Site icon nadubadenews.com

ಏಸುಕ್ರೈಸ್ತರ ವಿರದ್ದ ಅವಹೇಳನಕಾರಿ ಪೋಸ್ಟ್‌: ರೋಮನ್‌ ಕ್ಯಾತೋಲಿಕ್‌ ಅಸೋಷಿಯೇಷನ್‌ ದೂರು

ಏಸುಕ್ರೈಸ್ತರ ವಿರದ್ದ ಅವಹೇಳನಕಾರಿ ಪೋಸ್ಟ್‌: ರೋಮನ್‌ ಕ್ಯಾತೋಲಿಕ್‌ ಅಸೋಷಿಯೇಷನ್‌ ದೂರು
Spread the love
ಏಸುಕ್ರೈಸ್ತರ ವಿರದ್ದ ಅವಹೇಳನಕಾರಿ ಪೋಸ್ಟ್‌: ರೋಮನ್‌ ಕ್ಯಾತೋಲಿಕ್‌ ಅಸೋಷಿಯೇಷನ್‌ ದೂರು

ವಿರಾಜಪೇಟೆ, ಡಿ. 26: (ಕಿಶೋರ್‌ ಕುಮಾರ್‌ ಶೆಟ್ಟಿ) ಕ್ರೈಸ್ತ ಧರ್ಮ ಮತ್ತು ಯೇಸು ಕ್ರಿಸ್ತ ದೇವರ ಬಗ್ಗೆ ಧರ್ಮಕ್ಕೆ ವಿರುದ್ದವಾಗಿ ಕಿಡಿಗೇಡಿಗಳು ಇರ್ವರು ಸಾಮಾಜಿಕ ಜಾಲತಾಣದ ಮೂಲಕ ಅವಹೇಳನ ಸಂದೇಶವನ್ನು ಹರಿಯಬಿಟ್ಟಿದ್ದಾರೆ. ಸಂದೇಶವನ್ನು ಖಂಡಿಸಿ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ತಾಲ್ಲೂಕು ಘಟಕ ವಿರಾಜಪೇಟೆ ನಗರ ಠಾಣೆಯಲ್ಲಿ ದೂರು ದಾಖಲಿಸಿದೆ.

ಕ್ರೈಸ್ತ ಧರ್ಮ ಮತ್ತು ಪ್ರಭು ಯೇಸು ಕ್ರಿಸ್ತ ರ ವಿರುದ್ದ ದಿನಾಂಕ 25-12-2024 ರಂದು ಲೋಕನಾಥ್ ಲೋಕಿ ಗೌಡ ಎಂಬುವವನು ಸಮಾಜಿಕ ಜಾಲತಾಣದ ಮೂಲಕ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಅಲ್ಲದೆ ಸಂದೇಶವನ್ನು ಸಮರ್ಥಿಸಿಕೊಂಡು.ಮನು ಮಾದಪ್ಪ ಮಲ್ಲಾರಂಡ ಎಂಬ ವ್ಯಕ್ತಿಯು ಬೆಂಬಲಿಸಿ ಸಂದೇಶವನ್ನು ಹರಿಯಬಿಟ್ಟಿರುತ್ತಾರೆ. ಇವರುಗಳು ಮಾಡಿರುವ ಘೋರ ಕೃತ್ಯವನ್ನು ರೋಮನ್ ಕ್ಯಾಥೋಲಿಕ್ ತಾಲೂಕು ಘಟಕ ಬಲವಾಗಿ ಖಂಡಿಸುತ್ತದೆ. ಧರ್ಮಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಸಂದೇಶವನ್ನು ಹರಿಯಬಿಟ್ಟ ವ್ಯಕ್ತಿಗಳನ್ನು ಬಂದಿಸಬೇಕು ಮತ್ತು ಭಾರತೀಯ ದಂಡ ಸಹಿತ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಉನ್ನತ ಮಟ್ಟದ ತನಿಖೆಗೆ ಪೋಲಿಸು ಇಲಾಖೆ ಮುಂದಾಗಬೇಕು. ಎಂದು ಆಗ್ರಹಿಸುತ್ತಿದ್ದೇವೆ. ಅಲ್ಲದೆ ಸಂದೇಶ ಹರಡಿರುವ ವ್ಯಕ್ತಿಗಳ ವಿರುದ್ಧ ಸಂಘಟನೆಯ ವತಿಯಿಂದ  ಜಿಲ್ಲಾ ಆದ್ಯಂತ ಪ್ರತಿಭಟನೆಗೆ ಮುಂದಾಗುತ್ತೇವೆ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರು ನೀಡುವ ಸಂಧರ್ಭದಲ್ಲಿ ರೋಮನ್ ಕ್ಯಾಥೋಲಿಕ್ ಅಸೋಶಿಯೇಷನ್ ಕೊಡಗು ಜಿಲ್ಲಾ ಉಪದ್ಯಾಕ್ಷರಾದ ಜೋಕಿಂ ರೊಡ್ರಿಗಸ್ಸ್,ಪ್ರಧಾನ ಕಾರ್ಯದರ್ಶಿ ಜೂಡಿ ವಾಜ್, ತಾಲೂಕು ಅದ್ಯಕ್ಷರಾದ ಆಂಟೋನಿ ರಾಬಿನ್, ತಾಲ್ಲೂಕು ಉಪ ಅದ್ಯಕ್ಷರಾದ  ಜಾನ್ ವರ್ಗಿಸ್ ಸದಸ್ಯರಾದ ಜೋಸೆಫ್ ಡಿಸೋಜ (ಬಾಬುಟ್ಟಿ) ಹಾಜರಿದ್ದರು

Exit mobile version