
ಮಡಿಕೇರಿ, ಮೇ.19(Nadubade News): ಬೀದಿ ನಾಯಿಗಳ ಸಂಖ್ಯೆಯನ್ನು ಮಾನವೀಯವಾಗಿ ತಡೆಗಟ್ಟುವ ಸಲುವಾಗಿ ಅನಿಮಲ್ ರಿಲೀಫ್ ಕೊಡಗು (ಎ.ಆರ್.ಕೆ.) ಸಂಸ್ಥೆ ಕಡಗದಾಳು ಗ್ರಾಮದಲ್ಲಿ ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಹಾಗೂ ಆ್ಯಂಟಿ ರೇಬೀಸ್ ಚುಚ್ಚುಮದ್ದು ಶಿಬಿರವನ್ನು ತಾ. ಮೇ 24 ಹಾಗೂ 25 ರಂದು ಹಮ್ಮಿಕೊಂಡಿದೆ. ಬೀದಿನಾಯಿಗಳನ್ನು ಮಾನವೀಯ ರೀತಿಯಲ್ಲಿ (ಕಡಗದಾಳು ವ್ಯಾಪ್ತಿಯಲ್ಲಿ ಮಾತ್ರ) ಹಿಡಿದು, ಅವುಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಅನುಭವಿ ಪಶುವೈದ್ಯರಿಂದ ನೆರವೇರಿಸಿ, ಚೇತರಿಕೆಯ ನಂತರ (ಸುಮಾರು 2 ಗಂಟೆಗಳ ನಂತರ) ನಾಯಿಗಳನ್ನು ಹಿಡಿದು ತಂದ ಸ್ಥಳಕ್ಕೆ ಬಿಡಲಾಗುವುದು. ಎರಡು ದಿನಗಳ ಶಿಬಿರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಡಗದಾಳು ಗ್ರಾಮದ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆಯಲಿದೆ.
ಸಬ್ಸಿಡಿ ದರದಲ್ಲಿ ಇತರ ಮಾಲೀಕರ ನಾಯಿಗಳಿಗೆ ಆ್ಯಂಟಿ ರೇಬೀಸ್ ಚುಚ್ಚುಮದ್ದನ್ನು ನೀಡಲಾಗುವುದಲ್ಲದೆ, ಲೇಬರ್ ಲೈನ್ನ ನಾಯಿಗಳಿಗೆ ಅತೀ ಕಡಿಮೆ ದರದಲ್ಲಿ ಚುಚ್ಚುಮದ್ದು ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ 9448190990/8971776662 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.