https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೊಡಗು ಮೆಡಿಕಲ್‌ ಕಾಲೇಜಿಗೆ ಅಮೇರಿಕಾ ವೈದ್ಯರ ತಂಡ ಭೇಟಿ

ಕೊಡಗು ಮೆಡಿಕಲ್‌ ಕಾಲೇಜಿಗೆ ಅಮೇರಿಕಾ ವೈದ್ಯರ ತಂಡ ಭೇಟಿ

News, Informatin , Enteetinement and Advertisement
09/05/202509/05/2025nadubadenews@gmail.comLeave a Comment on ಕೊಡಗು ಮೆಡಿಕಲ್‌ ಕಾಲೇಜಿಗೆ ಅಮೇರಿಕಾ ವೈದ್ಯರ ತಂಡ ಭೇಟಿ
Spread the love
ಕೊಡಗು ಮೆಡಿಕಲ್‌ ಕಾಲೇಜಿಗೆ ಅಮೇರಿಕಾ ವೈದ್ಯರ ತಂಡ ಭೇಟಿ

ಮಡಿಕೇರಿ ಮೇ.09(nadubadenews):- ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಗೆ ಕೋವಿಡ್-19 ಸಂಧರ್ಭದಲ್ಲಿ “ಆಕ್ಸಿಜನ್ ಫಾರ್ ಇಂಡಿಯಾ” ಕಾರ್ಯಕ್ರಮದಡಿಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ಅಮೇರಿಕಾದ ಮೀರಾ ವೆಲ್ಸ್, ಡಾ.ಶುಭಾ ವರ್ಮಾ ಮತ್ತು ತಂಡದವರು ಕೊಡುಗೆಯಾಗಿ ನೀಡಲಾಗಿದ್ದು ಈ ಸಂಬಂಧ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಗೆ ಡಾ.ಮೀರಾ ವೆಲ್ಸ್ ಅವರ ಪತಿ, ಕೋರ್ಟ್‍ಲ್ಯಾಂಡ್ (ನಿರ್ದೇಶಕರು ಐಬಿಎಂ ಸಂಸ್ಥೆ)ನಿವೃತ ಐಎಎಸ್ ಅಧಿಕಾರಿಯಾದ ಎ.ಕೆ.ಮೊಣ್ಣಪ್ಪ ಮತ್ತು ಸ್ಥಳೀಯ ವೈದ್ಯರಾದ ಡಾ ಸಣ್ಣುವಂಡ ಕಾವೇರಪ್ಪ ಅವರು ಭೇಟಿ ನೀಡಿದರು.
ಈ ಸಮಯದಲ್ಲಿ 2021 ರ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ 1984 ರ ಬ್ಯಾಚ್‍ನ ಹಳೆಯ ವಿದ್ಯಾರ್ಥಿಗಳು, ದೇಶಾದ್ಯಂತ ಕೋವಿಡ್ ಪೀಡಿತ ಜನರನ್ನು ಬೆಂಬಲಿಸಲು ಆಕ್ಸಿಜನ್ ಫಾರ್ ಇಂಡಿಯಾ ಎಂಬ ಗುಂಪನ್ನು ರಚಿಸಿ, ಡಾ. ಚೊಟ್ಟೇರ ಶೋಭಾ, ಮಾಜಿ ಐಎಎಸ್ ಅಧಿಕಾರಿ ಎ.ಕೆ. ಮೊಣ್ಣಪ್ಪ, ನಾಪೋಕ್ಲುವಿನಿಂದ ಡಾ.ಸಣ್ಣುವಂಡ ಎಂ.ಕಾವೇರಪ್ಪ ಅವರನ್ನು ಸಂಪರ್ಕಿಸಿ ಕೊಡಗಿನಲ್ಲಿ ಆಮ್ಲಜನಕದ ಸಾಂದ್ರೀಕರಣದ ಅಗತ್ಯವಿದೆಯೇ ಎಂದು ವಿಚಾರಿಸಿದಾಗ, ಡಾ.ಕಾವೇರಪ್ಪ ಅವರು ಅಂದಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಅವರನ್ನು ಸಂಪರ್ಕಿಸಿ ಉಪಕರಣದ ಅವಶ್ಯಕತೆ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದರು. ಯುನೈಟೆಡ್ ಸ್ಟೇಟ್ಸ್ ಮೂಲದ ಹೆಸರಾಂತ ವೈದ್ಯಕೀಯ ತಜ್ಞೆ ಡಾ. ಮೀರಾ ವೆಲ್ಸ್ ಅವರ ನೇತೃತ್ವದಲ್ಲಿ, ಮೇ 23, 2021 ರಂದು ಕೊಡಗು ವೈದ್ಯಕೀಯ ಕಾಲೇಜಿಗೆ 53 ಆಮ್ಲಜನಕ ಸಾಂದ್ರಕಗಳನ್ನು ದಾನ ಮಾಡಲಾಯಿತು.
ಈ ಸಂಬಂಧ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ.ಲೋಕೇಶ್ ಎ.ಜೆ ಅವರು ತಂಡಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಈ ಸಂಧರ್ಭ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ ಸತೀಶ್, ಸಂಸ್ಥೆಯ ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ರೋಹಿಣಿ ಹಾಜರಿದ್ದು, ತಂಡದೊಂದಿಗೆ ಆತ್ಮೀಯ ಸಂವಾದ ನಡೆಸಿದರು. ವಿದೇಶದ ಆರೋಗ್ಯ ತಂತ್ರಜ್ಞಾನ ಮತ್ತು ನಮ್ಮ ದೇಶದ ಆರೋಗ್ಯ ಕ್ಷೇತ್ರದ ಬೆಳವಣಿಗೆ ಮತ್ತು ಅಗತ್ಯತೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಕೊಡಗು ವೈದ್ಯಕೀಯ ಮಹಾವಿದ್ಯಾಲಯದ ಪರವಾಗಿ ಡಾ.ಕಾವೇರಪ್ಪ ಅವರು ಡಾ.ಮೀರಾ ವೆಲ್ಸ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು ಮತ್ತು ಭವಿಷ್ಯದಲ್ಲಿ ಗ್ರಾಮೀಣ ವೈದ್ಯಕೀಯ ಕಾಲೇಜಿಗೆ ನಿರಂತರ ಬೆಂಬಲವನ್ನು ಕೋರಿದರು.

