Site icon nadubadenews.com

ಕೊಡಗು ವಿವಿ ಉಳಿಸಿ ಹೋರಾಟದ ಪೂರ್ವಭಾವಿ ಸಭೆ ಇಂದು ಸಂಜೆ…

ಕೊಡಗು ವಿವಿ ಉಳಿಸಿ ಹೋರಾಟದ ಪೂರ್ವಭಾವಿ ಸಭೆ ಇಂದು ಸಂಜೆ…
Spread the love
ಕೊಡಗು ವಿವಿ ಉಳಿಸಿ ಹೋರಾಟದ ಪೂರ್ವಭಾವಿ ಸಭೆ ಇಂದು ಸಂಜೆ…

ಇಂದು ಸಂಜೆ 4.30ಕ್ಕೆ ಚಿಕ್ಕ ಅಳುವಾರದಮ್ಮ ದೇವಾಲಯ ಆವರಣದಲ್ಲಿ ನಡೆಯುವ ಸಭೆ

ತೊರೆನೂರು, ಫೆ.16:  ಕೊಡಗು ವಿವಿಯನ್ನು ಮುಚ್ಚುವ ಸರ್ಕಾರದ ಚಿಂತನೆಯ ವಿರುದ್ದ ಹೋರಾಟ ನಡೆಸುವ ಸಲುವಾಗಿ ರೂಪುರೇಷೆ ಸಿದ್ದಪಡಿಸಲು ದಿನಾಂಕ 16/02/2025ನೇ ಬುಧವಾರ ಸಂಜೆ 4.30 ಗಂಟೆಗೆ ಚಿಕ್ಕ ಅಳುವಾರದಮ್ಮ ದೇವಾಲಯ ಆವರಣದಲ್ಲಿ ಕೊಡಗು ವಿಶ್ವವಿದ್ಯಾಲಯ ಹಿತರಕ್ಷಣಾ ಬಳಗದ ಪೂರ್ವಭಾವಿ ಸಭೆ ನಡೆಯಲಿದೆ.

          ಉಪ ಮುಖ್ಯಮಂತ್ರಿ  ಶ್ರೀ ಡಿ.ಕೆ, ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ವಿವಿಗಳನ್ನು ಮುಚ್ಚುವ ಸುದ್ದಿ  ತೀರ್ಮಾನಕ್ಕೆ ಬಂದಿರುವ ಸುದ್ದಿ ಪ್ರಕಟವಾಗಿದ್ದು, ಈ ಪಟ್ಟಿಯಲ್ಲಿ ಕೊಡಗು ವಿಶ್ವವಿದ್ಯಾಲಯ ಕೂಡ ಇರುವುದು ಆತಂಕಕಾರಿಯಾಗಿದೆ.  ಈ ದುರದೃಷ್ಟಕರ ಬೆಳವಣಿಗೆಯ ವಿರುದ್ದ ಕೊಡಗಿನ ಜನತೆ ನಿಲ್ಲಬೇಕಾದ ಅನಿವಾರ್ಯತೆ ಇದ್ದು, ಈ ಕುರಿತು ಸ್ಪಷ್ಟ ರೂಪುರೇಷೆಯೊಂದಿಗೆ ಹೋರಾಟ ಮಾಡುವ ಉದ್ದೇಶದಿಂದ ಈ ಸಭೆಯನ್ನು ಕರೆಯಲಾಗಿದೆ ಎಂದು  ವಿಶ್ವವಿದ್ಯಾಲಯ ಹಿತರಕ್ಷಣಾ ಬಳಗದ ಅಧ್ಯಕ್ಷ ಕೆ.ಎಸ್.‌ ಕೃಷ್ಣೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

          ಸಭೆಗೆ ವಿದ್ಯಾರ್ಥಿಗಳು, ನಾಗರೀಕರು, ಸಾಹಿತಿಗಳು, ಚಿಂತಕರು, ವಿದ್ವಾಂಸರು, ಜನಪ್ರತಿನಿಧಿಗಳು, ವಿವಿಯ ಅಭಿಮಾನಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ವಿವಿ ಉಳಿಸಿಕೊಳ್ಳವ ನಿಟ್ಟಿನಲ್ಲಿ ಅಗತ್ಯ ಸಲಹೆ ಸೂಚನೆಯನ್ನು ನೀಡಿ, ಸೂಕ್ತ ರೂಪುರೇಷೆಯೊಂದಿಗೆ ಹೋರಾಟಕ್ಕೆ ಕೈ ಜೋಡಿಸಬೇಕೆಂದು ಅವರು ಕೋರಿದ್ದಾರೆ.

Exit mobile version