https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button
ಆರ್ಜಿಯಲ್ಲಿ ಶ್ರದ್ದಾ ಭಕ್ತಿಯಿಂದ ಜರುಗಿದ ಕಲಿಯುಗ ವರದ ಶ್ರಿ ಅಯ್ಯಪ್ಪ ಸ್ವಾಮಿ ಮಂಡಲ ಪೂಜಾ ಮಹೋತ್ಸವ

ಆರ್ಜಿಯಲ್ಲಿ ಶ್ರದ್ದಾ ಭಕ್ತಿಯಿಂದ ಜರುಗಿದ ಕಲಿಯುಗ ವರದ ಶ್ರಿ ಅಯ್ಯಪ್ಪ ಸ್ವಾಮಿ ಮಂಡಲ ಪೂಜಾ ಮಹೋತ್ಸವ

Uncategorized
27/12/202427/12/2024nadubadenews@gmail.comLeave a Comment on ಆರ್ಜಿಯಲ್ಲಿ ಶ್ರದ್ದಾ ಭಕ್ತಿಯಿಂದ ಜರುಗಿದ ಕಲಿಯುಗ ವರದ ಶ್ರಿ ಅಯ್ಯಪ್ಪ ಸ್ವಾಮಿ ಮಂಡಲ ಪೂಜಾ ಮಹೋತ್ಸವ
Spread the love
ಆರ್ಜಿಯಲ್ಲಿ ಶ್ರದ್ದಾ ಭಕ್ತಿಯಿಂದ ಜರುಗಿದ ಕಲಿಯುಗ ವರದ ಶ್ರಿ ಅಯ್ಯಪ್ಪ ಸ್ವಾಮಿ ಮಂಡಲ ಪೂಜಾ ಮಹೋತ್ಸವ

ವಿರಾಜಪೇಟೆ: ಡಿ:27: (ಕಿಶೋರ್ ಕುಮಾರ್ ಶೆಟ್ಟಿ) ಕಾನನ ವಾಸ ಕಲಿಯುಗ ವರದ ಶ್ರೀ ಅಯ್ಯಪ್ಪ ಸ್ಪಾಮಿಯ ವಾರ್ಷಿಕ ಮಂಡಲ ಪೂಜಾ ಮಹೋತ್ಸವ ಶ್ರಧ್ದಾ ಭಕ್ತಿಯಿಂದ ಜರುಗಿತು.

ಶ್ರೀ ಸ್ವಾಮಿ ಅಯ್ಯಪ್ಪ ಭಜನಾ ಮಂದಿರ ಆರ್ಜಿ ಗ್ರಾಮ, ಪೆರುಂಬಾಡಿ ವಿರಾಜಪೇಟೆ ವತಿಯಿಂದ 29 ನೇ ವರ್ಷದ ಮಂಡಲ ಪೂಜಾ ಮಹೋತ್ಸವ ಶ್ರಧ್ದಾ ಭಕ್ತಿಯಿಂದ ಜರುಗಿತು. ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಅರಂಭವಾದ ಮಂಡಲ ಪೂಜಾ ಮಹೋತ್ಸವವು ಶ್ರೀ ಅಯ್ಯಪ್ಪನ ಭಜನೆ ನಡೆಯಿತು. ಮದ್ಯಾಹ್ನ ಶ್ರೀ ಸ್ವಾಮಿಗೆ ಮಾಹಾ ಪೂಜೆ ಸಲ್ಲಿಕೆಯಾಯಿತು. ನಂತರದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಸುಮಾರು 7.30 ಕ್ಕೆ ಭಜನಮಂದಿರಲ್ಲಿ ದೀಪಾರಾಧನೆ ನಡೆಯಿತು. ಶ್ರೀ ಸ್ವಾಮಿಯ ಭಾವಚಿತ್ರವಿರಿಸಿದ ಪಲ್ಲಕ್ಕಿಯೋಂದಿಗೆ ಅಯ್ಯಪ್ಪ ಮಾಲದಾರಿಗಳು ಭಜನ ಮಂದಿರದಿಂದ ಮೇರವಣಿಗೆಯಲ್ಲಿ ಸಾಗಿದರು. ಮೆರವಣಿಗೆಯಲ್ಲಿ ಮಹಿಳೆಯಲ್ಲಿ ಸೇರಿದಂತೆ ಮಕ್ಕಳು ದೀಪ ಹೊತ್ತು ಮೆರವಣಿಗಗೆ ಮೆರಗು ನೀಡಿದರು. ಶ್ರೀ ಅಯ್ಯಪ್ಪ ಸ್ವಾಮಿ ಭೇಟೆಗೆ ಹೊರಡುವ ವಿರಾಟ್ ರೂಪದ ಸ್ಥಭ್ದ ಚಿತ್ರವು ವಿದ್ಯುತ್ ಅಲಂಕೃತ ಮಂಟಪದಲ್ಲಿ ಶೋಭಯಾತ್ರೆಯ ಪ್ರಮುಖ ಆಕರ್ಷಣೆಯಾಯಿತು. ಕೇರಳದ ಚೆಂಡೆ ಮೇಳ ಮೆರವಣಿಗೆಗೆ ಸಾತ್ ನೀಡಿತು. ಶೋಭಯಾತ್ರೆಯು ಭಜನಾ ಮಂದಿರದಿಂದ ಹೊರಟು ಪೊಲೀಸ್ ತಪಾಸಣೆ ಕೇಂದ್ರದ ಬಳಿಯ ಜಂಕ್ಷನ್ ವರೆಗೆ ತೆರಳಿ ಹಿಂತಿರುಗಿ ಬಳಿಕ ಬಾಳುಗೋಡು ಚಾಮಂಡಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಭಜನ ಮಂದಿರದಲ್ಲಿ ಕೊನೆಗೊಂಡಿತು. ಆಡಳಿತ ಮಂಡಳಿ, ಧಾನಿಗಳಿಂದ ಬಿರುಸಿನ ಸಿಡಿಮದ್ದು ಪ್ರದರ್ಶನ ಕಂಡಿತು. ಭಜನ ಮಂದಿರದಲ್ಲಿ ಗುರು ಸ್ವಾಮಿ ನೇತ್ರತ್ವದಲ್ಲಿ ಪಡಿಪೋಜೆ ನಡೆಯಿತು. ಮಾಹಾ ಪೂಜೆ ಸಲ್ಲಿಸಲಾಗಿ ಪ್ರಸಾದ ವಿನಿಯೋಗ ನಡೆಯಿತು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ಈ ಸಂಧರ್ಭದಲ್ಲಿ  ಶ್ರೀ ಸ್ವಾಮಿ ಅಯ್ಯಪ್ಪ ಭಜನಾ ಮಂದಿರದ ಅಡಳಿತ ಮಂಡಳಿಯ ಅದ್ಯಕ್ಷರಾದ ಮಹೇಶ್, ಉಪದ್ಯಕ್ಷರಾದ ಉಮೇಶ್, ಕಾರ್ಯದರ್ಶಿ ಶಿವಪ್ಪ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಪೆರುಂಬಾಡಿ, ಆರ್ಜಿ ಗ್ರಾಮ ಬಾಳೂಗೋಡು ಬಿಟ್ಟಂಗಾಲ ಸೇರಿದಂತೆ ನಗರದ ಹಲವು ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಸ್ವಾಮಿಯ ತೀರ್ಥ ಪ್ರಸಾದ ಸ್ವೀಕರಿಸಿ ಪುನಿತರಾದರು.