Post navigation

ದಿ. ಮೈಸೂರು ಕಾಫಿ ಸಂಸ್ಕರಣ ಸಹಕಾರ ಸಂಘವು  ಬೆಳೆಗಾರಸ್ನೇಹಿ ಕಾರ್ಯ ಮಾಡಲಿದೆ : ಅಧ್ಯಕ್ಷ ಎ.ಎಸ್.‌ ಪೊನ್ನಣ್ಣ ಅಭಯ
ವಿರಾಜಪೇಟೆಯಲ್ಲಿ ಮೇ, 14 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ…

Related Posts

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮರು ಆದೇಶ ಸ್ವೀಕರಿಸಿದ ನಾಪಂಡ ರವಿ ಕಾಳಪ್ಪ

ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಮರು ಆದೇಶ ಸ್ವೀಕರಿಸಿದ ನಾಪಂಡ ರವಿ ಕಾಳಪ್ಪ

18/06/202518/06/2025nadubadenews@gmail.com
ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ ನಾಡ್‌ಲ್‌ ನಾಳ್…

16/05/202516/05/2025nadubadenews@gmail.com
ಏಖ್‌ ಭಾರತ್ ಅಭಿಯಾನದ ಪೋಸ್ಟರ್‌ ವಿತರಣೆ

ಏಖ್‌ ಭಾರತ್ ಅಭಿಯಾನದ ಪೋಸ್ಟರ್‌ ವಿತರಣೆ

20/02/202520/02/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version