
ಮಡಿಕೇರಿ, ಜು.11 (nadubadenews):- ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗ (ಕರ್ನಾಟಕ-ಕೇರಳ ಪ್ರದೇಶ, ಭಾರತ ಸರ್ಕಾರ) ಬೆಂಗಳೂರು, ಇವರು ಮಲ್ಟಿ ಟಾಸ್ಕಿಂಗ್ ಸ್ಟಾಪ್(ನಾನ್ ಟೆಕ್ನಿಕಲ್) ಮತ್ತು ಹವಾಲ್ದಾರ್ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ: ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ ತತ್ಸಮಾನ, ಹೆಚ್ಚಿನ ವಿವರಗಳಿಗಾಗಿ ಎಸ್‍ಎಸ್‍ಸಿ ಅಧಿಸೂಚನೆಯ ಪ್ಯಾರಾ-9 ಅನ್ನು ಪರಿಶೀಲಿಸಬಹುದು.
ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗೆ 18 ರಿಂದ 25 ವರ್ಷಗಳು ಮತ್ತು ಹವಾಲ್ದಾರ್ ಹುದ್ದೆಗೆ 18-27 ವರ್ಷಗಳು. ನಿರ್ದಿಷ್ಟ ವರ್ಗದವರಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಅಧಿಸೂಚನೆಯ ಪ್ಯಾರಾ-6.2 ಅನ್ನು ಪರಿಶೀಲಿಸಬಹುದು. ಪರೀಕ್ಷೆಯ ಸಂಭವನೀಯ ದಿನಾಂಕ ಸೆಪ್ಟೆಂಬರ್, 20 ರಿಂದ ಅಕ್ಟೋಬರ್, 24 ರವರೆಗೆ. ಶುಲ್ಕ ರೂ.100(ಎಸ್ಸಿ/ಎಸ್ಟಿ/ಮಹಿಳೆ/ದಿವ್ಯಾಂಗರು/ಮಾಜಿ ಸೈನಿಕರಿಗೆ ಶುಲ್ಕವಿಲ್ಲ). ಅರ್ಜಿ ಸಲ್ಲಿಸಲು ಜುಲೈ, 24 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ ಇವರನ್ನು ಹಾಗೂ ದೂ.ಸಂ.8296020826 ಮತ್ತು ವೆಬ್‍ಸೈಟ್ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಮಂಜುನಾಥ ಅವರು ತಿಳಿಸಿದ್ದಾರೆ.