ಮಡಿಕೇರಿ, ಡಿ.04: ವಿಶ್ವ ಪ್ರಸಿದ್ದ ಸೇನಾನಿಗಳ ವಿರುದ್ದ ಅವಹೇಳನ ಮಾಡಿದ, ಕೆ.ಆರ್. ವಿದ್ಯಾಧರ ಎಂಬ, ಹೊರಜಿಲ್ಲೆಯ ದೇಶದ್ರೋಹಿ, ಕೊಡಗಿನಲ್ಲಿ ನೆಲೆನಿಂತು , ಜಿಲ್ಲೆಯ ಜನಾಂಗಗಳ ನಡುವೆ ಸದಾ ಒಡಕು ಮೂಡಿಸುತ್ತಾ, ದ್ವೇಶ ಸಾಧನೆ ಮಾಡುತ್ತಿರುವುದು, ಆತನ ಹೇಳಿಕೆಯಿಂದಲೇ ಸಾಭೀತಾಗಿದ್ದು, ಆತನನ್ನ ಜಿಲ್ಲೆಯಿಂದ ಗಡಿ ಪಾರು ಮಾಡಿ, ಕಠಿಣ ಕಾನೂನು ಶಿಕ್ಷೆಗೆ ಗುರಿಪಡಿಸಭೇಕೆಂದು ಈಗಾಗಲೆ ಜಿಲ್ಲೆಯಾದ್ಯಂತ, ದರ್ಮಾತೀತವಾಗಿ, ಎಲ್ಲಾ ಸಂಘ, ಸಂಸ್ಥೆ ಸಮಾಜಗಳು ಖಂಡನೆ ವ್ಯಕ್ತಪಡಿಸಿದ್ದು, ಹಲವಾರು ದೂರುಗಳೂ ದಾಖಲಾಗಿವೆ.
ಈತನ ವಿರುದ್ದ ಕ್ರಮಕ್ಕೆ ಆಗ್ರಹಿಸಿ ದಿನಾಂಕ 06/12/24ರಂದು ಬೃಹತ್ ಪ್ರತಿಭಟನೆಯನ್ನು ಕೊಡಗು ಮಾಜಿ ಸೈನಿಕರ ಸಂಘ ಹಮ್ಮಿಕೊಂಡಿರುವ ಮಾಹಿತಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದೇ ದಿನ, ಅದೇ ವಿಚಾರ ಮತ್ತು ಅದೇ ಸಮಯಕ್ಕೆ ಕೊಡವ ಸಮಾಜಗಳು ಕೂಡ ಪ್ರತಿಭಟನೆಯ ಕೆರ ಕೊಟ್ಟಿದ್ದು, ಒಂದೇ ವಿಚಾರದ ಕುರಿತ ಪ್ರತಿಭಟನೆ ಒಂದೇ ದಿನ ಎರಡು ಜಾಗದಲ್ಲಿ ನಡೆಯುತ್ತದೆಯೇ ಎಂಬ ಗೊಂದಲ್ಲಿ ಜನರಿದ್ದಾರೆ.
ಮಾಜೀ ಸೈನಿಕರ ಸಂಘವು, ಮಡಿಕೇರಿಯ ಫಿ.ಮಾ. ಕಾರ್ಯಪ್ಪ ವೃತ್ತದಲ್ಲಿ ಜಮಾವಣೆಗೊಂಡು, ಎಲ್ಲಾ ಸಂಘ ಸಂಸ್ಥೆಗಳ ಬ್ಯಾನರ್ಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ, ಜಿಲ್ಲಾಧಿಕಾರಿಗಳ ಕಛೇರಿ ಮುಂಬಾಗ ಬ್ರತಿಭಟನೆ ದಾಖಲಿಸಿ ಮನವಿ ಕೊಡುವ ಯೋಜನೆಯನ್ನು ಈಗಾಗಲೇ ಎಲ್ಲಾ ಸಮಾಜ, ಸಂಘ ಸಂಸ್ಥೆಗಳ ಹೆಸರಿನಲ್ಲಿ ಬಹಿರಂಗ ಮನವಿ ಪತ್ರವನ್ನು ಕಳಿಸಿದೆ. ಆದರೆ ಕೊಡವ ಸಮಾಜಗಳು ಅದೇ ದಿನ, ಅದೇ ಸಮಯಕ್ಕೆ, ಮಡಿಕೇರಿ ಕೊಡವ ಸಮಾಜದಲ್ಲಿ ಜಮಾವಣೆಗೊಂಡು, ಮಾಜೀ ಸೈನಿಕರ ಒಡಗೂಡಿ, ತಿಮ್ಮಯವೃತ್ತಕ್ಕಾಗಿ ಮೆರವಣಿಗೆಯಲ್ಲಿ ಸಾಗಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಯೋಜನೆ ಇದ್ದು ಎಲ್ಲಾ ಸಮಾಜದ ಸದಸ್ಯರು ಕೊಡವ ಸಮಾಜಕ್ಕೆ ಬಂದು ಸೇರುವಂತೆ ಕರೆ ನೀಡಿದೆ.
ಈ ಎರಡೂ ಕರೆಗಳು ಪ್ರತಿಭಟನೆಯಲ್ಲಿ ಭಾಗವಹಿಸಲು ಆಸಕ್ತಿಯಿರುವ ದೇಶಭಕ್ತರಿಗೆ ಮತ್ತು ಫಿ.ಮಾ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅಭಿಮಾನಿಗಳಿಗೆ, ಯಾರೊಂದಿಗೆ ಮತ್ತು ಎಲ್ಲಿ ಹೋಗಿ ಸೇರಬೇಕು ಎಂಬ ಗೊಂದಲ ಮೂಡಿಸುತ್ತಿದ್ದು, ಸಂಘಟಕರು ಸ್ಪಷ್ಟ ನಿರ್ದಾರದ ಕರೆ ನೀಡಬೇಕಿದೆ.
ಒಂದೇ ವಿಚಾರ ಮತ್ತು ಉದ್ದೇಶ ಇಟ್ಟುಕೊಂಡು ಹೊರಟಿರುವ ಹೋರಾಟದ ದಿಕ್ಕು ಇತರ ಕಾರಣಗಳಿಂದ ತಪ್ಪದೇ, ಒಂದೇ ಜಾದಲ್ಲಿ ಎಲ್ಲರೂ ಸೇರಿ, ಒಕ್ಕೊರಲ ಆಗ್ರಹದಿಂದ ಪ್ರತಿಭಟಿಸಿದರೆ, ಹೋರಟದ ಫಲ ದೊರೆಯಬಹುದು.