nadubaḑe ವಿಷೇಶ, ಅ.21 : ಬಾಲಕಿಯರಿಗಾಗಿಯೇ ಇರುವ ಭಾರತದ ಏಕೈಕ ಶಾಲೆಯಾದ ಕಿತ್ತೂರ ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯು, 2025-26ನೇ ಸಾಲಿಗೆ 6ನೇ ತರಗತಿ ಪ್ರವೇಶ ಪರೀಕ್ಷೆಗಾಗಿ ಅರ್ಜಿಗಳನ್ನು ಕರೆದಿದೆ.
ಶೈನಿಕ ತರಬೇತಿ ನೀಡಿ ಸಧೃಡ ಭಾರತದ ನಿರ್ಮಾಣ ಹಾಗೂ ರಾಷ್ಟ್ರಪ್ರೇಮವನ್ನು ಹುಟ್ಟು ಹಾಕುವ ಗುರಿ ಹೊಂದಿರುವ, ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆಯು ಲಿಖಿತ, ದೇಹದಾರ್ಢನೆ, ವೈದ್ಯಕೀಯ ಹಾಗೂ ಮೌಖಿಕ ಸಂದರ್ಶನ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.
2025-26ನೇ ಸಾಲಿನ 6 ನೇ ತರಗತಿ ಪ್ರವೇಶ ಪರೀಕ್ಷೆಗಳು ದಿನಾಂಕ:02-02- 2025 ರಂದು ನಡೆಯಲಿವೆ.ಓ.ಎಮ್.ಆರ್.[OMR] ಮಾದರಿ ವಿಧಾನದಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ಇಂಗ್ಲಿಷ್ ಅಥವಾ ಕನ್ನಡ ದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. 6 ನೇ ತರಗತಿ ಪ್ರವೇಶ ಪರೀಕ್ಷೆಯನ್ನು ಕಿತ್ತೂರ, ವಿಜಯಪುರ, ಬೆಂಗಳೂರು, ಕಲಬುರಗಿ [ಕರ್ನಾಟಕದಲ್ಲಿ ಮಾತ್ರ]ಯಲ್ಲಿ ನಡೆಸಲಾಗುತ್ತದೆ.
6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಮಾಡಲು, ಜೂನ್ 1, 2013 ಮತ್ತು ಮೇ 31, 2015ರ ನಡುವೆ ಜನಿಸಿದ 5ನೆಯ ವರ್ಗದಲ್ಲಿ ಅಧ್ಯಯನ ಮಾಡುತ್ತಿರುವ ಬಾಲಕಿಯರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಾಗಿರುತ್ತಾರೆ.
6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಮಾಡುವ ವಿದ್ಯಾರ್ಥಿಗಳು ಪರೀಕ್ಷೆ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ರೂ.2000/-, (ರೂ.1,600/-ಪಜಾ/ಪಪಂ ಅಭ್ಯರ್ಥಿಗಳು, ಕರ್ನಾಟಕದ ರಹವಾಸಿಗಳು ಮಾತ್ರ. ಇತ್ತೀಚಿನ ಅಧಿಕೃತ ಜಾತಿ ಪ್ರಮಾಣ ಪತ್ರದ ನಕಲು ಪ್ರತಿಯನ್ನು ಲಗತ್ತಿಸಬೇಕು).
ಆಯ್ಕೆಯಾದ ಅಭ್ಯರ್ಥಿಗಳು, ರೂ. 2,24,300/-(ಊಟ, ವಸತಿ, ಸಮವಸ್ತ್ರ ಮತ್ತು ಇತರೆ ಠೇವಣಿಗಳು ಸೇರಿ) ಶೈಕ್ಷಣಿಕ ಸಾಮಗ್ರಿ ಮತ್ತು ಇತರೆ ಶುಲ್ಕ ಹೊರತುಪಡಿಸಿ. ಶುಲ್ಕ ಭರಿಸಬೇಕಾಗುತ್ತದೆ.
