ಮಡಿಕೇರಿ, ನ.10: ಮಲೆನಾಡ ಕೂಗು ಸ್ವಯಂಸೇವಾ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ, ಕೊಡಗು ವಿಶ್ವವಿದ್ಯಾಲಯ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮಡಿಕೇರಿ, ಸಸ್ಯ ಶಾಸ್ತ್ರ ಪ್ರಾಣಿ ಶಾಸ್ತ್ರ ಮತ್ತು ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಸಹಭಾಗಿತ್ವದಲ್ಲಿ ಒಂದು ದಿನದ ರಾಜ್ಯಮಟ್ಟದ ಕಾರ್ಯಗಾರ ಮತ್ತು ಕನ್ನಡದಲ್ಲಿ ಕೊಡಗಿನ ಆರ್ಕಿಡ್ಸ್ ಸಂಚಲನ (ಕಾಡ್ ಪೂವು) ಕಿರು ಚಿತ್ರ ಪ್ರದರ್ಶನ, ದಿನಾಂಕ: 12/11/24ನೇ ಮಂಗಳವಾವ ಮಡಿಕೇರಿಯ, ಫಿ.ಮಾ. ಕಾರ್ಯಪ್ಪ ಕಾಲೇಜಿನಲ್ಲಿ ನಡೆಯಲಿದೆ.
ಪರಿಸರ ಸ್ವಯಂಸೇವಕ ಪಾಂಡಿರ ಕೌಶಿಕ್‌ಕಾವೇರಪ್ಪ, ಅವರ ಸ್ವಚ್ಚ, ಸುರಕ್ಷ, ಸಮೃದ್ಧಿ ಕೊಡಗು ಎಂಬ ಪರಿಕಲ್ಪನೆಯಲ್ಲಿ, ಅಂದು ಬೆಳಿಗ್ಗೆ 10 ಗಂಟೆಗೆ, ವಿಚಾರ ಸಂಕಿರಣ ಕೊಠಡಿ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿಯಲ್ಲಿ ನಡೆಯುವ ಕಾರ್ಗಾರದ ಅಧ್ಯಕ್ಷತೆಯನ್ನು, ಕಾಲೇಜಿನ ಪ್ರಾಂಶುಪಾಲರಾದ, ಮೇಜರ್. ಡಾ. ರಾಘವ ಬಿ ಅವರು ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ, ಮಡಿಕೇರಿ ಶಾಸಕ ಡಾ. ಮಂಥರ್ ಗೌಡ, ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್‌ಬೆಳ್ಯಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಾಜಿರ ಅಯ್ಯಪ್ಪ, ಸಾಹಿತಿ ಪುತ್ತಾಮನೆ ವಿದ್ಯಾಜಗದೀಶ್, ಬೆಂಗಳೂರಿನ ಎಂ. ಎಸ್. ರಾಮಯ್ಯ ಕಾಲೇಜಿನ, ಸಹಾಯಕ ಪ್ರಾಧ್ಯಾಪಕರು & ಪರೀಕ್ಷಾ ಉಪ ನಿಯಂತ್ರಕರಾದ ಡಾ. ಪ್ರಶಾಂತ್ ಕುಮಾರ್ ಹೆಚ್.ಪಿ ಅವರುಗಳು ಉಪಸ್ಥಿತರಿರುತ್ತಾರೆ.
“ಆರ್ಕಿಡ್ಸ್ ಸಂಚಲನ” ಕಿರು ಚಿತ್ರ ಪ್ರದರ್ಶನದ ನಂತರ, ಪ್ರಾಂಶುಪಾಲ ಡಾ. ರಾಘವ ಅವರು ಪ್ರಾಸ್ತಾವಿಕ ಮಾತನಾಡಲಿದ್ದು, ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಅವರು, ವಿದ್ಯಾರ್ಥಿಗಳ ಭವಿಷ್ಯ ರೂಪಿಸವ ಕುರಿತು ಪ್ರೇರೇಪಿಸಲಿದ್ದಾರೆ. ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರು, ಸಾಮಾಜಿಕ ಜವಾಬ್ದಾರಿ ಮತ್ತು ಕಾಳಜಿ ಎಂಬ ವಿಚಾರದಲ್ಲಿ ಮಾತನಾಡಿದರೆ, ಕಾರ್ಯಪ್ಪ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ, ಕೊಡವ ಮಕ್ಕಡ ಕೂಟದ ಅಧ್ಯಕ್ಷರೂ ಆಗಿರುವ ಬೊಳ್ಳಾಜಿರ ಅಯ್ಯಪ್ಪ ಅವರು, ರಸ್ತೆ ಅಪಘಾತ, ವೇಗದ ಚಾಲನೆ ಮತ್ತು ಮಾದಕ ವಸ್ತುಗಳ ಸೇವನೆ ವಿಚಾರವಾಗಿ ಮಾತನಾಡಲಿದ್ದು, ಸಾಹಿತಿ, ಗಾಯಕಿ, ಶ್ರೀಮತಿ. ವಿದ್ಯಾ ಜಗದೀಶ್ ಪುತ್ತಾಮನೆ ಅವರು, ಕೊಡಗಿನ ದೇವರ ಕಾಡು ವಿಚಾರವಾಗಿ ಮಾತನಾಡಲಿದ್ದಾರೆ. ಬೆಂಗಳೂರಿನ ಎಂ. ಎಸ್. ರಾಮಯ್ಯ ಕಾಲೇಜಿನ, ಸಹಾಯಕ ಪ್ರಾಧ್ಯಾಪಕರು & ಪರೀಕ್ಷಾ ಉಪ ನಿಯಂತ್ರಕರಾದ ಡಾ. ಪ್ರಶಾಂತ್ ಕುಮಾರ್ ಹೆಚ್.ಪಿ ಅವರು ಸಂದರ್ಶನದಲ್ಲಿ ಸಂವಹನದ ಪ್ರಾಮುಖ್ಯತೆ ವಿಚಾರದಲ್ಲಿ ಅರಿವು ಮೂಡಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಘಟಕರಾದ, ಪರಿಸರ ವಿಜ್ಞಾನಿ ಪಾಂಡಿರ ಕೌಶಿಕ್ ಕಾವೇರಪ್ಪ, ಡಾ. ಎಂ. ಪಿ. ಕೃಷ್ಣ ಪ್ರಾಧ್ಯಾಪಕರು & ಮುಖ್ಯಸ್ಥರು ಶ್ರೀಮತಿ. ನಳಿನಿ ಬಿ.ಎಂ. ಪ್ರಾಣಿ ಶಾಸ್ತ್ರ ವಿಭಾಗ ಡಾ. ಸೌಮ್ಯ ಕೆ, ಮುಖ್ಯಸ್ಥರು ಶ್ರೀಮತಿ ದೇವಮ್ಮ & ಶ್ರೀಮತಿ. ಆಪೂರ್ವ, ಸಸ್ಯ ಶಾಸ್ತ್ರ ವಿಭಾಗ. ಡಾ.ಗೀತಾಂಜಲಿ ಪಿ.ಎ, ಮುಖ್ಯಸ್ಥರು ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಮಡಿಕೇರಿ, ಹಾಗೂ ಮಲೆನಾಡ ಕೂಗು ಸ್ವಯಂಸೇವ ಸಂಘಟನೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿರುತ್ತಾರೆ.