https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೊಡಗು ಕಾಂಗ್ರೆಸ್‌ ಭೀಷ್ಮ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಅಸ್ತಂಗತ…

ಕೊಡಗು ಕಾಂಗ್ರೆಸ್‌ ಭೀಷ್ಮ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಅಸ್ತಂಗತ…

News, Informatin , Enteetinement and Advertisement
24/04/202524/04/2025nadubadenews@gmail.comLeave a Comment on ಕೊಡಗು ಕಾಂಗ್ರೆಸ್‌ ಭೀಷ್ಮ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಅಸ್ತಂಗತ…
Spread the love
ಕೊಡಗು ಕಾಂಗ್ರೆಸ್‌ ಭೀಷ್ಮ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಅಸ್ತಂಗತ…

ಮಡಿಕೇರಿ, ಏ.24:  ಕೊಡಗು ಕಾಂಗ್ರೆಸ್ನ ಭೀಷ್ಮ ಎಂದೇ ಖ್ಯಾತರಾಗಿದ್ದ ಬೊಟ್ಟೊಳಂಡ ಮಿಟ್ಟು ಚಂಗಪ್ಪ  ಮಿಟ್ಟು ಚಂಗಪ್ಪ (83) ವಿಧಿವಶರಾಗಿದ್ದಾರೆ.

  ಅಮ್ಮತ್ತಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿರುವ ಮಿಟ್ಟು ಚಂಗಪ್ಪ ಅವರು ವಯೋ ಸಹಜ ಖಾಯಿಲೆಯೀಂದ ಬಲಲುತಿದ್ದರು.   5 ದಶಕಗಳ ಕಾಲ ರಾಜಕೀಯದಲ್ಲಿದ್ದ ಕಾಂಗ್ರೆಸ್ನ  ನಿಷ್ಟಾವಂತ ನಾಯಕರಾಗಿದ್ದ ಇವರು, ಕೊಡಗು ಕಾಂಗ್ರೆಸ್‌ ಕಟ್ಟಾಳುಗಳಲ್ಲಿ ಒಬ್ಬರು. ಇತ್ತೀಚಿಗಿನ ವರ್ಷಗಳವರೆಗೂ ಕೊಡಗು ಕಾಂಗ್ರೆಸ್ಸಿಗೆ ಸಂಭಂದಿಸಿದ ನಿರ್ಣಯಗಳು ಮಿಟ್ಟು ಚಂಗಪ್ಪ ಅಣತಿಯಂತೆಯೇ ನಡೆಯುತಿದ್ದವು. ರಾಜಕಾರಣಿಯಾಗಿ, ಪ್ರವಾಸೋದ್ಯಮಿಯಾಗಿ, ಕೖಷಿಕರಾಗಿ, ಕಾಫಿ ಉದ್ಯಮಿಯಾಗಿ ಗಮನ ಸೆಳೆದಿದ್ದ ವಿಶೇಷ ವ್ಯಕ್ತಿತ್ವದ ಮಿಟ್ಟು ಚಂಗಪ್ಪ ಅವರು ಮಡಿಕೇರಿ ಪುರಸಭೆ, ಎಂ.ಎಲ್.ಸಿ. ಚುನಾವಣೆಯಲ್ಲಿ ಸ್ಪಧಿ೯ಸಿ ಸೋತಿದ್ದರೂ ರಾಜಕೀಯದಿಂದ ಹತಾಶರಾಗದೇ ಕಿಂಗ್ ಮೇಕರ್ ಆಗಿ ಕಂಗೊಳಿಸಿದ್ದರು. ತೆರೆಮರೆಯಲ್ಲಿಯೇ ರಾಜಕಾರಣವನ್ನು ನಿಯಂತ್ರಿಸುತಿದ್ದರು. ಇಂದಿರಾಗಾಂಧಿ, ಗುಂಡೂರಾವ್, ಎಸ್.ಎಂ.ಕೖಷ್ಣ, ಸಿದ್ದರಾಮಯ್ಯ, ಶಿವಕುಮಾರ್, ಪರಮೇಶ್ವರ್, ಸೇರಿದಂತೆ ಕಾಂಗ್ರೆಸ್ ಮುಖಂಡರಿಗೆಲ್ಲರಿಗೂ ಆತ್ಮೀಯರಾಗಿದ್ದ ಮಿಟ್ಟು ಚಂಗಪ್ಪ, ರಜನೀಕಾಂತ್, ವಿಷ್ಮುವಧ೯ನ್, ಅಂಬರೀಷ್ ಅವರ  ಸ್ನೇಹಿತರೂ ಆಗಿದ್ದರು.

