ವಿರಾಜಪೇಟೆ. ಏ.19: ಉತ್ತರ್‌ಖಾಂಡ್ ಪ್ಲಾಟೂನ್ ಕೇಂದ್ರ ಪೊಲೀಸ್ ಮೀಸಲು ಪಡೆಯಲ್ಲಿ (ಸಿ.ಆರ್.ಪಿ.ಎಫ್) ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ವಿರಾಜಪೇಟೆಯ ಸಿ.ಎನ್. ಆದರ್ಶ್ ಶಾಸ್ತ್ರಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ನಡೆದ ಸಿ.ಆರ್.ಪಿ.ಎಫ್. ಸ್ಥಾಪನಾ ದಿನಾಚರಣೆಯ ಪೆರೇಡ್ ನಲ್ಲಿ ಸಿ.ಎನ್. ಆದರ್ಶ್ ಶಾಸ್ತ್ರಿ ಅವರು ಕಮಾಂಡರ್ ಆಗಿ ಉತ್ತರ್‌ಖಾಂಡ್ ಸಿ.ಆರ್.ಪಿ.ಎಫ್ ಪ್ಲಾಟೂನ್ ಅನ್ನು ಮುನ್ನಡೆಸಿದ್ದರು. ಈ ಸಂದರ್ಭ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿ.ಎನ್. ಆದರ್ಶ್ ಶಾಸ್ತ್ರಿರವರನ್ನು ಗೌರವಿಸಿದರು.
ಉತ್ತರ್ ಖಾಂಡ್ ಸಿ.ಆರ್.ಪಿ.ಎಫ್ ಪ್ಲಾಟೂನ್ ಕಮಾಂಡರ್ ಸಿ.ಎನ್. ಆದರ್ಶ್ ಶಾಸ್ತ್ರಿ ಅವರು ಕಳೆದ ವರ್ಷ ಅಮರನಾಥ ಯಾತ್ರೆ ಸಂದರ್ಭ ಯಾತ್ರಾರ್ಥಿಗಳ ರಕ್ಷಣಾ ಕಾರ್ಯದ ಮುಂದಾಳತ್ವ ವಹಿಸಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದರು. ಇವರು ವಿರಾಜಪೇಟೆಯ ನಾರಾಯಣ ಶಾಸ್ತ್ರಿ ದಂಪತಿಗಳ ಪುತ್ರ.