ಕದನೂರ್, ನ.27:(ವಿನೋದ್ ಜೆಸಿಬಿ) ಕುತ್ತ್ನಾಡ್, ಬೆರಳಿನಾಡ್, ಪ್ರೌಢಶಾಲೆಯ ವಜ್ರಮೂಹತ್ಸವದ ಪ್ರಯುಕ್ತ ನಡೆಯುತ್ತಿರುವ ಹಾಕಿ ಪಂದ್ಯವಾಳಿಯಲ್ಲಿ, ಎರಡನೇ ದಿನದ ಪ್ರಥಮ ಪಂದ್ಯದಲ್ಲಿ, K S R C ವಿರಾಜಪೇಟೆ ತಂಡವು, ವನಭದ್ರಕಾಳಿ ಹಾತೂರು ತಂಡವನ್ನು, ಶೂಟೌಟ್ ಮೂಲಕ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಪಂದ್ಯದಲ್ಲಿ Ksrc ವಿರಾಜಪೇಟೆ ಪರವಾಗಿ ಮೋಣ್ಣಪ್ಪ ಹಾತೂರು ಪರವಾಗಿ ಕುಮಾರ್ ಗೋಲು ಗಳಿಸಿ ಪಂದ್ಯ ಸಮಗೋಳಿಸಿದರು. ನಂತರದ ಶೂಟೌಟ್ನಲ್ಲಿ ವಿರಾಜಪೇಟೆ ತಂಡ 3–1 ಅಂತರದಿಂದ ಗೆಲುವು ದಾಖಲಿಸಿತು.
ದ್ವಿಥೀಯ ಪಂದ್ಯದಲ್ಲಿ M R F ಮೂರ್ನಾಡು ತಂಡವು ಚಾರ್ಮರ್ಸ್ ತಂಡವನ್ನು 4—1 ಗೋಲುಗಳಿಂದ ಸೋಲಿಸಿತು. ತಂಡದ ಪರವಾಗಿ ಅತಿಥಿ ಆಟಗಾರರಾದ ವಿಘ್ನೇಶ್ 6 ಹಾಗೂ 58 ನೇ ನಿಮಿಷ ಮತ್ತು ಶಾಪಾಜ್ 14ನೇ, ಆರವಿಂದ್ 48 ನಿಮಿಷದಲ್ಲಿ ಗೋಲು ಗಳಿಸಿದರು. ಚಾರ್ಮರ್ಸ್ ಪರವಾಗಿ, ಅತಿಥಿ ಆಟಗಾರ ಕಲಾನಿಧಿ 50 ನೇನಿಮಿಷದಲ್ಲಿ 01 ಗೋಲು ಗಳಿಸಿದರು.
ಮೂರನೇ ಪಂದ್ಯದಲ್ಲಿ ಕುತ್ತ್ನಾಡ್ ತಂಡವು, ಅತಿಥಿ ಆಟಗಾರರಾದ ಪ್ರಶಾಂತ್ 3ನೇ ಹಾಗೂ ಬೋಪಣ್ಣ 50 ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಫಾಲ್ಕನ್ ತಂಡದ ವಿರುದ್ಧ 2–0 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿತು.
ದಿನದ ನಾಲ್ಕನೇ ಪಂದ್ಯದಲ್ಲಿ ಮಲ್ಮ ಸ್ಪೋರ್ಟ್ಸ್ ಕ್ಲಬ್ ತಂಡವು, ಬೊಳಿಯೂರ್ ತಂಡವನ್ನು 3-2 ಗೋಲುಗಳ ಅಂತರದಿಂದ ಸೋಲಿಸಿ, ಮುಂದಿನ ಸುತ್ತಿಗೆ ಪ್ರವೇಶಿಸಿತು. ವಿಜೇತ ತಂಡದ ಪರವಾಗಿ ಪಹಾದ್ 10ನೇ ನಿಮಿಷ ಮತ್ತು ಪಿರೋಜ್ 30ನೇ ನಿಮಿಷ ಹಾಗೂ ಮೊಹಮ್ಮದ್ ಮೊಜ್ 56 ನೆ ನಿಮಿಷದಲ್ಲಿ ಗೋಲ್ ಗಳಿಸಿದರು. ಬೊಳಿಯೂರು ತಂಡದ ಪರವಾಗಿ ಬೋಪಣ್ಣ ಮತ್ತು ರೋಷನ್ ಗೋಲ್ ಗಳಿಸಿ ಸೋಲಿನ ಅಂತರ ತಗ್ಗಿಸಿದರು.
