ವಿರಾಜಪೇಟೆ, ಡಿ 20: (ಕಿಶೋರ್ ಕುಮಾರ್ ಶೆಟ್ಟಿ) ಬ್ಲೂಬ್ಯಾಂಡ್ ಎಫ್.ಎಂ.ಎಸ್.ಸಿ.ಐ. ಇಂಡಿಯನ್ ನ್ಯಾಷೀನಲ್ ರ‍್ಯಾಲಿ ಚಾಂಪಿಯನ್‌ಶಿಪ್ 2024 ಅಯೋಜಿಸಿದ್ದ ಕೊನೆಯ ಹಂತದ ರ‍್ಯಾಲಿಯಲ್ಲಿ ಎಲ್ಲಾ ಹಂತಗಳಲ್ಲಿ ಅದ್ವೀತಿಯ ಸಾಧನೆಗೈದ ಕೊಡಗು ಜಿಲ್ಲೆಯ ರ‍್ಯಾಲಿ ಪಟು ಉದ್ದಪಂಡ ತಿಮ್ಮು ಮತ್ತು ಜೈಸನ್ ಸಲ್ಡಾನಾ ಬ್ಲೂಬ್ಯಾಂಡ್ ಎಫ್.ಎಂ.ಎಸ್.ಸಿ.ಐ. ಇಂಡಿಯನ್ ನ್ಯಾಷೀನಲ್ ರ‍್ಯಾಲಿ ಚಾಂಪಿಯನ್‌ಶಿಪ್ 2024 ಮತ್ತು ಕರ್ನಾಟಕ ಮೋಟಾರ್ ಸ್ಪೋಟ್ಸ್ ಕ್ಲಬ್ ಸಂಯುಕ್ತ ಅಶ್ರಯದಲ್ಲಿ ಬೆಂಗಳೂರು (ತುಮಕೂರು) ನಲ್ಲಿ 2024ರ ರ‍್ಯಾಲಿಯ ಅಂತಿಮ 06ನೇ ಸುತ್ತಿನ ರ‍್ಯಾಲಿ ನಡೆಯಿತು. 06ನೇ ಸುತ್ತಿನ ರ‍್ಯಾಲಿಯಲ್ಲಿ ಕೊಡಗು ಜಿಲ್ಲೆಯ ಅಮ್ಮತ್ತಿಯಲ್ಲಿ ನಡೆದ ರ‍್ಯಾಲಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದ ರ‍್ಯಾಲಿ ಜೊಡಿಗಳಾದ ಗೌರವ್ ಗಿಲ್, ಮತ್ತು ಅನಿರುದ್ ಜೋಡಿಯು ಇಲ್ಲಿಯೂ ಪ್ರಥಮ ಸ್ಥಾನಗಳಿಸಿದರು. ಜೈಸನ್ ಸಲ್ಡಾನಾ ಮತ್ತು ಉದ್ದಪಂಡ ತಿಮ್ಮು ದ್ವೀತಿಯ ಸ್ಥಾನ ಪಡೆದರೆ, ಅರ್ಜುನ್ ರಾವ್ ಮತ್ತು ಸತೀಶ್ ರಾಜ್ ಗೋಪಾಲ್ ತೃತೀಯ ಸ್ಥಾನ ಪಡೆದುಕೊಂಡರು.
ಐ.ಎನ್.ಆರ್.ಸಿ 2 ವಿಭಾಗದಲ್ಲಿ, ಜೈಸನ್ ಸಲ್ಡಾನಾ ಮತ್ತು ಉದ್ದಪಂಡ ತಿಮ್ಮು ಜೋಡಿಯು ಪ್ರಥಮ, ಠಾಕೂರ್ ಆಧಿತ್ಯ ಸಿಂಗ್ ಮತ್ತು ವಿರೇಂದ್ರ ಕಶೈಪ್ ದ್ವಿತೀಯ, ಹಾಗೂ ಡೀನ್ ಮಸ್ಕರೇನಿಯಸ್ಸ್ ಮತ್ತು ಕೊಂಗAಡ ಗಗನ್ ತೃತೀಯ ಸ್ಥಾನ ಪಡೆದುಕೊಂಡರು.
