https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕೇಂದ್ರ ಸರ್ಕಾರದಿಂದ 5.8ಕೋಟಿ BPL ಕಾರ್ಡ್‌ ಅನರ್ಹ, ಅದೇ ಮಾನದಂಡ ಬಳಸಿದ್ದೇವೆ ಎಂದ ಕರ್ನಾಟಕ. ಅರ್ಹರ ರದ್ದತಿ ಹಿಂಪಡೆಯಲು CM ಆದೇಶ…

ಕೇಂದ್ರ ಸರ್ಕಾರದಿಂದ 5.8ಕೋಟಿ BPL ಕಾರ್ಡ್‌ ಅನರ್ಹ, ಅದೇ ಮಾನದಂಡ ಬಳಸಿದ್ದೇವೆ ಎಂದ ಕರ್ನಾಟಕ. ಅರ್ಹರ ರದ್ದತಿ ಹಿಂಪಡೆಯಲು CM ಆದೇಶ…

Uncategorized
21/11/202421/11/2024nadubadenews@gmail.comLeave a Comment on ಕೇಂದ್ರ ಸರ್ಕಾರದಿಂದ 5.8ಕೋಟಿ BPL ಕಾರ್ಡ್‌ ಅನರ್ಹ, ಅದೇ ಮಾನದಂಡ ಬಳಸಿದ್ದೇವೆ ಎಂದ ಕರ್ನಾಟಕ. ಅರ್ಹರ ರದ್ದತಿ ಹಿಂಪಡೆಯಲು CM ಆದೇಶ…
Spread the love
ಕೇಂದ್ರ ಸರ್ಕಾರದಿಂದ 5.8ಕೋಟಿ BPL ಕಾರ್ಡ್‌ ಅನರ್ಹ, ಅದೇ ಮಾನದಂಡ ಬಳಸಿದ್ದೇವೆ ಎಂದ ಕರ್ನಾಟಕ. ಅರ್ಹರ ರದ್ದತಿ ಹಿಂಪಡೆಯಲು CM ಆದೇಶ…

ನವದೆಹಲಿ ನ.21: ಆಹಾರ ಭದ್ರತಾ ಯೋಜನೆಯಡಿಯಲ್ಲಿ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕೇಂದ್ರ ಸರ್ಕಾರವು ದೇಶದಲ್ಲಿ 5.8 ಕೋಟಿ ನಕಲಿ BPL ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದು, ಉಳಿದವು ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಆಹಾರ ಸಚಿವಾಲಯ ಬುಧವಾರ ತಿಳಿಸಿದೆ.

ಸಾರ್ವಜನಿಕ ಪಡಿತರ ವ್ಯವಸ್ಥೆಯ ಡಿಜಿಟಲೀಕರಣಕ್ಕೆ ದೇಶದಲ್ಲಿ ಚಾಲನೆ ನೀಡಲಾಗಿದ್ದು, ಒಟ್ಟು 80.6 ಕೋಟಿ ಪಡಿತರ ಚೀಟಿಗಳನ್ನು ಹೊಂದಿದ ಕುಟುಂಬಗಳಿವೆ. ಆಧಾರ್‌ ಸಂಖ್ಯೆ  ಪರಿಶೀಲನೆ ಪ್ರಕ್ರಿಯೆ ಮೂಲಕ ಈ ನಕಲಿ ಚೀಟಿಗಳನ್ನು ಪತ್ತೆ ಹಚ್ಚಲಾಗುತ್ತಿದೆ  ಎಂದು ಸರ್ಕಾರ ಹೇಳಿದೆ.

ದೇಶದಾದ್ಯಂತ 5.33 ಲಕ್ಷ ನ್ಯಾಯಬೆಲೆ ಅಂಗಡಿಗಳಲ್ಲಿ ತಂತ್ರಜ್ಞಾನ ಆಧಾರಿತ ಇ–ಪಿಒಎಸ್‌ (ಪಾಯಿಂಟ್‌ ಆಫ್‌ ಸೇಲ್‌) ಸಾಧನಗಳನ್ನು ಅಳವಡಿಸಿದ್ದು, ಇವುಗಳ ಮೂಲಕ ಪಡಿತರ ವಿತರಣೆ ವೇಳೆ ಆಧಾರ್ ಸಂಖ್ಯೆಯನ್ನು ದೃಢೀಕರಿಸಲಾಗುತ್ತದೆ. ಅರ್ಹ ಪಡಿತರ ಚೀಟಿದಾರರಿಗೆ ಮಾತ್ರ ಪಡಿತರ ವಿತರಿಸಲಾಗುತ್ತಿದೆ

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಲಾಗಿದೆ ಎಂದು ಸ್ಪಷ್ಟನೆ ನೀಡಿರುವ ಕರ್ನಾಟಕ ರಾಜ್ಯ ಸರ್ಕಾರ, ರಾಜ್ಯದಲ್ಲಿ ಒಟ್ಟು 1,50,90,534 ಪಡಿತರ ಚೀಟಿಗಳಿದ್ದು, ಈ ಪೈಕಿ 10,68,042 ಅಂತ್ಯೋದಯ ಕಾರ್ಡ್‌ಗಳು, 1,14,60,137 ಬಿಪಿಎಲ್ ಕಾರ್ಡ್‌ಗಳು, ಉಳಿದಂತೆ, 25,62,355 ಎಪಿಲ್ ಕಾರ್ಡ್‌ಗಳು ಎಂದು ಮಾಹಿತಿ ನೀಡಿದೆ.

