
ವಿರಾಜಪೇಟೆ,ಏ.26: ಇದೇ ದಿನಾಂಕ 22 ರಂದು ಕಾಶ್ಮೀರದ ಪಹಲ್ಗಾಮ್’ನಲ್ಲಿ ಉಗ್ರವಾದಿಗಳ ಅಟ್ಟಹಾಸಕ್ಕೆ ಬಲಿಯಾದ ದೇಶದ 26 ಪ್ರವಾಸಿಗರಿಗೆ ಕೊಡಗು ದಂತ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು, ಉಪಾದ್ಯಾಯರು ಹಾಗೂ ಸಿಬ್ಬಂದಿಗಳು ಇಂದು (26/04/2025) ಮೇಣದ ಬತ್ತಿ ಉರಿಸಿ ಸಂತಾಪ ಸೂಚಿಸಿದರು.
ಕಾಲೇಜಿನ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿಸಂಸ್ಥೆಯ ಡೀನ್ ಡಾ. ಸುನೀಲ್ ಮುದ್ದಯ್ಯ ಅವರು ಮಾತನಾಡಿ ಉಗ್ರವಾದದಿಂದ ನಮ್ಮ ದೇಶದ 26 ನಾಗರಿಕರು ಪ್ರಾಣ ತ್ಯಜಿಸಿದ್ದಾರೆ. ಇದು ನಿಜಕ್ಕೂ ದುಃಖಕರ ಸಂಗತಿ, ಉಗ್ರವಾದವನ್ನು ಮೆಟ್ಟಿ ನಿಲ್ಲುವ ಕೆಲಸವಾಗಬೇಕು ಹಾಗೂ ಸಂತ್ರಸ್ತರ ಕುಟುಂಬಸ್ಥರಿಗೆ ಆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದರು.
ಕಾಲೇಜಿನ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಯರ ಪರವಾಗಿ ಡಾ. ಅನಸ್ವರ ಅವರು ಮಾತನಾಡಿ ಸಂತಾಪ ಸೂಚಿಸಿದರು. ಕಾರ್ಯಕ್ರಮಲ್ಲಿ ಉಪ ಪ್ರಾಂಶುಪಾಲರು ಮಾತ್ರ ಅಲ್ಲದೆ ಆಡಳಿತ ಕಚೇರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.