
ನಡುಬಾಡೆ ಸಂಪಾದಕೀಯ, ಏ.10:- ಅವ್ವ ಕಾವೇರಿಯ ಪವಿತ್ರ ತೇರ್ಥೋದ್ಬವವೇ ಆಗುವುದಿಲ್ಲ ಎಂದು ಮಾಜೀ ಶಾಸಕರೂ, ರಾಜ್ಯ ರಾಜಕಾರಣದಲ್ಲಿ ತನ್ನದೇ ಛಾಪು ಮೂಡಿಸಿದ್ದ, ಎ.ಕೆ. ಸುಬ್ಬಯ್ಯ ಹೇಳಿದ್ದರು ಎಂದು ವಿವಾದೊಂದು ಶುರುವಾಗಿತ್ತು, ಆದರೆ ಇದರ ವಾಸ್ತವತೆಯನ್ನುಅಂದಿನ ಸುಬ್ಬಯ್ಯ ಅವರ ಒಡನಾಡಿಗಳು ಸುಬ್ಬಯ್ಯ ಅವರೇ ಮುಂಚೂಣಿಯಲ್ಲಿ ನಿಂತು ಕಟ್ಟಿದ ಭಾರತೀಯ ಜನಸಂಘ, ನಂತರ ಬಾಜಪಾ ಆದಾಗಲೂ ಅದರೊಂದಿಗೇ ಗುರುತಿಸಿಕೊಂಡ ನಾಯಕರು ಹೇಳಿದ ವಾಸ್ತವ ಕಥೆಯನ್ನೊಮ್ಮೆ ನೋಡಿ.
ಕೆಲ ವರ್ಷಗಳ ಹಿಂದೆ ಭಾರೀ ವಿವಾಧವಾಗಿತ್ತು. ಆ ನಂತರ ಕಳೆದ ಮೂರು ವರ್ಷಗಳ ಹಿಂದೆ ಕೊಡಗಿನ ರಾಜಕಾರಣಕ್ಕೆ ಎ.ಕೆ.ಸುಬ್ಬಯ್ಯ ಅವರ ಪುತ್ರ ಎ.ಎಸ್. ಪೊನ್ನಣ್ಣ ಅವರು ಎಂಟ್ರಿಯಾದ ಮೇಲೆ ಇದೇ ವಿವಾದ ಮುನ್ನೆಲೆಗೆ ಬಂದು ಭಾರೀ ಸಂಚಲನ ಸೃಷ್ಟಿಸಿತ್ತು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪೊನ್ನಣ್ಣರ ವಿರೋದಿ ಬಣದ ಪ್ರಮುಖ ಅಸ್ತ್ರವೇ ಈ ವಿಚಾರ ಆಗಿತ್ತು. ಇದೆಲ್ಲವನ್ನೂ ಮೆಟ್ಟಿ ನಿಂತು ಪೊನ್ನಣ್ಣ ಅವರು ಶಾಸಕರಾಗಿ ಆಯ್ಕೆಯಾದರು. ಇದೀಗ ಮತ್ತೊಮ್ಮೆ ಇದೇ ವಿಚಾರ ಜಿಲ್ಲೆಯಲ್ಲಿ ಭಾರೀ ಚರ್ಚೆಯಾಗುತ್ತಿದೆ. ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯರ ಆತ್ಮ ಹತ್ಯೆ ವಿಚಾರವಾಗಿ ರಾಜಕೀಯ ಮೇಲಾಟ ನಡೆಯುತ್ತಿರುವ ಸಂದರ್ಭದಲ್ಲಿ, ಮಾಜೀ ಸಂಸದ ಪ್ರತಾಪ್ ಸಿಂಹ ಪೊನ್ನಣ್ಣರನ್ನು ಟೀಕಿಸುತ್ತಾ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
ಅಸಲಿಗೆ ಎ.ಕೆ. ಸುಬ್ಬಯ್ಯ ಅವರು ಇಂತದೊಂದು ಹೇಳೀಕೆ ನೀಡಿದ್ದರ ಎಂದು ಹುಡುಕುತ್ತಾ ಹೋದರೆ, ಸುಬ್ಬಯ್ಯ ಅವರನ್ನು ಬಲ್ಲ ಬಿಜೆಪಿಗರ ಅಭಿಪ್ರಾಯ ಪ್ರಕಾರ, ಎ.ಕೆ. ಸುಬ್ಬಯ್ಯ ಹಾಗೆ ಹೇಳಿಯೇ ಇಲ್ಲ. ಬದಲಾಗಿ ಅವರ ಹೇಳಿಕೆಯನ್ನು ತಿರುಚಿ ರಾಜಕೀಯ ಕಾರಣಕ್ಕೆ ಅವರ ವಿರುದ್ದ ಅಸ್ತ್ರವಾಗಿ ಬಳಸಲಾಗಿತ್ತು.
