ಮಡಿಕೇರಿ, ನ.18: ಕೊಡಗು ಬ್ಲಡ್ ಡೊನರ್ಸ್ ಸಂಸ್ಥೆ ಮಡಿಕೇರಿಯ 7 ನೇ ವಾರ್ಷಿಕೊತ್ಸವದ ಅಂಗವಾಗಿ, ರಕ್ತದಾನ ಶಿಬಿರ ಆಯೋಜಿಸಿದ್ದು, ಹೆಚ್ಚಿನ ರಕ್ತದಾನಿಗಳು ಆಗಮಿಸಿ ಶಿಬಿರದಲ್ಲಿ ರಕ್ತದಾನ ಮಾಡುವಂತೆ ಸಂಘಟಕರು ಕೋರಿದ್ದಾರೆ.
ರಕ್ತಕ್ಕೆ ಜಾತಿ ಇಲ್ಲ ಧರ್ಮ ಇಲ್ಲ ಮಾನವೀಯತೆ ಮುಖ್ಯ ಎಂಬ ಧ್ಯೇಯದೊಂದಿಗೆ ಕಳೆದ ಏಳು ವರ್ಷಗಳಿಂದ ರಕ್ತದ ಅಗತ್ಯ ಇರುವವರಿಗೆ, ತುರ್ತು ಸಹಾಯ ಮಾಡುವ ಮೂಲಕ ಜನಸೇವೆಯಲ್ಲಿ ತೊಡಗಿರುವ, ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆಯ ಏಳನೇ ವಾರ್ಷಿಕೋತ್ಸವದ ಪ್ರಯುಕ್ತ, ದಿನಾಂಕ 21/11/2024ರ ಗುರುವಾರ, ರೋಟರಿ ಮಡಿಕೇರಿ ಹಾಗೂ ಹೆಚ್.ಡಿ.ಎಫ್.ಸಿ ಬ್ಯಾಂಕ್ ಮಡಿಕೇರಿ ಶಾಖೆ ಇವರ ಸಂಯುಕ್ತ ಆಶ್ರಯದೊಂದಿಗೆ, ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶೀಬಿರವನ್ನು ಆಯೋಜಿಸಲಾಗಿದೆ. ಈ ಶೀಬಿರದಲ್ಲಿ ಜಿಲ್ಲೆಯ ಹೆಚ್ಚಿನ ರಕ್ತದಾನಿಗಳು ಆಗಮಿಸಿ, ರಕ್ತದಾನ ಮಾಡುವಂತೆ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಅದೇ ದಿನ ಮಡಿಕೇರಿ ನೇತ್ರ ಆಪ್ಟಿಕಲ್ಸ್ ಮಡಿಕೇರಿ ಇವರ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಆರ್ಹಫಲಾನುಭವಿಗಳಿಗೆ ಕೇವಲ 199ರೂ. ಗಳಿಗೆ ಕನ್ನಡಕವನ್ನು ನೀಡಲಾಗುವುದು. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಕೊಡಗು ಬ್ಲಡ್ ಡೋನರ್ಸ್ ಸಂಸ್ಥೆ ಮನವಿ ಮಾಡಿಕೊಂಡಿದೆ. ಕಳೆದ 7 ವರ್ಷದಿಂದ ಕೊಡಗು, ಮೈಸೂರು, ಹಾಸನ, ಪುತ್ತೂರು, ಸುಳ್ಯ, ಮಂಗಳೂರು, ಜಿಲ್ಲೆಯ ರೋಗಿಗಳಿಗೆ ರಕ್ತದ ಅವಶ್ಯಕತೆ ಕಂಡು ಬಂದಲ್ಲಿ ಕರ್ನಾಟಕ ಬ್ಲಡ್ ಹೆಲ್ಪಲೈನ್ ಸಹಯೋಗದಲ್ಲಿ ರಕ್ತ ಪೂರೈಸುವ ಕೆಲಸವನ್ನು ಕೊಡಗು ಬ್ಲಡ್ ಸಂಸ್ಥೆ ಮಾಡುತ್ತಿದೆ. ಇದರ ಭಾಗವಾಗಿ 7ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಣೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಾವುಗಳು ಶಾಲಾ ಕಾಲೇಜು ಹಂತದಲ್ಲಿ ರಕ್ತದಾನದ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ಸಂಸ್ಥೆಯ ಪದಾದಿಕಾರಿಗಳು ತಿಳಿಸಿದ್ದಾರೆ.