https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಕಾವೇರಿ ಕಾಲೇಜುಗಳನ್ನು ಸರ್ಕಾರಿ ಅನುದಾನಕ್ಕೆ ಒಳಪಡಿಸಲು, ಪೊನ್ನಣ್ಣ ಮನವಿ

ಕಾವೇರಿ ಕಾಲೇಜುಗಳನ್ನು ಸರ್ಕಾರಿ ಅನುದಾನಕ್ಕೆ ಒಳಪಡಿಸಲು, ಪೊನ್ನಣ್ಣ ಮನವಿ

News, Informatin , Enteetinement and Advertisement
05/03/202505/03/2025nadubadenews@gmail.comLeave a Comment on ಕಾವೇರಿ ಕಾಲೇಜುಗಳನ್ನು ಸರ್ಕಾರಿ ಅನುದಾನಕ್ಕೆ ಒಳಪಡಿಸಲು, ಪೊನ್ನಣ್ಣ ಮನವಿ
Spread the love
ಕಾವೇರಿ ಕಾಲೇಜುಗಳನ್ನು ಸರ್ಕಾರಿ ಅನುದಾನಕ್ಕೆ ಒಳಪಡಿಸಲು, ಪೊನ್ನಣ್ಣ ಮನವಿ

ಬೆಂಗಳೂರು: ಮಾ,05: ಗೋಣಿಕೊಪ್ಪ ಮತ್ತು ವಿರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜುಗಳನ್ನು ಸರ್ಕಾರದ ಅನುದಾನಕ್ಕೆ ಒಳಪಡಿಸಲು  ಮಾನ್ಯ ಶಿಕ್ಷಣ ಸಚಿವರಿಗೆ, ವಿರಾಜಪೇಟೆ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು ಕಾಲೇಜಿನ ನಿಯೋಗದೋಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು.

1968ರಲ್ಲಿ ಪ್ರಾರಂಭವಾಗಿರುವ, ಸುಮಾರು 55 ವರ್ಷಗಳಿಂದ ಕಾವೇರಿ ಪದವಿ ಪೂರ್ವ ಕಾಲೇಜು, ಗೋಣಿಕೊಪ್ಪ ಕಾವೇರಿ ಪದವಿಪೂರ್ವ ಕಾಲೇಜು, ವಿರಾಜಪೇಟೆ ಈ  ಎರಡೂ ಸಂಸ್ಥೆಗಳು ಉತ್ತಮ ಫಲಿತಾಂಶ, ಗುಣಮಟ್ಟದ ಶಿಕ್ಷಣದ ಸಾಧನೆ, ಉತ್ತಮ ಮೂಲ ಸೌಕರ್ಯ ಸೇರಿದಂತೆ ಜಿಲ್ಲೆಯಲ್ಲಿ ಅಗ್ರ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

 20 ವರ್ಷಗಳ ಹಿಂದೆ ಸರ್ಕಾರದ ಆದೇಶದಂತೆ ಪ್ರಥಮ ದರ್ಜೆ ಹಾಗೂ ಪಿಯು ಕಾಲೇಜುಗಳನ್ನು ಬೇರ್ಪಡಿಸಿದಾಗ, ಪಿಯು ಕಾಲೇಜು ಸಿಬ್ಬಂದಿಗಳು ಪೂರ್ಣ ಪ್ರಮಾಣದಲ್ಲಿ ಅನುದಾನಕ್ಕೆ ಒಳಪಡಬೇಕಾಗಿತ್ತು. ಆದರೆ ಅಂದು ಅದು ಆಗಲಿಲ್ಲ.  ಹಾಗಾಗಿ ಈ ಎರಡು ಕಾಲೇಜುಗಳನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಆರ್ಥಿಕ ಇಲಾಖೆಗೆ ಮರು ಪ್ರಸ್ತಾವನೆ ಸಲ್ಲಿಸಿ,  ಸರ್ಕಾರದ ಅನುದಾನಕ್ಕೆ ಒಳಪಡಿಸಲು ಇಂದು ವಿಧಾನಸೌಧದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ  ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರ ನೇತೃತ್ವದಲ್ಲಿ ಮಾನ್ಯ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.  ಈ ಸಂದರ್ಭದಲ್ಲಿ ಕಾವೇರಿ ಕಾಲೇಜಿನ ಅಧ್ಯಕ್ಷರಾದ ಮಂಡೆಪಂಡ ಸುಗುಣ ಮುತ್ತಣ್ಣ, ಕೆಜಿ ಗೋಪಾಲಕೃಷ್ಣ ಭಟ್, ಡಾ. ಅಕ್ರಂ, ಚೇತನ್ ಚಿಣ್ಣಪ್ಪ ಸೇರಿದಂತೆ ಇತರರು  ಉಪಸ್ಥಿತರಿದ್ದರು.

Post navigation

ಕೊಡವ ಎಜುಕೇಷನ್‌, ಕಲ್ಚರಲ್‌ ಪಿಂಞ ಸ್ಪೋರ್ಟ್ಸ್‌ ಟ್ರಸ್ಟ್‌ ಬೊಳಿಕ್:‌ ಮಿನಿ ಒಲಂಪಿಕ್‌ ಕಳಿನಮ್ಮೆಕ್‌ ಮೊಳಿ…
ಸರ್ಕಾರದ ವಿರುದ್ದ ಕೊಡಗು ಬಿಜೆಪಿ ನಾಳೆ ಅಹೋರಾತ್ರಿ ಧರಣಿ, ಸ್ಪಂದಿಸದಿದ್ದರೆ ಕೊಡಗು ಬಂದ್‌

Related Posts

ಕೊಡಗಿನ ಜಮ್ಮಬಾಣೆ,  ಪಟ್ಟೇದಾರ, ಪಹಣಿ  ಸಮಸ್ಯೆ ನಿವಾರಣೆಗೆ, ಕಾಯ್ದೆ ತಿದ್ದುಪಡಿಗೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಪ್ರಸ್ತಾವನೆ. 

ಕೊಡಗಿನ ಜಮ್ಮಬಾಣೆ, ಪಟ್ಟೇದಾರ, ಪಹಣಿ ಸಮಸ್ಯೆ ನಿವಾರಣೆಗೆ, ಕಾಯ್ದೆ ತಿದ್ದುಪಡಿಗೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಪ್ರಸ್ತಾವನೆ. 

15/07/202515/07/2025nadubadenews@gmail.com
ಕಾವೇರಿ ಕಾಲೇಜು ಹೊಸ  ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

ಕಾವೇರಿ ಕಾಲೇಜು ಹೊಸ  ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ

12/07/202512/07/2025nadubadenews@gmail.com
ರಾಷ್ಟ್ರೀಯ ಬಾಸ್ಕೇಟ್‌ ಬಾಲ್‌ ಕಳಿಕೆ ಕೇಳೆಟಿರ ಹರ್ಷಿತಬೋಪಯ್ಯ

ರಾಷ್ಟ್ರೀಯ ಬಾಸ್ಕೇಟ್‌ ಬಾಲ್‌ ಕಳಿಕೆ ಕೇಳೆಟಿರ ಹರ್ಷಿತಬೋಪಯ್ಯ

20/02/202520/02/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version