ಜೆ.ಐ.ಎನ್.ಆರ್.ಸಿ ವಿಭಾಗದಲ್ಲಿ, ಕೊಡಗಿನ ಅಭಿನ್ ರೈ ಮತ್ತು ಅರವೀಂದ್ ಧೀರೇಂದ್ರ ದ್ವೀತಿಯ ಸ್ಥಾನ ಪಡೆದುಕೊಂಡರು,
ಜಿಪ್ಸಿ ವಿಭಾಗದಲ್ಲಿ, ಕೊಡಗಿನ ಕೊಂಗಂಡ ಕವನ್ ಕಾರ್ಯಪ್ಪ ಮತ್ತು ಮನೆಯಪಂಡ ಗೌರವ್ ಅಯ್ಯಪ್ಪ, ಪ್ರಥಮ ಸ್ಥಾನ ಪಡೆದುಕೊಂಡರು. ಐ.ಎನ್.ಆರ್.ಸಿ ಯ ವಿವಿಧ ಭಾಗಗಳಲ್ಲಿ ಕೊಡಗಿನ ಅಜ್ಜಿನಿಕಂಡ ಆನಂದ್ ಸೋಮಯ್ಯ ಮೇಕೆರೀರ ಕಾರ್ಯಪ್ಪ, ನೆಲ್ಲಮಕ್ಕಡ ಸಚೀನ್ ಬೋಪಣ್ಣ ಪ್ರತಿನಿಧಿಸಿದರು. 2024ನೇ ವರ್ಷದ ಸಮಗ್ರ ಚಾಂಪಿಯನ್ ಆಗಿ. ಕರ್ಣ ಕಡೂರು ಮತ್ತು ಮೂಸಾ ಶರೀಫ್ ತಾರ ಜೊಡಿಯು ಪ್ರಥಮ ಸ್ಥಾನ ಪಡೆದುಕೊಂಡರು, ಸಹ ಚಾಲಕ ವಿಭಾಗದಲ್ಲಿ ಉದ್ದಪಂಡ ತಿಮ್ಮು ದ್ವೀತಿಯ ಸ್ಥಾನ,
ರೋಬಾಸ್ಟ್ ಅಡ್ವೇಂಚರ್ ಆಂಡ್ ಸ್ಫೋಟ್ಸ್ ಆಕಾಡೆಮಿ ಕೊಡಗು ನಿರ್ಧೆಶಕರಾದ ಕುಞಂಡ ಮಹೇಶ್ ಅಪ್ಪಯ್ಯ ಕೊಡಗು ಜಿಲ್ಲೆಯ ರ‍್ಯಾಲಿ ಸಾಧಕರ ಬಗ್ಗೆ ಮಾತನಾಡಿ ಜಿಲ್ಲೆಯ ಅಮ್ಮತ್ತಿಯಲ್ಲಿ ನಡೆದ ರ‍್ಯಾಲಿಯಲ್ಲಿ ಕೊಡಗಿನ ರ‍್ಯಾಲಿ ಪಟುಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಐ.ಎನ್.ಆರ್.ಸಿ ವಿಭಾಗದಲ್ಲಿ ಉದ್ದಪಂಡ ತಿಮ್ಮು ದ್ವೀತಿಯ ಸ್ಥಾನ ಪಡೆದಿರುವುದು ಕೊಡಗು ಜಿಲ್ಲೆಗೆ ಹೆಮ್ಮೆ ತಂದಿದೆ. ಮುಂದೆಯು ಕೊಡಗಿನ ರ‍್ಯಾಲಿ ಪಟುಗಳು ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದು ಹೇಳಿದರು.