
ಬೆಂಗಳೂರು, ಜು.04;(nadubadenews): ಕರ್ನಾಟಕ ರಾಜ್ಯದ 21 ಜಿಲ್ಲೆಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಅವಧಿಗೆ ಡಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವವರನ್ನು ಬದಲಾವಣೆ ಮಾಡುವ ಹಿನ್ನಲೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು, ಆಯಾಯ ಜಿಲ್ಲೆಗಳಿಗೆ ಪಕ್ಷದ ರಾಜ್ಯ ಮುಖಂಡರುಗಳನ್ನು ವೀಕ್ಷಕರುಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಅದರಂತೆ ಉಡುಪಿ ಜಿಲ್ಲೆಗೆ ವೀಕ್ಷಕರನ್ನಾಗಿ, ಕೊಡಗು ಜಿಲ್ಲೆಯವರಾದ, ಹಿರಿಯ ನ್ಯಾಯವಾದಿ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎನ್. ಚಂದ್ರಮೌಳಿ ಅವರನ್ನು ನೇಮಿಸಿದೆ. ಇವರೊಂದಿಗೆ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ ಮಾಜಿ ಶಾಸಕರಾದ ಜಿ.ಆರ್ ಲೋಬೊ ರವರು ಕೂಡ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ರಾಜ್ಯದ 21 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಆಯ್ಕೆಗೆ ಮುಂದಾಗಿರುವ ಕೆಪಿಸಿಸಿ, ಕೊಡಗು ಸೇರಿದಂತೆ ಇತರ ಒಂಬತ್ತು ಜಿಲ್ಲೆಗಳ ಅಧ್ಯಕ್ಷರ ಬದಲಾವಣೆಯ ಬಗ್ಗೆ ಯಾವುದೇ ಉಲ್ಲೇಖಿಸಿಲ್ಲ.