
ಪೊನ್ನಂಪೇಟೆ, ಡಿ.04: ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾಫಿ ಬೆಳೆಗಾರರ ಅನುಕೂಲಕ್ಕಾಗಿ, ಕಾಫಿ ಕ್ರಾಪ್ ಕೇರ್ (Coffe Crop Care) ಹೆಸರಿನ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದೆ.
ಈ ಮೊಬೈಲ್ ಅಪ್ಲಿಕೇಶನ್ ಕಾಫಿ ಮತ್ತು ಇತರ ಸಃವರ್ತಿ ಬೆಳೆಗಳಿಗೆ ಸಂಬಂಧಿಸಿದ ಸಂಶಯ ಗೊಂದಲಗಳಿಗೆ ಪರಿಹಾರಗಳನ್ನು ಒದಗಿಸಲು, ವಿನ್ಯಾಸಗೊಳಿಸಲಾದ ಒಂದು ನವೀನ ಸಾಹಸವಾಗಿದೆ. ಈ ಅಪ್ಲಿಕೇಶನ್‌ನಲ್ಲಿ, ಯುರೋಪಿಯನ್ ತಯಾರಿ (EP), ಕರೆನ್ಸಿ ಪರಿವರ್ತಕ ಅರೇಬಿಕಾ ಮತ್ತು ರೋಬಸ್ಟಾ ಮಾರುಕಟ್ಟೆ ಸೂಚಕಗಳು, ಕಾಫಿ ಮತ್ತು ಮಿತ್ರ ಬೆಳೆಗಳಿಗೆ ರಸಗೊಬ್ಬರ, ಅಪ್ಲಿಕೇಶನ್ ಕ್ಯಾಲ್ಕುಲೇಟರ್, ಲೈಮ್ ಅಪ್ಲಿಕೇಶನ್ ಕ್ಯಾಲ್ಕುಲೇಟರ್, PH ಮಟ್ಟದ ಮಣ್ಣಿನ ಪರೀಕ್ಷೆ, ಸಬ್ಸಿಡಿ ವಿವರಗಳು, ಸಸಿ ನೆಡುವ ಸೂಚನೆಗಳು, ಮೋಟಾರ್ ವಿದ್ಯುತ್ ಬಳಕೆ ಮತ್ತು ವೆಚ್ಚದ ಕ್ಯಾಲ್ಕುಲೇಟರ್, ನೀರಾವರಿ ವಿವರ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಅಪ್ಲಿಕೇಶನ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ.