ಸತತ 32 ಚುನಾವಣೆಗಳಲ್ಲಿ ಮತಗಟ್ಟೆಯಲ್ಲಿ ಮೊದಲ ಮತದಾನ ಮಾಡಿ  ಮತದಾನ ಜಾಗ್ರತಿಯ ರಾಯಭಾರಿಯಂತೆ ಗಮನಸೆಳೆದಿದ್ದ ಮಿಟ್ಟುಚಂಗಪ್ಪ ಅವರ ಅಂತ್ಯ ಕ್ರಿಯೆ ನಾಳೆ ಮಡಿಕೇರಿಯಲ್ಲಿ ನಡೆಯಲಿದೆ.

 ನಾಳೆ ಬೆಳಗ್ಗೆ 10 ಗಂಟೆಯಿಂದ 1 ಗಂಟೆವರೆಗೆ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಿಟ್ಟು ಚಂಗಪ್ಪ ಪಾಥಿ೯ವ ಶರೀರದ ಅಂತಿಮ ದಶ೯ನಕ್ಕೆ ಸಾವ೯ಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತೀರ ಧಮ೯ಜ ಉತ್ತಪ್ಪ ತಿಳಿಸಿದ್ದಾರೆ.

 ಮಿಟ್ಟು ಚಂಗಪ್ಪ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೖಹ ಸಚಿವ ಜಿ. ಪರಮೇಶ್ವರ್, ಸಚಿವ ದಿನೇಶ್ ಗುಂಡೂರಾವ್, ಶಾಸಕದ್ವಯರಾದ ಅಜ್ಜಿಕುಟ್ಟಿರ.ಎಸ್.ಪೊನ್ನಣ್ಣ, ಡಾ. ಮಂಥರ್ ಗೌಡ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

 ಕೆಲ ತಿಂಗಳಿನಿಂದ ಅನಾರೋಗ್ಯಕ್ಕೊಳಗಾಗಿ ಮುಳ್ಳುಸೋಗೆ ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದ ಮಿಟ್ಟು ಚಂಗಪ್ಪ ಅವರನ್ನು ಮಂಗಳವಾರ ರಾತ್ರಿ ಅಮ್ಮತ್ತಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಮೖತರು ಪತ್ನಿ ಯಶಿಕಾ, ಪುತ್ರಿಯರನ್ನು  ಅಗಲಿದ್ದಾರೆ.

Post navigation

ಸಕಾಲ ಸೇವೆ ನಾಗರಿಕರ ಹಕ್ಕು, ಸಕಾಲ ಮಿಷನ್ ಆಡಳಿತಾಧಿಕಾರಿ ನಿವೇದಿತಎಸ್ …
ಕ್ಷೇತ್ರದ ಅಭಿವೃದ್ದಿ ನನ್ನ ಏಕಮೇವ ಗುರಿ: ನಡುಬಾಡೆ ಸ್ಪಂದನದಲ್ಲಿ ಶಾಸಕ ಪೊನ್ನಣ್ಣ ಮುಕ್ತ ಮಾತು…

Related Posts

ಕೊಡವ ಪ್ರಾಧಿಕಾರ ಸಮರ್ಪಕ ಯೋಜನೆಯೊಂದಿಗೆ ಶೀಘ್ರ ಅನುಷ್ಠಾನಕ್ಕೆ : ಅಜ್ಜಿಕುಟ್ಟಿರ ಪೊನ್ನಣ್ಣ

ಕೊಡವ ಪ್ರಾಧಿಕಾರ ಸಮರ್ಪಕ ಯೋಜನೆಯೊಂದಿಗೆ ಶೀಘ್ರ ಅನುಷ್ಠಾನಕ್ಕೆ : ಅಜ್ಜಿಕುಟ್ಟಿರ ಪೊನ್ನಣ್ಣ

06/03/202606/03/2026nadubadenews@gmail.com
ವಿವಿಧದತ್ತಿ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಪತ್ರಕರ್ತರು

ವಿವಿಧದತ್ತಿ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಪತ್ರಕರ್ತರು

10/06/202510/06/2025nadubadenews@gmail.com
ಮುಕ್ತ ವಿಶ್ವವಿದ್ಯಾನಿಲಯ ಪ್ರವೇಶಕ್ಕೆ ಮಾರ್ಚ್ 31 ಅಂತಿಮ

ಮುಕ್ತ ವಿಶ್ವವಿದ್ಯಾನಿಲಯ ಪ್ರವೇಶಕ್ಕೆ ಮಾರ್ಚ್ 31 ಅಂತಿಮ

20/03/202520/03/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version