
ಬೆಂಗಳೂರು, ಜು.07;(nadubadenews): ವಿದ್ಯಾರ್ಥಿಗಳು ಉತ್ತಮ ವಿದ್ಯಾಭ್ಯಾಸ ಪಡೆಯುವುದರ ಜೊತೆಗೆ ಸರ್ಕಾರದ ಉನ್ನತ ಅಧಿಕಾರಿಗಳಾಗುವತ್ತ ಗಮನ ಹರಿಸಬೇಕು, ಇದಕ್ಕೆ ಪೂರಕ ಸಹಾಯದ ಯೋಜನೆಗಳನ್ನು ಸಂಘ ಸಂಸ್ಥೆ ಸಮಾಜಗಳು ರೂಪಿಸಬೇಕು ಎಂದು, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೊಚ್ಚೆರ ನೆಹರು ಅವರು ಅಭಿಪ್ರಾಯ ಪಟ್ಟರು. ಬೆಂಗಳೂರಿನ ಏಳ್‌ನಾಡ್ ಕೊಡವ ಸಂಘತ 39ನೇ ವಾರ್ಷಿಕ ಒತ್ತೋರ್ಮೆ ಕೂಟದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಇಂದು ಉನ್ನತ ವಿದ್ಯಾಭ್ಯಾಸ ಲಭಿಸುತ್ತಿದೆ ಆದರೂ ಉನ್ನತ ಸರಕಾರಿ ಅಧಿಕಾರಿಗಳಾಗುವತ್ತ ಆಸಕ್ತಿ ಕಡಿಮೆ ಆಗಿದೆ, ಸರ್ಕಾರಿ ಅಧಿಕಾರಿಯಾಗುವ ಮೂಲಕ ಸಮಾಜ ಮತ್ತು ಅಸಾಯಕರ ಸೇವೆ ಮಾಡುವ ವಿಪುಲ ಅವಕಾಶಗಳಿದ್ದು, ಇದರಿಂದ ತಮಗೂ ಜನಾಂಗಕೂ ಕೀರ್ತಿ ಪಡೆಯಬಹುದು, ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಯೋಜನೆ ರೂಪಿಸ ಬೇಕಿದೆ, ಸಮಾಜ ಸಂಘ ಸಂಸ್ಥೆಗಳು, ಒತ್ತೋರ್ಮೆಕೂಟ, ಸಾಂಸ್ಖೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಜೊತೆಗೆ ಉದ್ಯೋಗಕ್ಕೆ ಪೂರಕ ಕಾರ್ಯಕ್ರಮಗಳನ್ನೂ ಆಯೋಜಿಸಬೇಕು, ಇಂದು ಸರ್ಕಾರಿ ಅಧಿಕಾರಿಗಾಗುವವರು ಬಹುಪಾಲು ಹೊರ ರಾಜ್ಯದವರೇ ಆಗಿದ್ದು ಸ್ಥಳೀಯವಾಗಿ ಅವಕಾಶ ಸದ್ಬಳಕೆ ಆಗುತಿಲ್ಲ, ಮುಂದಿನ ದಿನಗಳಲ್ಲಿ ಇದಕ್ಕೆ ಪೂರಕ ಯೋಜನೆಗಳು ತಯಾರಾಗಲಿ ಎಂದರು. ಏಳ್‌ನಾಡ್ ಕೊಡವ ಸಂಘದ ಅಧ್ಯಕ್ಷ ಮಂಡಿರ ಬೋಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಕರವಟ್ಟಿರ ಪೆಮ್ಮಯ್ಯ ಕೊಡವಾಮೆರ ಕೊಂಡಾಟ ಸಂಘಟನೆಯ ಅದ್ಯಕ್ಷ ಚಾಮೆರ ದಿನೇಶ್‌ಬೆಳ್ಯಪ್ಪ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.