Site icon nadubadenews.com

ಕಟ್ಟೆಮಾಡ್ ಊರ್‌ ಮಂದಿನಲ್ಲಿ ಊರೊರ್ಮೆ, ಕೊಡವ ಅಕಾಡೆಮಿ, ಸಂಘಟನೆಗಳ ಪ್ರಮುಖರು ಭಾಗಿ…

ಕಟ್ಟೆಮಾಡ್ ಊರ್‌ ಮಂದಿನಲ್ಲಿ ಊರೊರ್ಮೆ, ಕೊಡವ ಅಕಾಡೆಮಿ, ಸಂಘಟನೆಗಳ ಪ್ರಮುಖರು ಭಾಗಿ…
Spread the love
ಕಟ್ಟೆಮಾಡ್ ಊರ್‌ ಮಂದಿನಲ್ಲಿ ಊರೊರ್ಮೆ, ಕೊಡವ ಅಕಾಡೆಮಿ, ಸಂಘಟನೆಗಳ ಪ್ರಮುಖರು ಭಾಗಿ…

            ಕಟ್ಟೆಮಾಡ್, ಜ.20: ಮೂರ್ನಾಡು ಸಮೀಪದ ಕಟ್ಟೆಮಾಡ್‌ ಊರ್‌  ಮಂದಿನಲ್ಲಿ, 19/1/25ನೇ  ಭಾನುವಾರದಂದು, ಪುತ್ತರಿ ಊರೊರ್ಮೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ಪ್ರತೀ ವರ್ಷಕ್ಕಿಂತ ಈ ಭಾರಿ ಅತೀ ವಿಜ್ರಂಭಣೆ ಮತ್ತು ಸಂಭ್ರಮದಿಂದ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ಮತ್ತು ಹಲವು ಕೊಡವ ಸಂಘಟನೆಗಳ ಮುಖಂಡರ ಭಾಗಿತ್ವದಲ್ಲಿ ನಡೆದದ್ದು ವಿಷೇಶವಾಗಿತ್ತು.

            ಊರ್‌    ತಕ್ಕರಾದ ನಂದೇಟೆರ ಒಕ್ಕ ಮತ್ತು ಮಂದ್‌ ಸಮಿತಿಯ ಅಧ್ಯಕ್ಷರಾದ ಚಂಗಣಮಕ್ಕಡ ವಿನು ಅಪ್ಪಯ್ಯ ಅವರ ಕೊರವುಕಾರಿಕೆಯಲ್ಲಿ ನಡೆದ  ಕಾರ್ಯಕ್ರಮದಲ್ಲಿ,  ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್‌ ನಾಚಯ್ಯ, ಮೂರ್ನಾಡು ಕೊಡವ ಸಮಾಜ ಅಧ್ಯಕ್ಷ ಪುದಿಯೊಕ್ಕಡ ಕಾಶಿ ಕರುಂಬಯ್ಯ, ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್‌ಬೆಳ್ಯಪ್ಪ,  ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ, ಕೊಡವ ರೈಡರ್ಸ್‌ ಕ್ಲಬ್‌ ಅಧ್ಯಕ್ಷ ಅಜ್ಜಿಕುಟ್ಟಿರ ಪೃಥ್ವಿಸುಬ್ಬಯ್ಯ, ಹಳ್ಳಿಗಟ್ಟು ಊರ್‌ ತಕ್ಕ ಚಮ್ಮಟ್ಟಿರ ಪ್ರವೀಣ್‌ ಉತ್ತಪ್ಪ,  ಕನೆಕ್ಟಿಂಗ್‌ ಕೊಡವಾಸ್‌ ಸಂಚಾಲಕ ಶಾಂತೆಯಂಡ ನಿರನ್‌ ನಾಚಪ್ಪ, ಸೇರಿದಂತೆ ಹಲವು ಕೊಡವ ಸಂಘಟನೆಗಳ ಪ್ರಮುಖರು ಮತ್ತು ಗ್ರಾಮದ ಸರ್ವ ಸಮುದಾಯಗಳು ಸೇರಿದ್ದ ಸಭೆಯಲ್ಲಿ, ಮೊದಲಿಗೆ ಮಾದೇವ, ಭದ್ರಕಾಳಿ, ಅಜ್ಜಪ್ಪ ಕಾರೋಣರನ್ನು ಪ್ರಾರ್ಥಿಸಿ ಮಂದ್‌ಗೆ ಅಕ್ಕಿ ಮತ್ತು ಪುಷ್ಟ ಅರ್ಚನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

  ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್‌ ನಾಚಯ್ಯ, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯ ನಮ್ಮ ಪೃಕೃತಿದತ್ತ ಬಳುವಳಿಯಾಗಿದ್ದು, ಇದನ್ನು ಕಾಪಾಡುವ  ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ  ನಿಲ್ಲಬೇಕಾಗಿದೆ. ನಮ್ಮ ಸಂಸ್ಖೃತಿಯು ನಮ್ಮ ಬಳಿಯೇ ಇರುವಂತಾಗಲು, ನಾವು ಅದನ್ನು ಬಳುಸುವುದು ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಅಕಾಡೆಮಿಯು ಪೂರ್ಣ ಸಹಕಾರ ನೀಡಲಿದ್ದು, ಮುಂದಿನ ದಿನಗಳಲ್ಲಿ ಕಟ್ಟೆಮಾಡಿನಲ್ಲಿ ಅಕಾಡೆಮಿಯ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ನಂತರ ಮಾತನಾಡಿದ ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ, ಚಾಮೆರ ದಿನೇಶ್‌ಬೆಳ್ಯಪ್ಪ ಅವರು, ನಮಗೆ ಏಟು ಬಿದ್ದಾಗ ಮಾತ್ರ ನಮ್ಮ ತಪ್ಪಿನ ಅರಿವು ಆಗುತ್ತದೆ. ಹಾಗೇ ನಮ್ಮ ಸಂಸ್ಕೃತಿ ಸಂಪ್ರದಾಯದ ಬಗ್ಗೆ ಅಪಮಾನ ಅವಹೇಳನವಾದಾಗ ಮಾತ್ರ ನಮಗೆ ಅದರ ಮಹತ್ವ ಅರಿವಾಗುತ್ತದೆ ಎಂಬಂತೆ, ಇಂದು ನಮ್ಮ ಸಂಪ್ರದಾಯದ ಮಹತ್ವದ, ಅರಿವು ಜಾಗೃತಿ ಅಧಿಕವಾಗಿದ್ದು, ಇದನ್ನು ಇಲ್ಲಿಗೇ ಬಿಡದೆ ಮುಂದಿನ ದಿನಗಳಲ್ಲಿ ನಿತ್ಯ ಬಳಸುವಂತಾಗಬೇಕು, ಹಾಗಾದಾಗ ಮಾತ್ರ ನಮ್ಮ ಮುಂದಿನ ಪೀಳಿಗೆ ನಮ್ಮ ಸಂಸ್ಖೃತಿಯನ್ನು ಉಳಿಸಲು ಒತ್ತು ನೀಡಲಿದೆ. ಪ್ರತೀ ಮನೆ ಮನೆಯಲ್ಲಿಯೂ ಕೂಡ ಕೊಡವ ತಕ್ಕ್‌, ಸಂಸ್ಕೃತಿ, ಉಡುಪು ಕಟ್ಟುಪಾಡುಗಳನ್ನು ಪಾಲಿಸುವಂತಾಗಬೇಕು ಎಂದರು.

ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ಅವರು ಮಾತನಾಡಿ, ನಮ್ಮ ಮಂದ್‌ ಮಾನಿಗಳಲ್ಲಿಯೇ ನಮ್ಮ ಸಂಸ್ಕೃತಿಯ ಬೇರು ಅಡಗಿದ್ದು, ಅದನ್ನು ಬಲಪಡಿಸುವತ್ತ ನಾವೆಲ್ಲರೂ ಗಮನ ಹರಿಸಬೇಕು, ಪರ್ತಿಯೊಬ್ಬರೂ ಕೂಡ ಸಂಸ್ಕೃತಿಯ ಅರಿವು ಪಡೆಯುವ ಮೂಲಕ, ನಿತ್ಯ ಬಳಕೆಯ ಮೂಲಕ ಜಾಗೃತಿ ಮೂಡಿಸಿ ನಮ್ಮ ಹಕ್ಕು ಎನ್ನುವುದನ್ನ ಪ್ರತಿಪಾದಿಸಬೇಕು ಎಂದರು.

ಹಳ್ಳಿಗಟ್ಟ್‌ ಊರ್‌ ತಕ್ಕ, ಚಮ್ಮಟ್ಟಿರ ಪ್ರವೀಣ್‌ ಉತ್ತಪ್ಪ ಅವರು ಮಾತನಾಡಿ, ಕೊಡವರ ಒಗ್ಗಟ್ಟಿಗೆ ಮೂಲವಾಗಿರುವ ಮಂದ್‌ನಲ್ಲಿ ನಾವಿಂದು ನಮ್ಮ ಒಗ್ಗಟ್ಟು ಮತ್ತು ಸಂಸ್ಕೃತಿಯನ್ನು ಸಾಬೀತು ಪಡಿಸಿದ್ದೇವೆ. ಮುಂದೆಯೂ ಕೂಡ ನಮ್ಮ ಸಂಪ್ರದಾಯದ ಉಳಿಕೆಗಾಗಿ ಕಟಿಬದ್ದರಾಗಿರುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ, ಅಖಿಲ ಕೊಡವ ಸಮಾಜ ಸಂಘಟನಾ ಕಾರ್ಯದರ್ಶಿ ನಂದೇಟಿರ ರಾಜಾಮಾದಪ್ಪ, ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಚೊಟ್ಟೆಯಂಡ ಸಂಜುಕಾವೇರಪ್ಪ, ಪ್ರಮುಖರಾದ  ಅಜ್ಜಮಕ್ಕಡ ವಿನುಕುಶಾಲಪ್ಪ, ಕರಿನೆರವಂಡ ಡ್ಯಾನಿ ಕುಶಾಲಪ್ಪ, ಚನ್ನಪಂಡ ದರ್ಶನ್,  ನೆಲ್ಲಮಕ್ಕಡ ಮಾದಯ್ಯ, ಚಂಗುಲಂಡ ಅಯ್ಯಪ್ಪ, ಕಿರಿಯಮಾಡ ಕವಿನ್‌, ಉರ್‌ ಮಂದ್‌ ಸಮಿತಿಯ ಉಪಾಧ್ಯಕ್ಷ ಸಾಧೆರ ಮಧುಗಣಪತಿ, ಕಾರ್ಯದರ್ಶಿ ಅಚ್ಚಕಾಳೇರ ಸಂತು ಅಯ್ಯಣ್ಣ, ಖಜಾಂಚಿ ನಂದೇಟಿರ ನಿಶು ನಂಜಪ್ಪ ಸೇರಿದಂತೆ, ಹಿರಿಯರು, ಗ್ರಾಮಸ್ಥರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ನೆರದಿದ್ದ ಕಾರ್ಯಕ್ರಮದಲ್ಲಿ, ಪುತ್ತರಿ ಕೋಲಾಟ್‌, ಪರೆಯಕಳಿ, ವಾಲಗತಾಟ್‌ ಸೇರಿದಂತೆ ಹಲವು ಚಟುವಟಿಕೆಗಳೊಂದಿಗೆ ಸಂಭ್ರಮಿಸಲಾಯಿತು.  

Exit mobile version