ಅಮ್ಮತ್ತಿ, ಡಿ.21: ಕಾವೇರಿ ಪದವಿ ಪೂರ್ವ ಕಾಲೇಜು ವಿರಾಜಪೇಟೆಯ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವು ಇತ್ತೀಚೆಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ ಅವರು ನೆರೆವೆರಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಗ್ರೀಷ್ಮಾರಂಜು, ಶಾಲಾ ಮುಖ್ಯೋಪದ್ಯಾಯರಾದ ಶ್ರೀಮತಿ ಮಿನ್ನಮ್ಮ, ಬೇರೇರ ರಂಜಿ, ಶ್ರೀಮತಿ ಮಚ್ಚರಂಡ ನಳಿನಿ ಬೊಳ್ಳಪ್ಪ ಹಾಗೂ ಕೆ. ಎಸ್. ಗೋಪಾಲಕೃಷ್ಣ ಉಪಸ್ಥಿತರಿದ್ದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್.ಎಮ್. ನಾಣಯ್ಯ ಅವರು ವಹಿಸಿಕೊಂಡಿದ್ದರು. ಎನ್ ಎಸ್ ಎಸ್ ಘಟಕದ ಅಧಿಕಾರಿ ಶ್ರೀಮತಿ ಪಮಿತ ಬಿ ಮತ್ತು ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಡಯಾನ ಸೋಮಯ್ಯ , ಶ್ರೀಮತಿ ದೀಕ್ಷಿತ್ ಅಕ್ಕಮ್ಮ ಕಾರ್ಯಕ್ರಮ ನಿರ್ವಹಿಸಿದರು.
ಶಿಬಿರದ 2ನೇ ದಿನದಂದು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿಗಳಾದ ಶ್ರೀಮತಿ ಪಮಿತ ಬಿ ಅವರ ನೇತೃತ್ವದಲ್ಲಿ ಶ್ರೀಮತಿ ಸುಚಿತ್ರ ಸುರೇಂದ್ರ ಅವರು ಸಾಧನೆಯ ಹಾದಿಯಲ್ಲಿ ಕೃಷಿಯ ಬಗ್ಗೆ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಬೇರೆರ ಸೂರಜ್ ಮುತ್ತಣ್ಣ, ಬಲ್ಲಟಿಕಾಳಂಡ ಸುಜಿತ್ ಕುಟ್ಟಪ್ಪ, ಮಚ್ಚಾರಂಡ ಶಿವಾಜಿ, ಪೊರ್ಕಂಡ ಬೋಪಣ್ಣ, ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಡಯಾನ ಮತ್ತು ಶ್ರೀಮತಿ ದೀಕ್ಷಿತ್ ಅಕ್ಕಮ್ಮಅವರು ಉಪಸ್ಥಿತರಿದ್ದರು. ಸಂಜೆ 6 ಗಂಟೆಗೆ ಸಾಂಸ್ಕೃತಿ ಕಾರ್ಯಕ್ರಮವನ್ನು ಶ್ರೀಮತಿ ರೇಖಾ ಬಿ ಎಸ್ ಅವರು ಉದ್ಘಾಟನೆ ಮಾಡಿದರು. ಮೂರನೇ ದಿನದಂದು ಶಾಲೆಯ ವಿದ್ಯಾರ್ಥಿಗಳಿಗೆ, ಸ್ವಯಂಸೇವಕರಿಗೆ ಮತ್ತು ಅಮ್ಮತ್ತಿ ಒಂಟಿಯಂಗಡಿ ಗ್ರಾಮದವರಿಗೆ ದಂತ ತಪಾಸಣೆ ಶಿಬಿರವನ್ನು ನಡೆಸಲಾಯಿತು. ಡಾಕ್ಟರ್ ಸಾಗರ್ ಪಿ. ರಾಜ್ ಪ್ರಾಥಮಿಕ ಆರೋಗ್ಯ ಕೇಂದ್ರ ಅಮ್ಮತ್ತಿ ಒಂಟಿಯಂಗಡಿ ಇವರು ಸ್ವಯಂಸೇವಕರಿಗೆ ಆರೋಗ್ಯದ ಬಗ್ಗೆ ಅರಿವು ನೀಡಿದರು. ಸಂಜೆ 6ಗಂಟೆಗೆ ಧರ್ಮಸ್ಥಳ ಮಹಿಳಾ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. 