ದಿನದ ಕೊನೆಯ ಪಂದ್ಯದಲ್ಲಿ, ಕಿರುಗೂರು ತಂಡದ ದಿಲನ್ ಹಾಗೂ ಪೆನಾಲ್ಟಿ ಸ್ಟ್ರೊಕ್ ನಲ್ಲಿ ದೀಪಕ್ ಗಳಿಸಿದ ಗೋಲ್ನಿಂದ ಬೋರಳಿನಾಡ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು ಬೋರಳಿನಾಡ್ ತಂಡದ ಪರ, ಯತೀಶ್ ಪೆನಾಲ್ಟಿ ಸ್ಟ್ರೊಕ್ನಲ್ಲಿ ಗೋಲ್ ಗಳಿಸಿ ಅಂತರವನ್ನು ತಗ್ಗಿಸಿದರು
ಪಂದ್ಯವಾಳಿಯ ನಿರ್ದೇಶಕರಾಗಿ ಸಣ್ಣುವಂಡ ಲೋಕೇಶ್ ನಂಜಪ್ಪ, ತೀರ್ಪುಗಾರರಾಗಿ ಚೈಯಂಡ ಅಪ್ಪಚ್ಚು, ಕರವಂಡ ಅಪ್ಪಣ, ಕುಪ್ಪಂಡ ದಿಲನ್, ರಾಯಲ್ ಐಯ್ಯಣ್ಣ, ಸಚಿನ್ ಮಂದಣ್ಣ, ವಿನೋದ್ ಕುಮಾರ್, ಅಪ್ಪಚೆಟೋಳಂಡ ಅಯ್ಯಪ್ಪ, ಕಲ್ಮಾಡಂಡ ಸೋಮಣ್ಣ, ಚೊಯಮಾಡಂಡ ಚಂಗಪ್ಪ, ಅನ್ನಾಡಿಯಂಡ ಪೊನ್ನಣ್ಣ, ಮೂಕಚಂಡ ನಾಚ್ಚಪ್ಪ, ಕಾರ್ಯನಿರ್ವಹಿಸಿದರು. ವೀಕ್ಷಕ ವಿವರಣೆಯನ್ನು ಮಾಳೇಟಿರ ಶ್ರೀನಿವಾಸ್ ನೀಡಿದರು.
ಅಂತಿಮವಾಗಿ ಗೆಲ್ಲುವ ತಂಡಗಳಿಗೆ, ಬಹುಮಾನವಾಗಿ, ಪ್ರಥಮ 1 ಲಕ್ಷ, ದ್ವಿತೀಯ 60 ಸಾವಿರ, ತೃತೀಯ 40 ಸಾವಿರ, ನಾಲ್ಕನೇ ಸ್ಥಾನಕ್ಕೆ 15 ಸಾವಿರ ಘೋಷಿಸಲಾಗಿದೆ.
ನಾಳಿನ ಪಂದ್ಯದಲ್ಲಿ, 9AM ಮಾಹದೇವರ ಸ್ಪೋರ್ಟ್ಸ್ ಕ್ಲಬ್ vs ಶಿವಾಜಿ ನಾಪೋಕ್ಲ್, 10 AM M R F ಮೂರ್ನಾಡು vs ಬೊಟ್ಟಿಯತ್ ನಾಡ್ ಕುಂದ, 11AM. ಕೊಣನಕಟ್ಟೆ Xl vs ಕುತ್ತ್ ನಾಡು ಸ್ಟ್ರಕರ್, 12 PM ಈಶ್ವರಿ ಯೂತ್ ಕ್ಲಬ್ ಬೆಗೂರು vs ಡ್ರಿಬ್ಲರ್ಸ್ ಹಂಪ್ ಕುತ್ತ್ ನಾಡು, 1 PM ಅಮ್ಮತಿ ಸ್ಪೋರ್ಟ್ಸ್ ಕ್ಲಬ್ vs ಬ್ಲೆಜ್ ಮೂರ್ನಾಡು ನಡುವೆ ನಡಿಯಲಿದೆ.