
ವಿರಾಜಪೇಟೆ, ಜು.22(nadubadenews); ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ ವಿರಾಜಪೇಟೆ ತಾಲೂಕು ಅಧ್ಯಕ್ಷರಾಗಿ ಮುಕ್ಕಾಟಿರ ಕಾವೇರಮ್ಮ ಅವರನ್ನು ಆಯ್ಕೆ ಮಾಡಲಾಗಿದೆ. ಸಂಘಟನೆಯ ಜಿಲ್ಲಾಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರ ಉಪಸ್ಥತಿಯಲ್ಲಿ ಇಂದು ನಡೆದ ವಿರಾಜಪೇಟೆ ತಾಲೂಕು ಸಮಿತಿ ಸಭೆಯಲ್ಲಿ ಹಾಲಿ ಅಧ್ಯಕ್ಷರಾಗಿದ್ದ ವಿಜಯ್ ಪೂಜಾರಿ ಅವರು ವಯಕ್ತಿಕ ಕಾರಣದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಸದಸ್ಯರಾಗಿ ಮುಂದುವರೆಯಲಿದ್ದಾರೆ. ತಾಲೂಕು ಸಮಿತಿ ಉಪಾಧ್ಯಕ್ಷೃಆಗಿ ಕೆ.ಡಿ.ಹರೀಶ್, ನೂತನ ಸದಸ್ಯರಾಗಿ ಗೋಪಮ್ಮ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕರನೆರವಂಡ ಡ್ಯಾನಿ ಕುಶಾಲಪ್ಪ ಸೇರಿದಂತೆ ಪಧಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.