ಭರ್ತಿ ಮಾಡಲಾದ ಅರ್ಜಿಗಳನ್ನು ವಿಳಂಬ ಶುಲ್ಕರಹಿತವಾಗಿ ಸಲ್ಲಿಸಲು ಕೊನೆಯ ದಿನಾಂಕ, 24 ಅಕ್ಟೋಬರ್ 2024 ರಿಂದ 20 ಡಿಸೆಂಬರ್ 2024. ದಂಡ ಸಹಿತವಾಗಿ ಅರ್ಜಿ ಸಲ್ಲಿಕೆ ದಿನಾಂಕ:16 ರಿಂದ 31 ಡಿಸೆಂಬರ್ 2024. ಕರ್ನಾಟಕ ನಿವಾಸಿಯಾಗಿರುವ, ಪ.ಜಾ/ಪ.ಪಂಗಡದವರಿಗೆ ಭರ್ತಿಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 05 ಜನವರಿ 2025
ಆನ್ ಲೈನ್ ಹಣ ಪಾವತಿಯನ್ನು www.kittursainikschool.org ಮುಖಾಂತರ ಮಾಡಬೇಕು. ಇದೇ ಜಾಲತಾಣದಿಂದಲೂ ವಿವರಣಾ ಪುಸ್ತಕ ಹಾಗೂ ಅರ್ಜಿಗಳನ್ನು ಪಡೆಯಬಹುದು.
ವಿ.ಸೂ: ಪರೀಕ್ಷಾ ಮಾದರಿ, ಪ್ರವೇಶ ಮಾನದಂಡ ಮತ್ತು ಪ್ರಶ್ನೆಪತ್ರಿಕೆಗಳ ವಸ್ತುತಾತ್ಪರ್ಯವನ್ನು ಬದಲಿಸುವ ಹಕ್ಕನ್ನು ಶಾಲಾ ಆಡಳಿತ ಮಂಡಳಿಯು ಹೊಂದಿದೆ. ಪ್ರವೇಶ ಪತ್ರಗಳನ್ನು ಸಾಮಾನ್ಯ ಅಂಚೆ ಚೀಟಿ ಮುಖಾಂತರ ಕಳಿಸಲಾಗುವುದು. ವಿವರಣಾ ಪುಸ್ತಕಗಳ ಪ್ರವೇಶ ಪತ್ರ ಹಾಗೂ ಫಲಿತಾಂಶ ಅಂಚೆ ಮೂಲಕ ತಲುಪದೇ ಇದ್ದಲ್ಲಿ ಅಥವಾ ವಿಳಂಬವಾದಲ್ಲಿ ಶಾಲೆ ಜವಾಬ್ದಾರಿಯಾಗಿರುವದಿಲ್ಲ. ಭರ್ತಿಮಾಡಿದ ಅರ್ಜಿಗಳ ಜೊತೆ ಸ್ವ-ವಿಳಾಸ ಹೊಂದಿದ ರೂ 5/- ಸ್ಟಾಂಪ್ ಲಗತ್ತಿಸಿದ ಲಕೋಟೆಯನ್ನು ಕಳುಹಿಸತಕ್ಕದ್ದು, ಕಿತ್ತೂರು ಹೋಬಳಿ ಹಾಗೂ ರಕ್ಷಣಾ ಸೇವಾ ಸಿಬ್ಬಂದಿ ಮೀಸಲಾತಿ ಬಯಸುವವರು ಸಂಬಂಧಪಟ್ಟ ದಾಖಲಾತಿಗಳನ್ನು ಸಲ್ಲಿಸತಕ್ಕದ್ದು, ಒಮ್ಮೆ ಸಂದಾಯಿಸಿದ ಶುಲ್ಕವನ್ನು ಯಾವುದೇ ಸಂದರ್ಭದಲ್ಲಿ ಮರುಪಾವತಿಸುವುದಿಲ್ಲ. ಇತ್ತೀಚಿನ ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕು. ಸುಳ್ಳು ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸಬಾರದು.
ಕಛೇರಿಯ ಸಮಯ: ವಾರದ ದಿನಗಳಲ್ಲಿ ಸೋಮವಾರ ಬೆ.9.00 ರಿಂದ ಮ.1.30 ಮತ್ತು ಮ.3.00 ರಿಂದ ಸಂಜೆ .5.30 ರ ವರಗೆ ಭಾನುವಾರ/ ರಜಾದಿನಗಳಂದು ತೆರೆದಿರುವುದಿಲ್ಲ. ದೂರವಾಣಿ: 08288-234607