ಹಾಗಾದರೆ ಅಂದು ಎ.ಕೆ. ಸುಬ್ಬಯ್ಯ ಅವರು ಕಾವೇರಿಯ ವಿಚಾರದಲ್ಲಿ ನೀಡಿದ ಹೇಳಿಕೆಯಾದರು ಏನೂ..?
ವಾಸ್ತವವಾಗಿ ಅಂದು ಏನಾಗಿತ್ತು ಎಂದು ಹಿರೀಯ ಬಿಜಿಪಿ ನಾಯಕರನ್ನೇ ವಿಚಾರಿಸಿದಾಗ ಅವರು ಘಟನೆಯನ್ನು ವಿವರಿಸಿದ್ದು ಹೀಗೆ, ʼ90ರ ದಶಕದಲ್ಲಿ ಒಮ್ಮೆ ಎ.ಕೆ. ಸುಬ್ಬಯ ಅವರು ಸಮಾಜದ ಮೇಲ್ವರ್ಗದಲ್ಲಿ ಗುರುತಿಸಿಕೊಂಡು ಸಮಾಜವನ್ನು ಒಡೆಯುತ್ತಿರುವವರ ವಿರುದ್ದ, ವೇದಿಕೆಯೊಂದರಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭ ಕಾವೇರಿ ಸನ್ನಿಧಿಯನ್ನು ಪ್ರಸ್ತಾಪಿಸಿದ ಅವರು, “ನಮ್ಮ ಪವಿತ್ರ ಕ್ಷೇತ್ರ ತಲೆಕಾವೇರಿಯಲ್ಲಿಯೂ, ಇಂತಃ ಸಮಾಜಘಾತುಕ ಶಕ್ತಿಗಳದ್ದೇ ಪಾರಮ್ಯ, ಕ್ಷೇತ್ರದ ನಿರ್ವಹಣೆ ಸಂಪ್ರದಾಯಬದ್ದವಾಗಿ ನಡೆಯುತಿಲ್ಲ, ಇವರ ಆಟಾಟೋದಿಂದಾಗಿ ಕಾವೇರಿಯೇ ಅವಿತು ಕೂತಿದ್ದಾಳೆ, ತೇರ್ತರೂಪಿಯಾಗಿ ಬರುತ್ತಿರುವ ಬಗೆಯೂ ಅನುಮಾನವಿದೆ. ಇದನ್ನು ಪರಿಶೀಲಿಸಿ, ಶ್ರೀಕ್ಷೇತ್ರದ ಪಾವಿತ್ರ್ಯಕ್ಕೆ ದಕ್ಕೆಬಾರದ ರೀತಿಯಲ್ಲಿ, ಕ್ರಮ ಕೈಗೊಳ್ಳದಿದ್ದರೆ, ಮುಂದೊಂದು ದಿನ ಪೈಪ್ ಮೂಲಕ ತೀರ್ತೋದ್ಬವ ಮಾಡಿಸಿಬಿಡುತ್ತಾರೆ ಎಂದಿದ್ದರು.” ಆದರೆ ಮಾರನೇ ದಿನ, ಮಾದ್ಯಮಗಳಲ್ಲಿ ಕಾವೇರಿ ತೀರ್ತೋದ್ಬವವೇ ಸುಳ್ಳು ಎಂದು ಎ.ಕೆ. ಸುಬ್ಬಯ್ಯ ಹೇಳಿಕೆ ಎಂದು ಪ್ರಕಟಗೊಂಡಿತ್ತು. ಇಷ್ಟು ಸಾಕಿತ್ತು ಸುಬ್ಬಯ್ಯರನ್ನು ಹಣಿಯಲು ಕಾಯುತಿದ್ದವರಿಗೆ, ಇದನ್ನು ಭಾವಾನಾತ್ಮಕವಾಗಿ ತಿರುಗಿಸಿ ಸುಬ್ಬಯರನ್ನು ಕೊಡವ ಕುಲದ್ರೋಹಿ ಎನ್ನುವಂತೆ ಬಿಂಬಿಸಲಾಯಿತು. ಪಕ್ಷದ ನೆಲೆಗಟ್ಟಿನಲ್ಲಿ ನಾವೂ ಸುಬ್ಬಯ್ಯರನ್ನು ವಿರೋಧಿಸಿ ಈ ವಿಚಾರದ ಸತ್ಯ ಗೊತ್ತಿದ್ದರೂ ಕೂಡ, ಅಂದು ವಾಚಾಮಗೋಚರಾವಗಿ ಬೈದಿದ್ದೆವು ಎಂದು ಕಂಬದ ಕಡ ಹೋರಾಟದಲ್ಲಿ ಎ.ಕೆ. ಸುಬ್ಬಯ್ಯ ಅವರೊಂದಿಗೆ ಗುರುತಿಸಿಕೊಂಡು, ನಂತರ ಅವರೊಂದಿಗೆ ಭಾರತೀಯ ಜನಸಂಘದಲ್ಲಿಯೂ ದುಡಿದು, ಆ ಸಿದ್ದಾಂತಕ್ಕೆ ಒಗ್ಗಿಹೋಗಿ ಇಂದಿಗೂ ಕೂಡ ಬಿಜೆಪಿಯಲ್ಲಿಯೇ ತಮ್ಮನ್ನ ಪ್ರಭಲವಾಗಿ ತೊಡಗಿಸಿಕೊಂಡಿರುವ, ಹಿರೀಯ ಧುರೀಣ ಹಾಗೂ ಅದೇ ಪಕ್ಷದ ಮಾಜೀ ಜಿಲ್ಲಾಧ್ಯಕ್ಷರಾಗಿರುವ ಪ್ರಸ್ತುತ ಪೊನ್ನಣ್ಣ ವಿರೋಧಿ ಬಣದಲ್ಲಿ ಪ್ರಭಲವಾಗಿ ಗುರುತಿಸಿಕೊಂಡಿರುವ ಬಿಜೆಪಿ ನಾಯಕರೊಬ್ಬಬರು, ಹೇಳುತ್ತಾರೆ.
