ಮಡಿಕೇರಿ, ಡಿ.08: ಕೊಡಗು-ಮೈಸೂರು ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಮಡಿಕೇರಿ ಜಿಲ್ಲಾಡಳಿತ ಭವನದಲ್ಲಿ, ತಮ್ಮ ಅಧಿಕೃತ ಕಛೇರಿಗೆ ರಿಬ್ಬನ್ ಕತ್ತರಿಸುವ ಮೂಲಕ ಪಾದಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು ನೂತನವಾಗಿ ನಮ್ಮ ಕಚೇರಿಯು ಇಂದಿನಿಂದ ಕೊಡಗುಜಿಲ್ಲೆಯಲ್ಲಿ ಸೇವೆಯ ಆರಂಭ ಮಾಡಿದೆ, ಸಾರ್ವಜನಿಕರು ತಮ್ಮ ಸಮಸ್ಯೆಗಳ ಆವ್ಹಾಲುಗಳನ್ನು ನಮ್ಮ ಈ ಕಚೇರಿಗೆ ನೇರವಾಗಿ ತಲುಪಿಸಬಹುದು. ನಮ್ಮ ಸಲಹೆಗಾರರು ವಾರದ ಎಲ್ಲಾ ದಿವಸಗಳು ನಮ್ಮ ಕಚೇರಿಯಲ್ಲಿ ಇರುತ್ತಾರೆ. ನಾನು ಕ್ಷೇತ್ರ ಮೈಸೂರು,ಕೊಡಗಿನ ಜನರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ನನ್ನ ಸೇವೆಯನ್ನು ಮುಡಿಪಾಗಿಟ್ಟಿದ್ದೇನೆ ಎಂದು ಹೇಳಿದರು.
ವಿಕಸಿತ ಭಾರತದಲ್ಲಿ ಕೊಡಗಿನ ಗ್ರಾಮ ಮಟ್ಟದ ಸೇವೆಗಳಿಗೆ ನಾನು ಸದಾ ಬದ್ಧನಾಗಿ ಸೇವೆ ಮಾಡಲು ಸಿದ್ದನಿದ್ದೇನೆ ಎಂದು ಹಿತ್ತ ನುಡಿಗಳನ್ನು ನುಡಿಯುತ್ತ, ಅತಿ ಶೀಘ್ರದಲ್ಲೇ ಕೊಡಗಿನ ಕುಶಾಲನಗರದಿಂದ ಶ್ರೀರಂಗಪಟ್ಟಣದವರೆಗಿನ ಕೆಂದ್ರ ಹೆದ್ದಾರಿಯ ಕಾಮಗಾರಿ ಅತಿ ಶೀಘ್ರದಲ್ಲಿ ಚಾಲನೆ ನೀಡಿ ಕೊಡಗಿನ ಜನತೆಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೋಡಲಾಗುವುದು, ಈಗಾಗಲೇ ಕೆಂದ್ರ ಸರಕಾರ ಯೋಜನೆಗೆ ಅನುಮೋದನೆ ನಿಡಿದ್ದು, ಕೆಲ ದಿನಗಳಲ್ಲಿ NH-275 ನಲ್ಲಿ ಹೊಸ ಮೇಲ್ಸೇತುವೆ ಮತ್ತು ವರ್ಧಿತ ಸಂಚಾರ ನಿಯಮಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯ ನವೀಕರಣಗಳನ್ನು ಅನುಮೋದಿಸಲಾಗುತ್ತದೆ. ನಾವೆಲ್ಲರು ಒಟ್ಟಾಗಿ, ಪ್ರಗತಿ ಮತ್ತು ಅಭಿವೃದ್ದಿಯಲ್ಲಿ ಒಟ್ಟಾಗಿ ಸೇರೋಣ ಎಂದರು.
ಇದಕ್ಕೂ ಮೊದಲು ನೂತನ ಕಛೇರಿಯಲ್ಲಿ ಹೋಮ ಹವನಗಳು ಶಾಸ್ತ್ರೋಕ್ತವಾಗಿ ನೆರವೇರಿದವು. ಈ ಸಂದರ್ಭ, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜೀ ಸಚಿವ ಮಂಡೆಪಂಡ ಅಪ್ಪಚ್ಚು ರಂಜನ್, ಮಾಜೀ ಶಾಸಕ ಮಂಡೆಪಂಡ ಅಪ್ಪಚ್ಚು ರಂಜನ್, ಮಹಿಳಾಮೋರ್ಚಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಸೇರಿದಂತೆ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದು, ಸಂಸದರಿಗೆ ಶೂಭ ಹಾರೈಸಿದರು.