ಅರಮೇರಿ. ಏ.15.[ಡಾ.ನರಸಿಂಹನ್] ದಿನಾಂಕ 20ನೇ ಏಪ್ರಿಲ್ 2025ರಂದು ಭಾನುವಾರ, ಸಂಜೆ 3ರಿಂದ 5 ಗಂಟೆಯವರೆಗೆ, ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜ ಪ್ರಸಾದ ನಿಲಯದ ಸಭಾಂಗಣದಲ್ಲಿ 230ನೆಯ ಹೊಂಬೆಳಕು ಮಾಸಿಕ ತತ್ತ್ವಚಿಂತನಾಗೋಷ್ಠಿ ಜರುಗಲಿದೆ.
ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮೂರ್ನಾಡು ಪದವಿಪೂರ್ವ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಕಿಗ್ಗಾಲು ಹರೀಶ್‌ರವರ ಪೂಚಂತೇ- ಕೃತಿಗಳು ಹಾಗೂ ಜೀವನ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.