Site icon nadubadenews.com

ಕೆನರಾ ಬ್ಯಾಂಕ್‌ನ ಒನ್‌ ಟೈಂ ಸೆಟಲ್‌ಮೆಂಟ್‌ ಯೋಜನೆ ಬಳಸಿಕೊಳ್ಳಿ: ಬಿಜೆಪಿ ರೈತ ಮೋರ್ಚಾ ಮನವಿ..

Spread the love

ಮಡಿಕೇರಿ,ಡಿ.26: ಕೆನರಾ ಬ್ಯಾಂಕ್ ನಿಂದ ಹಮ್ಮಿಕೊಂಡಿರುವ ಒನ್ ಟೈಮ್ ಸೆಟಲ್‌ ಮೆಂಟ್‌  ಎಂಬ ಕೇಂದ್ರ ಸರಕಾರದ ದೊಡ್ಡದೊಂದು ಯೋಜನೆಯ ಲಾಭವನ್ನು ಕೊಡಗಿನ ಕಾಫಿ ಬೆಳೆಗಾರರು ಪಡೆದುಕೊಳ್ಳಬೇಕು ಎಂದು ಕೊಡಗು ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಅಮ್ಮಣಿಚಂಡ ರಂಜಿಪೂಣಚ್ಚ ಕರೆ ನೀಡಿದ್ದಾರೆ.

ಕೇಂದ್ರ ಸರಕಾರವು ಕಾಫಿ ಬೆಳೆಗಾರರಿಗೆ ಸರ್ಫೆಸಿ ಕಾಯ್ದೆ ತಪ್ಪಿಸಲು, ಒನ್ ಟೈಮ್ ಸೆಟಲ್‌ಮೆಂಟ್‌ ಯೋಜನೆ ಜಾರಿಗೆ ತಂದಿದ್ದು, ಅದನ್ನು ಇದೀಗ ಕೆನರಾ ಬ್ಯಾಂಕ್ ಅನುಷ್ಠಾನಗೊಳಿಸಿರುವುದನ್ನು ಸ್ವಾಗತಿಸಿದ ಅವರು, ಕೊಡಗಿನ ಕಾಫಿ ಬೆಳೆಗಾರರು 26 ಮತ್ತು 27ರಂದು ನಡೆಯುವ ವಿಶೇಷ ಅದಾಲತ್ತಿನಲ್ಲಿ ಭಾಗವಹಿಸಿ  ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು, ಹೆಚ್ಚಿನ ಮಾಹಿತಿಗೆ ತಮ್ಮ ಸ್ಥಳೀಯ ಕೆನರಾಬ್ಯಾಂಕ್‌ ಶಾಖೆ ಅಥವಾ ಸ್ಥಳೀಯ ಬಿಜೆಪಿ ಕಾರ್ಯಕರ್ತರನ್ನು ಸಂಪರ್ಕಿಸಿ ಎಂದು ಮನವಿ ಮಾಡಿದ್ದಾರೆ.

Exit mobile version