Site icon nadubadenews.com

ಈರಳೆವಳಮುಡಿ ಅರ್ಚಕರ ವಸತಿ ಗೃಹ ಉದ್ಘಾಟಿಸಿದ ಶಾಸಕ ಡಾ. ಮಂಥರ್‌ ಗೌಡ

Spread the love

ಚೆಟ್ಟಳ್ಳಿ, ಜ.15: (ಪುತ್ತರಿರ ಕರುಣ್‌ ಕಾಳಯ್ಯ) ಚೆಟ್ಟಳ್ಳಿ ಈರಳೆವಳಮುಡಿ ಗ್ರಾಮ ಪುರಾತನ, ಇತಿಹಾಸ ಪ್ರಸಿದ್ದ ಈರಳೆ ಶ್ರೀ ಭಗವತಿ( ಪೊವ್ವೊದಿ) ದೇವಾಲಯದ ನೂತನವಾಗಿ ನಿರ್ಮಿಸಿದ ಅರ್ಚಕರ ವಸತಿ ಗೃಹದ ಉದ್ಘಾಟನೆಯನ್ನು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡರವರು ನೆರವೇರಿಸಿದರು.

                ಮೊದಲಿಗೆ ಈರಳೆ ಶ್ರೀಭಗವತಿ ದೇವಿಗೆ ಸಂಕ್ರಾಂತಿ ಹಬ್ಬದ ವಿಶೇಷ ಪೂಜೆಸಲ್ಲಿಸಲಾಯಿತು. ಶಾಸಕರಾ ಡಾ. ಮಂತರ್ ಗೌಡರವರಿಗೆ ದೇವಾಲಯ‌ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಪೊರಿಮಂಡ ದಿನಮಣಿ ಪೂವಯ್ಯ ಸನ್ಮಾನಿಸಿ ಗೌರವಿಸಿದರು.

                ದೇವಾಲಯದ ಅಭಿವೃದ್ದಿಗೆ ಶ್ರಮಿಸಿದ ಪೊರಿಮಂಡ ದಿನಮಣಿ ಪೂವಯ್ಯನವರಿಗೆ ಹಾಗು ಹಿರಿಯ ರಾಜಕಾರಣಿ  ಎಸ್.ಎಂ.ಚಂಗಪ್ಪನವರಿಗೂ ಊರಿನವರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

   ನಂತರ ನಡೆದ ಸಭಾಕಾರ್ಯಕ್ರಮದಲ್ಲಿ, ಪೊರಿಮಂಡ ದಿನಮಣಿ ಪೂವಯ್ಯ ಸ್ವಾಗತಿಸಿ ದೇವಾಲಯದ ಅಭಿವೃದಿ ಕಾರ್ಯದ ಬಗ್ಗೆ ವಿವರಿಸಿದರು. ಗ್ರಾಮದ ಅಭಿವೃದ್ದಿಗೆ ಸಹಕರಿಸ ಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಲಾಯಿತು.

     ಶಾಸಕರಾದ, ಡಾ. ಮಂತರ್ ಗೌಡ ಮಾತನಾಡಿ ದೇವಾಲಯದ ಅಭಿವ್ರದ್ದಿ ಕಾರ್ಯದ ಬಗ್ಗೆ ಶ್ಲಾಘಿಸಿದರು. ಗ್ರಾಮದ ರಸ್ತೆ, ಸೇತುವೆ,ವಿದ್ಯುತ್ ಹಾಗು ವಿವಿಧ ಕಾಮಗಾರಿ ಕೈಗೊಳ್ಳುವ ಬಗ್ಗೆ ಹಾಗೂ ಜನರ ಸಮಸ್ಯೆ ಪರಿಹಾರಕ್ಕೆ  ಸದಾ ಸಿದ್ದನಿರುವುದಾಗಿ ಭರವಸೆ ನೀಡಿದರು.

     ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಚಂಗಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸುನಿತ ಮಂಜುನಾಥ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಪುತ್ತರಿರ ಪಪ್ಪುತಿಮ್ಮಯ್ಯ, ಊರುತಕ್ಕರಾದ  ಪೊರಿಮಂಡ ರವಿ ನಾಣಯ್ಯ ವೇದಿಕೆಯಲ್ಲಿದ್ದರು.

Exit mobile version