https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕುಶಾಲನಗರ ಮಹಿಳೆಯ ಮನೆಗೆ ಹೋದವರು ವಕ್ಫ್‌ಬೋರ್ಡ್‌ ಅಲ್ಲ, ಯಾರು ದೂರವಾಣಿಯೂ ಮಾಡಿ ಬೆದರಿಸಿದ ದಾಖಲೆಗಳಿಲ್ಲ. ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ. ಕೊಡಗು ಜಿಲ್ಲಾ ಪೊಲೀಸ್ ಅಧಿಕೃತ ಪ್ರಕಟಣೆ

ಕುಶಾಲನಗರ ಮಹಿಳೆಯ ಮನೆಗೆ ಹೋದವರು ವಕ್ಫ್‌ಬೋರ್ಡ್‌ ಅಲ್ಲ, ಯಾರು ದೂರವಾಣಿಯೂ ಮಾಡಿ ಬೆದರಿಸಿದ ದಾಖಲೆಗಳಿಲ್ಲ. ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ. ಕೊಡಗು ಜಿಲ್ಲಾ ಪೊಲೀಸ್ ಅಧಿಕೃತ ಪ್ರಕಟಣೆ

Uncategorized
08/11/202408/11/2024nadubadenews@gmail.comLeave a Comment on ಕುಶಾಲನಗರ ಮಹಿಳೆಯ ಮನೆಗೆ ಹೋದವರು ವಕ್ಫ್‌ಬೋರ್ಡ್‌ ಅಲ್ಲ, ಯಾರು ದೂರವಾಣಿಯೂ ಮಾಡಿ ಬೆದರಿಸಿದ ದಾಖಲೆಗಳಿಲ್ಲ. ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ. ಕೊಡಗು ಜಿಲ್ಲಾ ಪೊಲೀಸ್ ಅಧಿಕೃತ ಪ್ರಕಟಣೆ
Spread the love
ಕುಶಾಲನಗರ ಮಹಿಳೆಯ ಮನೆಗೆ ಹೋದವರು ವಕ್ಫ್‌ಬೋರ್ಡ್‌ ಅಲ್ಲ, ಯಾರು ದೂರವಾಣಿಯೂ ಮಾಡಿ ಬೆದರಿಸಿದ ದಾಖಲೆಗಳಿಲ್ಲ. ಸುಳ್ಳು ಸುದ್ದಿ ಹಬ್ಬಿಸಿದರೆ ಕ್ರಮ. ಕೊಡಗು ಜಿಲ್ಲಾ ಪೊಲೀಸ್ ಅಧಿಕೃತ ಪ್ರಕಟಣೆ

ಮಡಿಕೇರಿ, ನ.08: ಇತ್ತೀಚೆಗೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಕೊಡವತಿ ಮಹಿಳೆಯ ಮನೆಗೆ ವಕ್ಫ್‌ ಅಧಿಕಾರಿಗಳೆಂದು  ಹೇಳಿಕೊಂಡು ಇಬಬ್ರು ವ್ಯಕ್ತಿಗಳು ಬಂದು ಬೆದರಿಸಿದರೆಂದೂ, ನಂತರ ದೂರವಾಣಿಯ ಮೂಲಕವೂ ಮನೆ ಖಾಲಿ ಮಾಡುವಂತೆ ಒತ್ತಡ ಹಾಕಿದರೆಂಬ ವಿಚಾರ  ಸಾಮಾಜಿಕ ಮಾದ್ಯದಲ್ಲಿ ಪ್ರಾರಂಭವಾಗಿ,  ಕಾಡ್ಗಿಚ್ಚಿನಂತೆ ರಾಜ್ಯಾದ್ಯಂತೆ ಹರಡಿ, ತೀವೃ ಚರ್ಚೆಗೆ ಗ್ರಾಸವಾಗಿದಲ್ಲದೆ, ಜಿಲ್ಲೆಯಲ್ಲಿ ಆತಂಕವನ್ನೂ ಸೃಷ್ಟಿಸಿತ್ತು. ಈ ಕುರಿತು ಸ್ವಯಂ ಆಸಕ್ತಿಯಿಂದ ಕಾರ್ಯ ನಿರ್ವಹಿಸಿದ ಕೊಡಗು  ಜಿಲ್ಲಾಪೋಲಿಸರು, ಪ್ರಕರಣ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾದ್ಯಮ ಪ್ರಕಟಣೆ ಹೊರಡಿಸಿರುವ, ಜಿಲ್ಲಾ ಪೋಲೀಸ್‌ ವರಿಷ್ಠಾಧಿಕಾರಿಗಳು, ದಿನಾಂಕ: 06-11-2024 ರಂದು ಶ್ರೀಮತಿ ಪುಚ್ಚಿಮಂಡ ರೇಣುಕಾ ಉತ್ತಪ್ಪ ಎಂಬುವವರಿಗೆ ಸೇರಿದ, ಕುಶಾಲನಗರ ಮುಳ್ಳುಸೋಗೆ ಗ್ರಾಮದಲ್ಲಿರುವ ಪ್ರಾಪರ್ಟಿಗೆ 2 ಜನರು ಬಂದು, ಇದು ವಕ್ಸ್ ಬೋರ್ಡ್‌ ಗೆ ಸೇರಿದ ಆಸ್ತಿ ನೀವು ಈ ಜಾಗವನ್ನು ಖಾಲಿ ಮಾಡಬೇಕು, ಇಲ್ಲದಿದ್ದರೆ ಜಾಗ ಖಾಲಿ ಮಾಡಿಸಲು ಹೊರಗೆ 15 ಜನ ಇದ್ದರೆ ಎಂಬುದಾಗಿ ಕೊಡವ ಸಮಾಜದ ವಿಳಾಸಕ್ಕೆ ಬರೆದಿರುವ ಪತ್ರವು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವುದು ಕಂಡಬಂದಿರುತ್ತದೆ. ಈ ಕುರಿತು ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರ ಕಛೇರಿ ಅಥವಾ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ಬಂದಿಲ್ಲ ಎಂದಿದ್ದಾರೆ.

ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ಕುರಿತು, ಸ್ವಯಂ ಪೂರ್ವಕವಾಗಿ ದಿನಾಂಕ: 07-11-2024 ರಂದು ಶ್ರೀಮತಿ ಹೆಚ್.ಟಿ.ಗೀತಾ, ಪಿಎಸ್‌ಐ, ಕುಶಾಲನಗರ ಟೌನ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರನ್ನು ಬೆಂಗಳೂರುನಲ್ಲಿರುವ ಶ್ರೀಮತಿ ಪುಚ್ಚಿಮಂಡ ರೇಣುಕಾ ಉತ್ತಪ್ಪ ರವರ ಮನೆಗೆ ಕಳುಹಿಸಿ, ಸದರಿ ಘಟನೆ ಕುರಿತು ಮಾಹಿತಿ ಪಡೆದು ವಿಚಾರಣೆಯನ್ನು ನಡೆಸಿ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಅನ್ನು ದಾಖಲಿಸಲಾಗಿರುತ್ತದೆ. ಎಂದು ಪೊಲೀಸ್‌  ವರಿಷ್ಟಾದಿಕಾರಿ ಕೆ. ರಾಮರಾಜನ್‌ ಪ್ರಕಟಣೆಯಲ್ಲಿ ತಿಳಿಸಿದ್ದು, ಸದರಿ ಘಟನೆಯ ಕುರಿತು ಈವರೆಗಿನ ವಿಚಾರಣೆಯಲ್ಲಿ ಈ ಕೆಳಕಂಡ ವಿವರ ತಿಳಿದು ಬಂದಿರುತ್ತದೆ ಎಂದು ಪ್ರಕಟಿಸಿದ್ದಾರೆ.

ಪೋಲೀಸ್‌ ಇಲಾಖೆಯ ತನಿಖಾ ಪ್ರಕಟಣೆಯಂತೆ,  ಇದು ಪ್ರೈವೇಟ್ ಪ್ರಾಪರ್ಟಿ ಆಗಿದ್ದು, ವಕ್ಸ್ ಬೋರ್ಡ್ ಆಸ್ತಿಯಾಗಿರುವುದಿಲ್ಲ. ವಕ್ಸ್ ಬೋರ್ಡ್ ಕಛೇರಿಯಿಂದ ಯಾವುದೇ ವ್ಯಕ್ತಿಗಳು ಬಂದಿರುವುದಿಲ್ಲ ಹಾಗೂ ಜಾಗ ಖಾಲಿ ಮಾಡುವ ಸಂಬಂಧ ವಕ್ಸ್ ಬೋರ್ಡ್‌ನಿಂದ ಯಾವುದೇ ನೋಟೀಸ್ ನೀಡಿರುವುದು ಕಂಡುಬಂದಿರುವುದಿಲ್ಲ. ಈ ಘಟನೆ ಕುರಿತು ಅವರ ಮನೆಯ ಸುತ್ತ-ಮುತ್ತಲಿನ ಜನರಲ್ಲಿ ವಿಚಾರಣೆ ನಡೆಸಿದ್ದು, 15 ಜನರು ಬಂದಿರುವ ಬಗ್ಗೆಯೂ ವಿಚಾರಣೆಯಲ್ಲಿ ಕಂಡುಬಂದಿರುವುದಿಲ್ಲ ಎಂದಿದ್ದಾರೆ.

