Site icon nadubadenews.com

ಕಟ್ಟೆಮಾಡ್ ‌ ಪ್ರಕರಣ ಮತ್ತೆ ಜಿಲ್ಲಾಧಿಕಾರಿ ಅಂಗಳಕ್ಕೆ…

ಕಟ್ಟೆಮಾಡ್ ‌ ಪ್ರಕರಣ ಮತ್ತೆ ಜಿಲ್ಲಾಧಿಕಾರಿ ಅಂಗಳಕ್ಕೆ…
Spread the love
ಕಟ್ಟೆಮಾಡ್ ‌ ಪ್ರಕರಣ ಮತ್ತೆ ಜಿಲ್ಲಾಧಿಕಾರಿ ಅಂಗಳಕ್ಕೆ…

ಮಡಿಕೇರಿ, ಫೆ. 11:         ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಲ್ಲಿರುವ ವಿವಾಧಿತ ಕಟ್ಟೆಮಾಡ್‌, ಮಾದೇವ ದೇವಾಲಯದ ಪ್ರಕರಣ ಮತ್ತೆ ಜಿಲ್ಲಾಧಿಕಾರಿಗಳ ಅಂಗಳಕ್ಕೆ  ಸೇರಿದೆ.  

          ಕುಪ್ಯಚಾಲೆಗೆ ಅವಮಾನ ಮಾಡಿ ಸಾಂಪ್ರದಾಯಿಕ ಉಡುಪು ಹಾಕದಂತೆ ಕೈಗೊಂಡಿರುವ ತೀರ್ಮಾನಕ್ಕೆ ಕಟ್ಟೆಮಾಡ್ ದೇವಾಲಯ ಸಮಿತಿ ಬದ್ದವಾಗಿದ್ದು ತಮ್ಮ ನಿರ್ಣಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದೆ.

          ತಿಂಗಳುಗಳ ಹಿಂದೆ ಕಟ್ಟೆಮಾಡ್ ಮಾದೇವರ ದೇವಾಲಯದಲ್ಲಿ ಕೊಡವರು ಕುಪ್ಯಚಾಲೆ ಧರಿಸಿ  ವಾರ್ಷಿಕ ಉತ್ಸವಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ, ಕೊಡವ ಮತ್ತು ಭಾಷಿಕರನ್ನು ತಡೆದು ಹಲ್ಲೆ ನಡೆಸಿ ಅವಮಾನಿಸಲಾಗಿತ್ತು. ಆ ನಂತರ ಪ್ರಕರಣ ತೀವ್ರ ಸ್ವರೂಪವನ್ನು ಪಡೆದು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ವಿವಾದವಾಗಿ ಸುದ್ದಿಯಾಗಿತ್ತು. 

          ಈ ಸಂದರ್ಭ ಮದ್ಯ ಪ್ರವೇಶಿಸಿದ ಜಿಲ್ಲಾಡಳಿತವು, ಶಾಂತಿ ಸಭೆ ನಡೆಸಿ, ದೇವಾಲಯ ಸಮಿತಿಯು ತನ್ನ ತೀರ್ಮಾನ ಮರು ಪರಿಶೀಲಿಸುವಂತೆ ಒಂದು ವಾರದ ಗಡುವು ನೀಡಿದ್ದು, ಅದಕ್ಕೆ ಪೂರಕವಾಗಿ ಸಭೆನಡೆಸಿದ ಸಮಿತಿಯು ಒಮ್ಮತದ ತೀರ್ಮಾನಕ್ಕೆ ಬರಲಾಗದೆ, ಮತ್ತೆ ಒಂದು ತಿಂಗಳ ಕಾಲಾವಕಾಶ ಕೋರಿದ್ದರು. ಇದನ್ನು ಪರಿಗಣೀಸಿದ ಜಿಲ್ಲಾಧಿಕಾರಿಗಳು ಫೆಬ್ರವರಿ 10ರವರೆಗೆ ಕಾಲಾವಕಾಶ ನೀಡಿದ್ದರೂ ಮತ್ತೆ ಇಂದು ದೇವಾಲಯ ಸಮಿತಿಯು ತನ್ನ ಹಿಂದಿನ ತೀರ್ಮಾನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಅಂತಿಮ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.

          ಇದೀಗ ಮತ್ತೆ ಜನತೆಯ ಚಿತ್ತ ಜಿಲ್ಲಾಧಿಕಾರಿಗಳತ್ತ ನೆಟ್ಟಿದ್ದು, ಜಿಲ್ಲಾಧಿಕಾರಿಗಳು ದೇವಾಲಯ ಸಮಿತಿಯನ್ನು ಅಮಾನತಿನಲ್ಲಿಟ್ಟು, ದೇವಾಲಯವನ್ನು ಸರ್ಕಾರದ ಸುಪರ್ದಿಗೆ ಪಡೆದು, ಮುಜರಾಯಿಗೆ ನೀಡುವರೆ ಅಥವಾ ಮತ್ತಷ್ಟು ವಿಳಂಬ ಮಾಡಿ, ವಿವಾದವನ್ನು ಜೀವಂತ ಇರಿಸುವರೇ ಎಂಬ ಕುತೂಹಲ ಮನೆಮಾಡಿದೆ.

Exit mobile version