Nadubadenews, ಪೊನ್ನಂಪೇಟೆ, ಅ.23: ರಿಂದ 22 ಅಕ್ಟೋಬರ್ 2024 ಶಿವಮೊಗ್ಗದಲ್ಲಿ ನಡೆದ ಸ್ಕೂಲ್ ಗೇಮ್ ಫೆಡರೇಶನ್ ಆಪ್ ಇಂಡಿಯ ಸಂಸ್ಥೆಯ ಅಡಿಯಲ್ಲಿ ನಡೆದ, 19 ವರ್ಷದ ಒಳಗಿನ ಶಾಲಾ ವಿದ್ಯಾರ್ಥಿಗಳ ಬಾಕ್ಸಿಂಗ್ ಸ್ಪರ್ಧೆಯಲ್ಲಿ, ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ ಗೋಣಿಕೊಪ್ಪ ಲಿಟ್ಲ್ಪವರ್ ಶಾಲೆಯಲ್ಲಿ ಅಳವಡಿಸಿರುವ ಬಾಕ್ಸಿಂಗ್ ರಿಂಗ್ನಲ್ಲಿ ತರಬೇತಿಹೊಂದಿದ ಯುವ ಬಾಕ್ಸರ್ಗಳಾದ, ಸಂಜನ ಮತ್ತು ಅರ್ಚನ ಚಿನ್ನದ ಪದಕಗಳನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದರೆ, ಹರ್ಷ-ಬೆಳ್ಳಿ, ದ್ಯಾನ್- ಕಂಚಿನ ಪದಕ ಪಡೆಯುವ ಮೂಲಕ, ಕೊಡಗು ಬಾಕ್ಸಿಂಗ್ ಸಂಸ್ಥೆಗೆ ಮತ್ತು ಕೊಡಗಿಗೆ ಕೀರ್ತಿತಂದಿದ್ದಾರೆ.
ಹೆಸರಾಂತ ಬಾಕ್ಸಿಂಗ್ ಪರಿಣಿತರು ಮತ್ತು ಎಮ್.ಇ.ಜಿ ನಿವೃತ ಬಾಕ್ಸರ್ಗಳಾದ ದೇಯಂಡ ಡಿಕ್ಕ ಮೇದಪ್ಪ ಮತು ಶರತ್ ಅವರ ಗರಡಿಯಲ್ಲಿ ಪಳಗಿರುವ ಈ ಪ್ರತಿಭೆಗಳ ಸಾಧನೆಯನ್ನು ಕೊಡಗು ಬಾಕ್ಸಿಂಗ್ ಸಂಸ್ಥೆ ಕಾರ್ಯದರ್ಶಿಗಳಾದ ಕರ್ನಲ್ ಚೆಪ್ಪಡೀರ ಪೂಣಚ್ಚಮುತ್ತಣ್ಣನವರು ಅಭಿನಂದಿಸಿ, ಪ್ರೋತ್ಸಾಹಿಸಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕರಾದ ಸಮಾಜ ಸೇವಕ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರು ತಿಳಿಸಿದ್ದಾರೆ.