ಇವರಿಬ್ಬರನ್ನು ಪ್ರತ್ಯೇಕವಾಗಿ ಮಾತನಾಡಿಸಿದಾಗ, ಮನದಾಳದ ಮಾತನ್ನು ಹೇಳಿದ ಇಬ್ಬರೂ ಕೂಡ ನಾವು ಎ.ಕೆ. ಸುಬ್ಬಯ್ಯ ಅವರ ಪಕ್ಕಾ ಶಿಷ್ಯರು ಅವರ ಕಂಬದ ಹೋರಾಟ ಇಡೀ ದಕ್ಷಿಣ ಕೊಡಗನ್ನು ಇಂದು ಉಳಿಸಿಕೊಟ್ಟಿದೆ. ಆ ಹೋರಾಟದಲ್ಲಿ ಯುವಕರಾಗಿದ್ದ ನಾವೂ ಕೂಡ ಭಾಗವಹಿಸಿದದ್ದೆವು. ಅಂದಿನಿಂದ ಸುಬ್ಬಯ್ಯ ಅವರೊಂದಿಗೆ ನಮ್ಮ ಒಡನಾಟವಿತ್ತು, ಅಲ್ಲಿಂದಲೇ ನಾವು ಜನಸಂಘದ ಹೋರಾಟದಲ್ಲೂ ಸಕ್ರಿಯರಾದೆವು. ರಾಜ ರಾಜಕಾರಣದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಸುಬ್ಬಯ್ಯ ಅವರಿಗೆ ಪಕ್ಷ ಮಾಡಿದ ಅವಮಾನಕ್ಕೆ ಅವರು ಪಕ್ಷ ತೊರೆದರು. ಅಂದು ನಾವು ಸಿದ್ದಾಂತಕ್ಕೆ ರಾಜಿಯಾಗದೆ ಇಲ್ಲೇ ಉಳಿದೆವು, ಆದರೆ ಸುಬ್ಬಯ ಅವರಿಗೆ ಆದ ಅನ್ಯಾಯಕ್ಕೆ ದ್ವನಿಯಾಗಲಾರದೆ ನಮ್ಮಂತ ಎಷ್ಟೋ ಅವರ ಶಿಷ್ಯರು ಕಣ್ಣೀರು ಹಾಕಿದ್ದೆವು ಎಂದು ಆ ದಿನಗಲನ್ನೂ ನೆನಸಿಕೊಳ್ಳುತ್ಥಾರೆ ಇಂದಿನ ಬಿಜಿಪಿಯ ಹಿರಿಯ ನಾಯಕರು. ಅವರ ಪ್ರಕಾರ ಎ.ಕೆ. ಸುಬ್ಬಯ್ಯ ಅವರು ಭಕ್ತಿಪೂರ್ವಕವಾಗಿ ಪೂಜಿಸುತಿದ್ದದ್ದು ಮಾತೆ ಕಾಔಏರಿಯನ್ನು ಹಾಗೂ ಗುರುಕಾರೋಣರನ್ನ ಮಾತ್ರ. ಅಂತದರಲ್ಲಿ ತಾಯಿಗೆ ಅವರು ಅವಮಾನ ಮಾಡಲು ಸಾಧ್ಯವೇ ಇಲ್ಲ. ರಾಜಕೀಯ ಸಿದ್ದಾಂತದೊಳಗೆ ನಾವೆಲ್ಲ ಬಂಧಿಗಳಾಗಿ, ಮೇಲಿನ ಅಣತಿಯಂತೆ ವರ್ತಿಸಬೇಕಾಗಿದೆ ಎಂದರು. ಈಗಲೂ ನಮ್ಮ ಹೆಸರನ್ನು ಪ್ರಸ್ತಾಪಿಸಬೇಡಿ ನಮಗೂ ರಾಜಕೀಯ ಭವಿಷ್ಯ ಬೇಕಾಗಿದೆ ಎನ್ನುತ್ತಾರೆ.
