Site icon nadubadenews.com

ಕಾರ್ಮಿಕನ ಬಲಿ ಪಡೆದ  ಕಾಡಾನೆ  ಕಾರ್ಯಾಚರಣೆಗೆ ಸಂಕೇತ್ ಪೂವಯ್ಯ ನೇತೃತ್ವ…

ಕಾರ್ಮಿಕನ ಬಲಿ ಪಡೆದ  ಕಾಡಾನೆ  ಕಾರ್ಯಾಚರಣೆಗೆ ಸಂಕೇತ್ ಪೂವಯ್ಯ ನೇತೃತ್ವ…
Spread the love
ಕಾರ್ಮಿಕನ ಬಲಿ ಪಡೆದ  ಕಾಡಾನೆ  ಕಾರ್ಯಾಚರಣೆಗೆ ಸಂಕೇತ್ ಪೂವಯ್ಯ ನೇತೃತ್ವ…

ಸಿದ್ದಾಪುರ, ಏ.24:  ಸಿದ್ದಾಪುರ ಸಮೀಪ ಟಾಟಾ ಸಂಸ್ಥೆಯ ಎಮ್ಮೆಗುಂಡಿ ಎಸ್ಟೇಟಿನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಚಿನ್ನ ಮೇಸ್ತ್ರಿ (65 )ಇಂದು ಮುಂಜಾನೆ  ಕಾಡನೆ ದಾಳಿಗೆ ಬಲಿಯಾಗಿದ್ದಾರೆ. ಮುಂಜಾನೆ ವಾಕಿಂಗ್ ತೆರಳಿದ್ದ ಸಂದರ್ಭ ಈ ದಾಳಿ ನಡೆದಿದೆ.  ಘಟನಾ ಸ್ಥಳಕ್ಕೆ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಧಾವಿಸಿದ್ದು ಮೃತಪಟ್ಟ ಕಾರ್ಮಿಕನಿಗೆ ಸರ್ಕಾರದಿಂದ ನೀಡಬೇಕಾದ ಎಲ್ಲಾ ಪರಿಹಾರವನ್ನು ಆದಷ್ಟು ಶೀಘ್ರದಲ್ಲಿ ನೀಡಲು ಹಾಗೂ ಕಾಡಾನೆಯನ್ನು ಸೆರೆಹಿಡಿಯಲು ಕಾರ್ಯಚರಣೆ ಕೈಗೊಳ್ಳುವಂತೆ ವಿರಾಜಪೇಟೆ ಕ್ಷೇತ್ರ ಶಾಸಕ ಎ.ಎಸ್. ಪೊನ್ನಣ್ಣನವರು ನಿರ್ದೇಶನ ನೀಡಿರುವುದಾಗಿ ಸಂಕೇತ್ ಪೂವಯ್ಯ ಮಾಹಿತಿ ನೀಡಿದ್ದಾರೆ. ಈ ಕಾಡಾನೆಯನ್ನು  ಅರಣ್ಯಕ್ಕೆ ಆಟ್ಟುವ ಕಾರ್ಯಚರಣೆ ನಡೆಸಿ ಅರಣ್ಯಕ್ಕೆ ಅಟ್ಟಲಾಗಿತ್ತು, ಆದರೇ ಅದು ಈಗ ಮತ್ತೆ ಗ್ರಾಮಕ್ಕೆ ನುಸುಳಿದೆ. ಶೀಘ್ರ ಕಾರ್ಯಚರಣೆ ಆರಂಭಿಸಲಾಗುವುದು ಎಂದು ಸಂಕೇತ್ ಪೂವಯ್ಯ ಅವರು ತಿಳಿಸಿದ್ದಾರೆ.

Exit mobile version