ರಾಜ್ಯದಲ್ಲಿ, ಒಟ್ಟು ಬಿಪಿಎಲ್ ಕಾರ್ಡ್‌ಗಳ ಪೈಕಿ 13,87,652 ಕಾರ್ಡ್‌ಗಳನ್ನು ಅನರ್ಹ ಎಂದು ಗುರುತಿಸಲಾಗಿದೆ. ಅವುಗಳಲ್ಲಿ 98,473 ಆದಾಯ ತೆರಿಗೆ ಪಾವತಿದಾರರು ಹೊಂದಿರುವ ಕಾರ್ಡ್‌ಗಳಾದರೆ, 4,036 ಸರ್ಕಾರಿ ನೌಕರರು ಹೊಂದಿರುವ ಕಾರ್ಡ್‌ಗಳಾಗಿವೆ. ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಹೆಚ್ಚಿರುವವರು ಹೊಂದಿರುವ ಕಾರ್ಡ್‌ಗಳ ಸಂಖ್ಯೆ 10,09,476. ಕಳೆದ ಆರು ತಿಂಗಳುಗಳಿಂದ ಪಡಿತರವನ್ನೇ ಪಡೆಯದ ಕಾರಣಕ್ಕೆ ಅಮಾನತುಗೊಂಡ ಕಾರ್ಡ್‌ಗಳ ಸಂಖ್ಯೆ 2,75,667, ಮೃತಪಟ್ಟ 1,59,319 ಸದಸ್ಯರ ಹೆಸರುಗಳನ್ನು ಕಾರ್ಡ್‌ನಿಂದ ತೆಗೆದುಹಾಕಲಾಗಿದೆ, ಅಮಾನತು, ರದ್ದು ಮತ್ತು ಎಪಿಎಲ್ ಕಾರ್ಡ್‌ಗಳಾಗಿ ಬದಲಾಯಿಸಿದ ಒಟ್ಟು ಕಾರ್ಡ್‌ಗಳ ಸಂಖ್ಯೆ 3,81,983. ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ.

ಯಾವುದೇ ಕಾರಣಕ್ಕೂ ಅರ್ಹ ಬಡವರ BPL ಕಾರ್ಡುಗಳು ರದ್ದಾಗುವುದಿಲ್ಲ ಎಂದಿರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, ಈಗಾಗಲೇ ರದ್ದಾಗಿರುವ ಕಾರ್ಡುಗಳನ್ನು ತಕ್ಷಣ ಪುನರ್‌ ಪರಿಶೀಲಿಸಿ, ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿದ್ದಾರೆ.

Post navigation

ಗೂಗಲ್‌ ಮೀಟ್‌ನಲ್ಲಿ ನಡೆದ, ಕರ್ನಾಟಕ  ಲೇಖಕಿಯರ ಸಂಘ ಕೊಡಗು ಶಾಖೆಯ ವಾರ್ಷಿಕ ಸಭೆ
ವಕ್ಫ್‌ ಮಂಡಳಿಯ ರದ್ದತಿಗೆ ಕಾನೂನು ರೂಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ನಾಳೆ ಕೊಡಗು ಬಿಜೆಪಿಯಿಂದ ಬೃಹತ್‌ ಪ್ರತಿಭಟನೆ…

Related Posts

ಭಾರತೀಯ ಹೆಮ್ಮೆಯ ಪುತ್ರರನ್ನು ಅವಹೇಳನ ಮಾಡಿರುವ ಆರೋಪಿಯ ಗಡಿಪಾರಿಒತ್ತಾಯಿಸಿ  ಸಾಮೂಹಿಕ ಜನಾಂದೋಲನಕ್ಕೆ  ಶೀಘ್ರವೇ ಕರೆ ನೀಡಲು, ದೇಶಭಕ್ತರಿಂದ ಚಿಂತನೆ.

ಭಾರತೀಯ ಹೆಮ್ಮೆಯ ಪುತ್ರರನ್ನು ಅವಹೇಳನ ಮಾಡಿರುವ ಆರೋಪಿಯ ಗಡಿಪಾರಿಒತ್ತಾಯಿಸಿ  ಸಾಮೂಹಿಕ ಜನಾಂದೋಲನಕ್ಕೆ  ಶೀಘ್ರವೇ ಕರೆ ನೀಡಲು, ದೇಶಭಕ್ತರಿಂದ ಚಿಂತನೆ.

23/11/202423/11/2024nadubadenews@gmail.com
ನಡುಬಾಡೆಕ್‌ ನಲ್ಲಾಮೆ ಬಯಂದ, ಚೆಕ್ಕೇರ ಚಂದ್ರಪ್ರಕಾಶ್‌…

ನಡುಬಾಡೆಕ್‌ ನಲ್ಲಾಮೆ ಬಯಂದ, ಚೆಕ್ಕೇರ ಚಂದ್ರಪ್ರಕಾಶ್‌…

05/11/202405/11/2024nadubadenews@gmail.com
ಸುವರ್ಣ ಕರ್ನಾಟಕ ರಾಜ್ಯೋತ್ಸ- 2024, ತೊಮ್ಮಾನ ಪಡ್ಂದ‌, ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅಯಿಂಗಕ್ ನಲ್ಲಾಮೆ….

ಸುವರ್ಣ ಕರ್ನಾಟಕ ರಾಜ್ಯೋತ್ಸ- 2024, ತೊಮ್ಮಾನ ಪಡ್ಂದ‌, ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅಯಿಂಗಕ್ ನಲ್ಲಾಮೆ….

31/10/202431/10/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version