ಸರಿಸುಮಾರು ಕಾಲು ಶತಮಾನಗಳ ಹಿಂದಿನ ಘಟನೆಯೊಂದು, ಸುಬ್ಬಯ್ಯ ಅವರ ನಿಧನಾನಂತರವೂ ಸದ್ದುಮಾಡಿ ಸಂಚಲನಮಾಡುತ್ತಿದೆ ಎಂದರೆ ಕೊಡವರಿಗೂ ಕಾವೇರಿಗೂ ಇರುವ ಭಾವನಾತ್ಮಕ ಸಂಬಂಧ ಅಂತದು. ಜೊತೆಗೆ ಕೊಡವರು ಇಲ್ಲಿಯ ರಾಜಕೀಯ ದಾಳಗಳಾಗುತ್ತಿರುವುದನ್ನೂ ಅರಿಯಬೇಕಿದೆ. ತಾಯಿ ಕಾವೇರಿ ಕೊಡವರ ಕುಲದೇವಿ ಮಾತ್ರವಲ್ಲ ಹೃದಯಂತಾರಾಳದ ಪಾವಿತ್ರ್ಯತೆಯ ಸಂಬಂಧ. ಕೊಡವರು ಮಾತ್ರವಲ್ಲದೆ ಕೊಡಗಿನ ಇತರರೂ ತಾಯಿಯನ್ನು ಆರಾಧಿಸುತ್ತಾರೆ, ದಕ್ಷಿಣ ಕರ್ನಾಟಕದ ಜೀವನದಿ ಎಂಬ ಕಾರಣಕ್ಕೆ ಆ ಭಾಗದವರೂ ಪೂಜನೀಯವಾಗಿ ಕಾಣುತ್ತಾರೆ. ಇನ್ನು ಕೊಡವರು ವರ್ಷಕೊಮ್ಮೆ ತಾಯಿ ತೇರ್ಥರೂಪಿಯಾಗಿ ಆವಿರ್ಭವಿಸುವ ಪುಣ್ಯ ಘಳಿಗೆಯನ್ನ ಕಣ್ಣ್ ತುಂಬಿಸಿಕೊಳ್ಳುವುದೇ ತಮ್ಮ ಪೂರ್ವಜನ್ಮದ ಪುಣ್ಯ ಎಂಬಂತೆ ತುಲಾ ಚಂಗ್ರಾಂದಿಯಂದು ಸಾಗರೋಪಾದಿಯಲ್ಲಿ ಆಗಮಿಸುತ್ತಾರೆ. ಕೊಡವರಿಗೆ ಕಾವೇರಿಯ ಮೂಲ, ಕಾವೇರಿಯೇ ಮಂತ್ರ, ಕಾವೇರಿಯೇ ಎಲ್ಲ. ಆ ತೇರ್ಥವೇ ಪಾಪ, ಪುಣ್ಯ, ಹುಟ್ಟು, ಸಾವು, ಕಾರ್ಯಗಳಿಗೆ ತೇರ್ಥ ಪ್ರೋಕ್ಷಣೆಯೇ ಸರ್ವತ್ರ ಪವಿತ್ರವಾದದ್ದು. ಇಂತಃ ಭಾವನಾತ್ಮಕ ವಿಚಾರವನ್ನು ಕೆದಕಿದರೆ, ರಾಜಕೀಯ ಅಸ್ತಿತ್ವಕ್ಕೊಂದು ಎಸಳು ಸಿಕ್ಕೀತೆಂಬುದು ಹಲವು ರಾಜಕಾರಣಿಗಳ ರಾಜಕೀಯ ದಾಳ. ಆದರೆ ಸತ್ಯ ಸತ್ಯತೆಯನ್ನು ಸವಲೋಕಿಸದೆ, ಭಾವನಾತ್ಮಕ ಕರೆಗಳಿಗೆ ನಾವೂ ಕಿವಿಯಾಗಿ, ಪ್ರತಿಕ್ರಿಯಿಸುವುದೋ, ಪ್ರತಿಭಟಿಸುವುದೋ ಮಾಡಿದರೆ ಸತ್ಯವನ್ನು ಹೊದ್ದು ಕೂತಿರುವ ತಾಯಿ ಕಾವೇರಿಯೂ ನಮ್ಮನ್ನ ಮೆಚ್ಚಲಾರಳು.