 ಶ್ರೀಮತಿ ಪುಚ್ಚಿಮಂಡ ರೇಣುಕಾ ಉತ್ತಪ್ಪ ರವರಿಗೆ 29-10-2024 & 30-10-2024 ರಂದು ಕರೆ ಮಾಡಿ, ಬೆದರಿಕೆ ಹಾಕಿರುವ ಬಗ್ಗೆ ತಿಳಿಸಿದ್ದು, ಮೊಬೈಲ್ ಕರೆಗಳನ್ನು ಪರಿಶೀಲಿಸಲಾಗಿ, ಆ ದಿನಾಂಕದಂದು ಬೆದರಿಕೆ ಕರೆ ಬಂದಿರುವ ಕುರಿತು ಮಾಹಿತಿ ಇರುವುದಿಲ್ಲ ಹಾಗೂ ಅವರ ಪೋನ್ ಅನ್ನು ಪರಿಶೀಲಿಸಲಾಗಿದ್ದು, ಅಂತಹ ಯಾವುದೇ ಕರೆ ಸ್ವೀಕರಿಸಿರುವ ಬಗ್ಗೆ ಮಾಹಿತಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೂರುದಾರರ ಹೇಳಿಕೆಯಂತೆ, 2 ಜನರು ಬಂದಿದ್ದರೆಯೇ ಅಥವಾ ಇಲ್ಲವೇ? ಒಂದು ವೇಳೆ ಬಂದಿದ್ದರೇ, ವೈಯಕ್ತಿಕ ವಿಚಾರಕ್ಕಾಗಿ ಅಥವಾ ಬೇರೆ ಯಾವ ಕಾರಣಗಳಿಗಾಗಿ ಬಂದಿರುವ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ಕುರಿತು ಮುಂದಿನ ದಿಗಳಲ್ಲಿ ಸಮಗ್ರ ಚಿತ್ರಣ ಹೊರಬರಲಿದೆ ಎಂದಿದ್ದಾರೆ.

ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದನ್ನು ನಿಲ್ಲಿಸುವಂತೆ ಕೋರಿರುವ ಪೊಲೀಸ್‌  ಇಲಾಖೆಯು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡಿಸಿ ಸಮಾಜದ ಸಮರಸ್ಯವನ್ನು ಕದಡುವ ಪ್ರಯತ್ನ ನಡೆದಲ್ಲಿ ಹಾಗೂ ಕೋಮು ಸೌಹಾರ್ದತೆಯನ್ನು ಕದಡುವ ದುರುದ್ದೇಶದಿಂದ ಮತ್ತು ಸಮುದಾಯವನ್ನು ಒಡೆದು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಸುದ್ದಿಯನ್ನು ಪೋಸ್ಟ್ ಮಾಡುವವರ ವಿರುದ್ಧ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ.  

ಯಾವುದೇ ಅಪರಿಚಿತ ವ್ಯಕ್ತಿಗಳು ಯಾವುದೇ ಸರ್ಕಾರಿ ಇಲಾಖೆ ಅಥವಾ ಸರ್ಕಾರದ ವತಿಯಿಂದ ಬಂದಿರುವುದಾಗಿ ತಿಳಿಸಿ, ಬೆದರಿಕೆ ಹಾಕುವುದು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರುತೇವೆ. ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ. ಎಂದು ಕೊಡಗು ಜಿಲ್ಲಾ ಪೋಲೀಸರು ಜನತೆಗೆ ಅಭಯ ನೀಡಿದ್ದಾರೆ.

Post navigation

ಉಳ್ಳಿಯಡ ಡಾಟಿ ಪೂವಯ್ಯ ಅಯಿಂಗಡ, ನಾಡ್‌ಲ್‌ ನಾಳ್‌….
ಶಾಸಕರ  ಮಾರ್ಗದರ್ಶನದಲ್ಲಿ ನಿಷೇದಿತ ತಿನಿಸುಗಳ ವಿರುದ್ದ,  ಸಾಮೂಹಿಕ ಸಮರ ಸಾರಿದ ಅಧಿಕಾರಿಗಳು.  ತಯಾರಕ ಕಂಪನಿಗಳನ್ನು ಪತ್ತೆ ಮಾಡುವುದೇ ಸವಾಲು. ಕೊಡಗಿನ ಮಾರಾಟಗಾರರ ಮೇಲೆ, ಕಾನೂನು ಅಸ್ತ್ರ…

Related Posts

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಕೊಡಗಿನಲ್ಲಿ ಇಬ್ಬರನ್ನು ಬಂಧಿಸಿದ ಎನ್ ಐ ಎ …

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ, ಕೊಡಗಿನಲ್ಲಿ ಇಬ್ಬರನ್ನು ಬಂಧಿಸಿದ ಎನ್ ಐ ಎ …

05/12/202405/12/2024nadubadenews@gmail.com
ವಿರಾಜಪೇಟೆ ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವ

ವಿರಾಜಪೇಟೆ ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವ

29/12/202429/12/2024nadubadenews@gmail.com
ರಾಷ್ಟ್ರ ಮಟ್ಟ, ಮಕ್ಕಡ  ರೋಲರ್‌ ಸ್ಕೇಟಿಂಗ್‌,  ಬೊಳ್ಳಿ ಗೆದ್ದ ಕೋಟೆರ ಡಿವಿನ್‌ ಗಣಪತಿ

ರಾಷ್ಟ್ರ ಮಟ್ಟ, ಮಕ್ಕಡ  ರೋಲರ್‌ ಸ್ಕೇಟಿಂಗ್‌,  ಬೊಳ್ಳಿ ಗೆದ್ದ ಕೋಟೆರ ಡಿವಿನ್‌ ಗಣಪತಿ

07/12/202407/12/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version