Post navigation

ಉಳ್ಳಿಯಡ ಡಾಟಿಪೂವಯ್ಯ ಅಯಿಂಗಡ ನಾಡ್‌ಲ್ ನಾಳ್… 11
ವಿರಾಜಪೇಟೆ ನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪೂಜಾ ಮಹೋತ್ಸವ

Related Posts

ರಾಷ್ಟ್ರ ಮಟ್ಟ ಹೈಲೀ ಕಮಾಂಡೇಬಲ್‌ ಬಿರ್‌ದ್‌ ಪಡ್ಂದ ಚಿತ್ರಕುರಿಕಾರ ಐಮಂಡ ರೂಪೇಶ್‌ ನಾಣಯ್ಯ

ರಾಷ್ಟ್ರ ಮಟ್ಟ ಹೈಲೀ ಕಮಾಂಡೇಬಲ್‌ ಬಿರ್‌ದ್‌ ಪಡ್ಂದ ಚಿತ್ರಕುರಿಕಾರ ಐಮಂಡ ರೂಪೇಶ್‌ ನಾಣಯ್ಯ

26/09/2024nadubadenews@gmail.com
ಮಳೆರ ಏತು ಅಕಾಡೆಮಿರ ತೋಕ್‌ ನಮ್ಮೆ ಮಿಂಞಕ್‌

ಮಳೆರ ಏತು ಅಕಾಡೆಮಿರ ತೋಕ್‌ ನಮ್ಮೆ ಮಿಂಞಕ್‌

06/12/202406/12/2024nadubadenews@gmail.com
ಕೊಡವರನ್ನ ಸೇವೆ ಮತ್ತು ಸಾಧನೆಯಿಂದಲೇ ವಿಶ್ವ ಎಂದಿಗೂ ಗುರುತಿಸುತ್ತದೆ: ಮಾಜೀ ಸಚಿವ ಮಂಡೆಪಂಡ ಅಪ್ಪಚ್ಚು ರಂಜನ್

ಕೊಡವರನ್ನ ಸೇವೆ ಮತ್ತು ಸಾಧನೆಯಿಂದಲೇ ವಿಶ್ವ ಎಂದಿಗೂ ಗುರುತಿಸುತ್ತದೆ: ಮಾಜೀ ಸಚಿವ ಮಂಡೆಪಂಡ ಅಪ್ಪಚ್ಚು ರಂಜನ್

24/12/202424/12/2024nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version