
ಗೋಣಿಕೊಪ್ಪ, ಫೆ.28: ರಾಷ್ಟ್ರೀಯ ಸ್ಪೋರ್ಟ್ ಡ್ಯಾನ್ಸ್ನಲ್ಲಿ ಐವತ್ತು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಮೂಲಕ ಗೋಣಿಕೊಪ್ಪದ ಸೈಕ್ಲೋನ್ ನೃತ್ಯ ಶಾಲೆಯ ವಿದ್ಯಾರ್ಥಿಗಳು ನೇಪಾಳದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ನೃತ್ಯ ಸ್ವರ್ದೆಗೆ ಆಯ್ಕೆಯಾಗಿದ್ದಾರೆ.
ಗೋವಾ ರಾಜ್ಯದ ಮಾರ್ಗೋ ರವೀಂದ್ರ ಭವನ ಸಭಾಂಗಣದಲ್ಲಿ, ಸ್ಪೋಟ್ರ್ಸ್ ಅಸೋಸಿಯೇಷನ್, ಸ್ಪೋರ್ಟ್ ಡಾನ್ಸ್ ಫೆಡರೇಶನ್ ಆಫ್ ಇಂಡಿಯಾ, ಏಷ್ಯನ್ ಸ್ಪೋರ್ಟ್ ಡಾನ್ಸ್ ಕೌನ್ಸಿಲ್, ಇಂಟನ್ರ್ಯಾಷನಲ್ ಸ್ಪೋಟ್ರ್ಸ್ ಫೆಡರೇಶನ್, ಅಂತರರಾಷ್ಟ್ರೀಯ ನೃತ್ಯ ಮಂಡಳಿ, ಸ್ಕೂಲ್ ಗೇಮ್ ಫೆಡರೇಶನ್ ಆಫ್ ಇಂಡಿಯಾ, ಇಂಟನ್ರ್ಯಾಷನಲ್ ಕೌನ್ಸಿಲ್ ಆಫ್ ಸ್ಪೋರ್ಟ್ ಸೈನ್ಸ್ ಮತ್ತು ಫಿಸಿಕಲ್ ಎಜುಕೇಶನ್ ಸಹಯೋಗದಲ್ಲಿ ನಡೆದ, ರಾಷ್ಟ್ರೀಯ ಡಾನ್ಸ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ, 50 ವಿದ್ಯಾರ್ಥಿಗಳು 12, 15, 17 ವರ್ಷಗಳ ವಿಭಾಗದ ಕ್ಲಾಸಿಕಲ್ ಹಿಪ್ಹಾಪ್, ಪ್ರೀ ಸ್ಟೈಲ್ ನೃತ್ಯಗಳಲ್ಲಿ, ಸೈಕ್ಲೋನ್ ನೃತ್ಯ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಪ್ರಶಸ್ತಿ ಗೆಲ್ಲುವ ಮೂಲಕ, ನೇಪಾಳದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ನೃತ್ಯ ಸ್ವರ್ದೆಗೆ ಆಯ್ಕೆಯಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ, ನೃತ್ಯ ತರಬೇತುದಾರ ಸೈಕ್ಲೋನ್ ರಮೇಶ್, ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ಬಹಳಷ್ಟು ಸ್ಪರ್ಧಿಗಳನ್ನು ಎದುರಿಸಿ, ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು ಕೊಡಗಿಗೆ ಹೆಮ್ಮೆ ತರುವ ವಿಚಾರ ಎಂದು ಹೇಳಿದರು. ಮಕ್ಕಳ ಸಾಧನೆಗೆ, ಸಂಸ್ಥೆಯ ಆಡಳಿತ ಮಂಡಳಿ ಮತ್ತು ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.