
Nadubadenews, ವಿರಾಜಪಟೆ, ಅ.21: ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಸಣ್ಣದಾದ ಮಳೆ ಬಂದರೂ ಪ್ರವಾಹದ ಪರಿಸಿಸಸ್ಥತಿ ನಿರ್ಮಾಣ ಆಗುತಿತ್ತು, ಇದರಿಂದ ತೀವ್ರ ಟೀಕೆಗೆ ಗುರಿಯಾಗಿದ್ದ, ಪುರಸಭೆ, ಇಂದು ನೂತನ ಅಧ್ಯಕ್ಷರಾದ ಮನೆಯ ಪಂಡ ದೇಚಮ್ಮ ಕಾಳಪ್ಪ ಹಾಗೂ ಸದಸ್ಯರು ಅಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದರು.
ಅನಧಿಕೃತ ತಡೆಗಳಿಂದಾಗಿ, ಕೆಲವು ಕಡೆಗಳಲ್ಲಿ ಕೃತಕ ಪ್ರವಾಹ ನಿರ್ಮಾಣವಾಗುತ್ತಿತ್ತು. ಹೀಗಾಗಿ ಕೆಲ ವಾರ್ಡುಗಳ ವ್ಯಾಪ್ತಿಯಲ್ಲಿ ಬರುವ ರಾಜಕಲುವೆ ಹಾಗೂ ಚರಂಡಿಗಳ ಮೇಲೆ ಅನಧಿಕೃತವಾಗಿ ಸ್ಥಳೀಯ ನಿವಾಸಿಗಳು ನಿರ್ಮಿಸಿಕೊಂಡಿದ್ದ ಸ್ಲಾಬ್, ತಡೆಗೋಡೆಗಳನ್ನು ಒಡೆದು ಹಾಕಿ, ಮಳೆ ನೀರು ಸರಾಗವಾಗಿ ಹೊರ ಹೋಗುವಂತೆ ಮಾಡುವ ಸಲುವಾಗಿ ವಿರಾಜಪೇಟೆ ಪುರಸಭೆ, ಅಂತಹ ಜಾಗಗಳಿಗೆ ಖುದ್ದು ಭೇಟಿ ನೀಡಿ, ಪರಿಶೀಲಿಸಿ ತಕ್ಷಣ ತೆರವು ಕಾರ್ಯಾಚರಣೆ ನಡೆಸುತ್ತಿದೆ.
ಪುರಸಭೆಯ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗುತಿದ್ದು, ಒತ್ತುವರಿದಾರರೂ ಸಹಕರಿಸಿ, ಮಳೆನೀರಿನ ಸುಗಮ ಹರಿವಿಗೆ ಅನುವಾಗುತಿದ್ದಾರೆ.