4ನೇ ದಿನದಂದು ಗ್ರಾಮದ ಮಹಾದೇವ ದೇವಸ್ಥಾನದಲ್ಲಿ ಶ್ರಮದಾನ ನಡೆಯಿತು. ಮಧ್ಯಾಹ್ನ 2 ಗಂಟೆಗೆ ಪಟ್ಟಡ ಶಾಮ್ ಅಯ್ಯಪ್ಪ ಮತ್ತು ಅವರ ಶ್ರೀಮತಿ ನಮಿತ ಇವರ ಅಕ್ವವೆಂಚರ್ ಮೀನು ಸಾಕಾಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಯಿತು. ಸಂಜೆ 6 ಗಂಟೆಗೆ ಸಂಜೀವಿನಿ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಐದನೇ ದಿನ ಡಿಯೋನ್ ಜಾರ್ಜ್ ಸಾಲ್ಡಾನ್ ರವರು ಸುರಕ್ಷಿತ ವಾಹನ ಚಾಲನೆ ವಿಷಯದ ಕುರಿತು ಸ್ವಯಂಸೇವಕರಿಗೆ ಮಾಹಿತಿಯನ್ನು ತಿಳಿಸಿದರು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಮುಕ್ಕಾಟೀರ ರಮೇಶ್, ಬೊಪ್ಪಂಡ ಪಿ ಬೆಳ್ಳಿಯಪ್ಪ, ಬೇರೆರ ಮಂಜುನಾಥ್, ಗಣೇಶ್ ಟಿ. ವಿ, ಕಲ್ಪೆಶ ವಿ. ಪಿ , ಜೀವನ್ ಕುಮಾರ್ ಅವರು ಉಪಸ್ಥಿತರಿದ್ದರು. ಆರನೇ ದಿನದಂದು ರಿಟೈರ್ಡ್ ಕ್ಯಾಪ್ಟನ್ ಬಾಚುರ ಎಸ್. ಪೂಣಚ್ಚ ಅವರು ವ್ಯಕ್ತಿತ್ವ ವಿಕಸನದ ಬಗ್ಗೆ ಸ್ವಯಂಸೇವಕರಿಗೆ ಉಪನ್ಯಾಸ ನೀಡಿದರು. ಸಂಜೆ 6 ಗಂಟೆಗೆ ಸ್ವಯಂಸೇವಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ದಿನಾಂಕ 4-12-2024 ರಂದು ಶಿಬಿರದಸಮರೂಪ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ಕ್ಯಾಪ್ಟನ್ ರಘು ಮಾದಪ್ಪ, ಮಚ್ಚಾರಂಡ ಕಾರ್ಯಪ್ಪ ಮಣಿ, ಕೆ ಪಿ ನಾಗರಾಜು , ಶ್ರೀಮತಿ ಮಿನ್ನಮ್ಮ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾವೇರಿ ಕಾಲೇಜು, ಪ್ರಾಂಶುಪಾಲರಾದ ಎನ್.ಎಂ. ನಾಣಯ್ಯ ರವರು ವಹಿಸಿಕೊಂಡಿದ್ದರು. ಎನ್ಎಸ್ಎಸ್ ಘಟಕದ ಯೋಜನಾಧಿಕಾರಿ ಪಮಿತ ಬಿ ಮತ್ತು ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಡಯಾನ ಸೋಮಯ್ಯ ಶ್ರೀಮತಿ ದೀಕ್ಷಿತ್ ಅಕ್ಕಮ್ಮ, ಶ್ರೀ ಕುಶಾಲಪ್ಪ , ಶ್ರೀ ಭೋಪಣ್ಣ ಕೆ ಪಿ ಮತ್ತು ಶ್ರೀ ತಮ್ಮಯ್ಯ ಇದ್ದರು.