕ ಜಲಾಶಯಗಳು ತುಂಬಿ ಹರಿಯುತ್ತಿವೆ. ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ. ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ರಾಯಚೂರು, ಕೊಪ್ಪಳ, ಹಾವೇರ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆಯಲ್ಲಿ ಕೂಡ ಮಳೆಯಾಗಲಿದೆ.

ಸಾಂದರ್ಬಿಕ ಚಿತ್ರ

ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 35-45ಕಿ.ಮೀಯಿಂದ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಲಾಗಿದೆ. ಬೆಳ್ತಂಗಡಿ, ಉಡುಪಿ, ಉಡುಪಿ, ಪಣಂಬೂರು, ಹೊನ್ನಾವರ, ಕದ್ರಾ, ಕುಮಟಾ, ಬನವಾಸಿ, ಬೆಳಗಾವಿ, ಕುಡತಿನಿ, ಸೇಡಂ, ಕಲಬುರಗಿ, ಕಾರವಾರ, ಸುಳ್ಯ, ಪುತ್ತೂರು, ಶಿರಾಲಿ, ಸಿದ್ದಾಪುರ, ಅಂಕೋಲಾ, ಕುಂದಾಪುರ, ಮಂಕಿ, ಧರ್ಮಸ್ಥಳ, ಜೇವರ್ಗಿ, ಭಾಗಮಂಡಲ, ಕೋಟ, ಕಾರ್ಕಳ, ಲಿಂಗನಮಕ್ಕಿ, ವಿಜಯನಗರ, ದಾವಣಗೆರೆ, ಹಿರಿಯೂರು ಭಾಗಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.

Post navigation

ಎಡೆಬಿಡದೆ ಕಾಡುವ ಯೂರಿಕ್‌ ಆಸಿಡ್‌, ಬರಲು  ಕಾರಣ ಮತ್ತು  ಪರಿಹಾರಗಳೇನು…
ಪಿ.ಎಸ್.‌ ವೈಲೇಶ್‌ ಕೊಡಗು ಅವರಿಗೆ,  ಸೇವಾ ಭೂಷಣ ಪ್ರಶಸ್ತಿ…

Related Posts

ಹೇಮಂತ್‌ ಪಾರೆರ ಅವರ ‘ಒಲವಿನ ಸವಾರಿ’ ಲೋಕಾರ್ಪಣೆ…

ಹೇಮಂತ್‌ ಪಾರೆರ ಅವರ ‘ಒಲವಿನ ಸವಾರಿ’ ಲೋಕಾರ್ಪಣೆ…

26/09/202426/09/2024nadubadenews@gmail.com
ಕೊಡಗು ಬ್ಲಡ್ ಡೊನರ್ಸ್ ಸಂಸ್ಥೆಯ 7ನೇ ವಾರ್ಷಿಕೋತ್ಸವ ಪ್ರಯುಕ್ತ, ರಕ್ತದಾನ ಮತ್ತು ಕಣ್ಣು ಪರೀಕ್ಷಾ ಶಿಭಿರ…

ಕೊಡಗು ಬ್ಲಡ್ ಡೊನರ್ಸ್ ಸಂಸ್ಥೆಯ 7ನೇ ವಾರ್ಷಿಕೋತ್ಸವ ಪ್ರಯುಕ್ತ, ರಕ್ತದಾನ ಮತ್ತು ಕಣ್ಣು ಪರೀಕ್ಷಾ ಶಿಭಿರ…

18/11/202418/11/2024nadubadenews@gmail.com
ಹುತಾತ್ಮ ಯೋಧ  ದಿವೀನ್‌ ಪಾರ್ಥಿವ ಶರೀರ ಬರಮಾಡಿಕೊಂಡ ಸಂಸದ, ಯಧುವೀರ್‌ ಒಡೆಯರ್

ಹುತಾತ್ಮ ಯೋಧ ದಿವೀನ್‌ ಪಾರ್ಥಿವ ಶರೀರ ಬರಮಾಡಿಕೊಂಡ ಸಂಸದ, ಯಧುವೀರ್‌ ಒಡೆಯರ್

31/12/202431/12/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us