https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕುಶಾಲನಗರ ಅಭಿವೃದ್ಧಿಗೆ ಸದಾ ಸಿದ್ಧ- ಶಾಸಕ ಡಾ.ಮಂತರ್ ಗೌಡ

ಕುಶಾಲನಗರ ಅಭಿವೃದ್ಧಿಗೆ ಸದಾ ಸಿದ್ಧ- ಶಾಸಕ ಡಾ.ಮಂತರ್ ಗೌಡ

News, Informatin , Enteetinement and Advertisement
11/06/202511/06/2025nadubadenews@gmail.comLeave a Comment on ಕುಶಾಲನಗರ ಅಭಿವೃದ್ಧಿಗೆ ಸದಾ ಸಿದ್ಧ- ಶಾಸಕ ಡಾ.ಮಂತರ್ ಗೌಡ
Spread the love
ಕುಶಾಲನಗರ ಅಭಿವೃದ್ಧಿಗೆ ಸದಾ ಸಿದ್ಧ- ಶಾಸಕ ಡಾ.ಮಂತರ್ ಗೌಡ

ಕುಶಾಲನಗರ ಜೂ.11 (Nadubade News): ಇಂದು ಕುಶಾಲನಗರ ಪುರಸಭೆಯ ನೂತನ ಕಚೇರಿ ಸಂಕೀರ್ಣ ಉದ್ಘಾಟನೆಯಾಗಿದ್ದು, ಇದರೊಂದಿಗೆ ಪುರಸಭೆ ಆಡಳಿತ ಮತ್ತು ಸಿಬ್ಬಂದಿಗಳು ಸಾರ್ವಜನಿಕರ ಕೆಲಸಕಾರ್ಯಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಬೇಕು
ಯಾವುದೆ ದೂರು ಬಾರದಂತೆ ಎಚ್ಚರ ವಹಿಸಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಕಿವಿಮಾತು ಹೇಳಿದರು . ಕುಶಾಲನಗರ ಪುರಸಭೆ ನೂತನ ಕಛೇರಿ ಸಂಕೀರ್ಣ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಸಚಿವರಾದ ರಹೀಂ ಖಾನ್ ಮತ್ತು ಬೈರತಿ ಸುರೇಶ್ ಅವರ ಸ್ಪಂದನೆಯಿಂದ ಕುಶಾಲನಗರ,ಸೋಮವಾರಪೇಟೆ, ಮಡಿಕೇರಿ ಸೇರಿದಂತೆ ಮೂರು ಇಂದಿರಾ ಕ್ಯಾಂಟೀನ್ ಮಂಜೂರು ಮಾಡಲಾಗಿದ್ದು, ಕುಶಾಲನಗರ ಇಂದಿರಾ ಕ್ಯಾಂಟೀನ್‌ನಲ್ಲಿ 5೦೦ ಊಟ ವಿತರಣೆಗೆ ಅವಕಾಶ ಕಲ್ಪಿಸುವಂತೆ ಸಚಿರ ರಹೀಂ ಖಾನ್‌ರಿಗೆ ಶಾಸಕ ಡಾ.ಮಂತರ್ ಗೌಡ ಮನವಿ ಮಾಡಿದರು.
ಕುಶಾಲನಗರ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲು, ಪಾಲಿಟೆಕ್ನಿಕ್ ಕಾಲೇಜು ಬಳಿ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಜಾಗ ಮಂಜೂರಾಗಿದ್ದು, ಸಧ್ಯದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು. ಡಿಸೆಂಬರ್ ಒಳಗೆ ಕುಶಾಲನಗರದಲ್ಲಿ ಬಸ್ ಡಿಪೋ ಉದ್ಘಾಟನೆ, ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾವ್ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತಾಗಲು ಪುತ್ಥಳಿ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಡಾ.ಮಂತರ್ ಗೌಡ ಇದೇ ಸಂದರ್ಭದಲ್ಲಿ ತಿಳಿಸಿದರು.

Post navigation

ಬೂಕರ್‌ ವಿಜೇತೆ ದೀಪಾಭಾಸ್ತಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯೆ…
ಗೋಣಿಕೊಪ್ಪ ಪಾರ್ಕಿಂಗ್‌ ಸ್ಥಳದಲ್ಲಿ ಗಂಟೆಟ್ಟಲೆ ವಾಹನ ನಿಂತರೆ ಟೋಯಿಂಗ್‌, ಪೊಲೀಸ್‌ ಸೂಚನೆ…

Related Posts

ಡಾ ಎಪಿಜೆ ಅಬ್ದುಲ್ ಕಲಾಂ ವಸತಿ ವಿಜ್ಞಾನ ಕಾಲೇಜು ಕಟ್ಟಡಕ್ಕೆ ಶಾಸಕ ಡಾ. ಮಂಥರ್‌ ಗೌಡ ಭೂಮಿ ಪೂಜೆ

ಡಾ ಎಪಿಜೆ ಅಬ್ದುಲ್ ಕಲಾಂ ವಸತಿ ವಿಜ್ಞಾನ ಕಾಲೇಜು ಕಟ್ಟಡಕ್ಕೆ ಶಾಸಕ ಡಾ. ಮಂಥರ್‌ ಗೌಡ ಭೂಮಿ ಪೂಜೆ

18/06/202518/06/2025nadubadenews@gmail.com
ಕೊಡಗಿನಲ್ಲಿ ಮಳೆ ಹಿನ್ನಲೆ ಸಾಹಸ ಚಟುವಟಿಕೆಗಳಿಗೆ ನಿರ್ಭಂಧ – ಜಿಲ್ಲಾಧಿಕಾರಿ ವೆಂಕಟ್ ರಾಜಾ  ಕಟ್ಟುನಿಟ್ಟಿನ ಆದೇಶ…

ಕೊಡಗಿನಲ್ಲಿ ಮಳೆ ಹಿನ್ನಲೆ ಸಾಹಸ ಚಟುವಟಿಕೆಗಳಿಗೆ ನಿರ್ಭಂಧ – ಜಿಲ್ಲಾಧಿಕಾರಿ ವೆಂಕಟ್ ರಾಜಾ ಕಟ್ಟುನಿಟ್ಟಿನ ಆದೇಶ…

26/05/202526/05/2025nadubadenews@gmail.com
ಮುದ್ದಂಡ ಕಪ್ : ಚಾಲನೆಗೊಂಡ ಮಹಿಳಾ ಹಾಕಿ…

ಮುದ್ದಂಡ ಕಪ್ : ಚಾಲನೆಗೊಂಡ ಮಹಿಳಾ ಹಾಕಿ…

21/04/202521/04/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version