ಮೂರ್ನಾಡು, ಡಿ.08: ಅತೀ ಕಡಿಮೆ ಜನಸಂಖ್ಯೆಯಲ್ಲಿರುವ ಜನಾಂಗಳನ್ನು ಸಾಂವಿಧಾನಿಕವಾಗಿ ರಕ್ಷಿಸುವುದು ಸರ್ಕಾರ ಮತ್ತು ನಾಗರೀಕ ಸಮಾಜದ ಹೊಣೆ ಎಂದು ಮಡಿಕೇರಿ ಶಾಸಕ ಡಾ, ಮಂಥರ್ ಗೌಡ ಅಭಿಪ್ರಾಯ ಪಟ್ಟರು.
ಕೊಡಗು ಮೂಲನಿವಾಸಿ ಅರಮನೆ ಪಾಲೆ ಸಮಾಜದ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿ ಮೂಲ ನಿವಾಸಿಯಾಗಿರುವ ಅರಮನೆ ಪಾಲೆ ಜನಾಮಗವು ಕೊಡವ ಸಂಸ್ಕೃತಿಯ ಭಾಗವಾಗಿದ್ದಾರೆ. ನಾನಾ ಕಾರಣಗಳಿಂದ ಜನಾಂಗದ ಸಂಖ್ಯೆಯೂ ಕ್ಷೀಣೀಸುತ್ತಿದ್ದು, ಇವರ ಸಂವಿಧಾನ ಬದ್ದ ಹಕ್ಕುಗಳಿಗಾಗಿ ಸರ್ಕಾರ ಸದಾ ಸಿದ್ದವಿದೆ, ಜನಾಂಗದ ಸಬಲೀಕರಣಕ್ಕೆ ಕಾನೂನಿನ ಅಡಿಯಲ್ಲಿ ಪ್ರಯತ್ನಿಸಲಾಗುವುದು, ಮತ್ತು ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ ಶಾಸಕರು, ಅಳಿವಿನಂಚಿನಲ್ಲಿರುವ ಸಣ್ಣ ಜನಾಂಗವಾದರೂ ಅರಮನೆ ಪಾಲೆ ಜನಾಂಗದ ಯುವ ಪೀಳಿಗೆ ಶಿಕ್ಷಣ,ಕ್ರೀಡೆ ಸೇರಿದಂತೆ ನಾನಾ ವಿಭಾಗಗಳಲ್ಲಿ ಸಾಧನೆಯ ಹಾದಿಯಲ್ಲಿರುವದು ನಮಗೆಲ್ಲ ಮಾದರಿ ಎಂದರು.
ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು ಮಾತನಾಡಿ, ಕೊಡವ ಭಾಷೆ ಮಾತನಾಡುವ ಮತ್ತು ಸಂಸ್ಕೃತಿಯನ್ನು ಪಾಲಿಸುವ ಅರಮನೆ ಪಾಲೆ ಜನಾಂಗವು ತನ್ನ ಮೂಲ ಕಲೆ ಸಂಸ್ಕೃತಿ ಸಂಪ್ರದಾಯವನ್ನು ಉಳಿಸಿ ಪಾಲಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು, ಈ ನಿಟ್ಟಿನಲ್ಲಿ ಅಕಾಡೆಮಿಯು ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
ಕೊಡಗು ಮೂಲ ನಿವಾಸಿ ಅರಮನೆ ಪಾಲೆ ಸಮಾಜದ ಅಧ್ಯಕ್ಷರಾದ, ಪಾಲೆರ ಚೆನಿಯ ನಾಪೋಕ್ಲು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಲೆಫ್ಟಿನೆಂಟ್ ಕರ್ನಲ್ ಎಂ.ಎಸ್. ಕಾವೇರಿಯಪ್ಪ ಭಾರತೀಯ ಸೇನೆ, ಮಡಿಕೇರಿ, ಡಾ|| ಮೇಚಿರ ಸುಭಾಷ್ ನಾಣಯ್ಯ ಅಧ್ಯಕ್ಷರು, ಕೊಡವ ಭಾಷಿಕಾ ಸಮುದಾಯಗಳ ಕೂಟ (ರಿ) ಕೊಡಗು, ಶ್ರೀ ಅರಮನೆಪಾಲೆರ ದೇವಯ್ಯ ನಿರ್ದೇಶಕರು, ಕೊಡವ ಭಾಷಿಕಾ ಸಮುದಾಯಗಳ ಕೂಟ (ರಿ), ಶ್ರೀ ಮಂದಣ್ಣ ಪಿ.ಕೆ. ಪ್ರಧಾನ ಸಂಘಟಕರು, ಕೊಡಗು ಮೂಲನಿವಾಸಿ ಆರಮನೆಪಾಲೆ ಸಮಾಜ (ರಿ) ಹಾಗೂ ಪ್ರಾಂಶುಪಾಲರು, ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆ, ಮಡಿಕೇರಿ. ಸೇರಿದಂತೆ ಅರಮನೆ ಪಾಲೆ ಜನಾಂಗ ಬಾಂದವರು ಉಪಸ್ಥಿತರಿದ್ದರು.