Site icon nadubadenews.com

ಅಕ್ಷರದಾಸೋಹದ ಎಡಿಎ ಕಾಳನಾಯಕ್, ಶಿಕ್ಷಣಾಧಿಕಾರಿಯಾಗಿ ಮುಂಬಡ್ತಿ…

ಅಕ್ಷರದಾಸೋಹದ ಎಡಿಎ ಕಾಳನಾಯಕ್, ಶಿಕ್ಷಣಾಧಿಕಾರಿಯಾಗಿ ಮುಂಬಡ್ತಿ…
ಅಕ್ಷರದಾಸೋಹದ ಎಡಿಎ ಕಾಳನಾಯಕ್, ಶಿಕ್ಷಣಾಧಿಕಾರಿಯಾಗಿ ಮುಂಬಡ್ತಿ…

  ಕುಶಾಲನಗರ, ಏ.14: [ ಟಿ.ಜಿ.ಪ್ರೇಮ್‌ಕುಮಾರ್]   ಕೊಡಗು ಜಿಲ್ಲಾ ಅಕ್ಷರ ದಾಸೋಹ ಯೋಜನೆಯ ಸೋಮವಾರಪೇಟೆ ತಾಲ್ಲೂಕಿನ ಸಹಾಯಕ ನಿರ್ದೇಶಕ  ( ಪ್ರೌಢಶಾಲಾ ಮುಖ್ಯ ಶಿಕ್ಷಕರ ತತ್ಸಮಾನ ಹುದ್ದೆ) ಹುದ್ದೆಯಿಂದ ಶಿಕ್ಷಣಾಧಿಕಾರಿ ಹುದ್ದೆಗೆ ಮುಂಬಡ್ತಿ ಪಡೆದು ಮೈಸೂರಿನ ಸಿಟಿಇ ಕಾಲೇಜಿನ ಉಪನ್ಯಾಸಕ ಹುದ್ದೆಗೆ ನಿಯೋಜನೆಗೊಂಡಿರುವ  ಎಚ್. ಕಾಳನಾಯಕ್ ಅವರಿಗೆ   ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಹಾಗೂ ಶಾಲೆಯ ವತಿಯಿಂದ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಸೋಮಶೇಖರ್, ಸರಳ, ಸಜ್ಜನಿಕೆ ಹೊಂದಿರುವ ಕಾಳನಾಯಕ್‌ರವರು ತಾಲ್ಲೂಕಿನಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಶಾಲಾ ಮಕ್ಕಳ ಬಿಸಿಯೂಟ ಯೋಜನೆಯನ್ನು ಸಮರ್ಥವಾಗಿ  ನಡೆಸುವ ಮೂಲಕ ಶಿಕ್ಷಣ ಇಲಾಖೆಗೆ ಹೆಮ್ಮೆ ತಂದಿದ್ದಾರೆ ಎಂದು ಶ್ಲಾಘಿಸಿದರು.

           ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿ ಪಿ.ಎಂಪೋಷಣ್ ಅಭಿಯಾನದ ಯಶಸ್ಸಿಗೆ ಉತ್ತಮ ಸೇವೆ ಸಲ್ಲಿಸಿರುವ ಕಾಳನಾಯಕ್, ಶಿಕ್ಷಕರಿಗೆ ಉತ್ತಮ ಮಾರ್ಗದರ್ಶನ ನೀಡುವ ಮೂಲಕ  ಶಿಕ್ಷಕರ ಮನಸ್ಸನ್ನು ಗೆದ್ದಿದ್ದಾರೆ ಎಂದರು.

         ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಜಿ.ಕುಮಾರ್,   ಅಕ್ಷರ ದಾಸೋಹದ ಮಡಿಕೇರಿ ತಾಲ್ಲೂಕಿನ ಸಹಾಯಕ ನಿರ್ದೇಶಕ, ಹೇಮಂತ್‌ಕುಮಾರ್, ಎಸ್ ಡಿ ಎಂ ಸಿ ಸಲಹಾ ಸಮಿತಿಯ ಸದಸ್ಯರಾದ  ಕೆ.ಎಸ್.ರಾಜಾಚಾರಿ, ಶೃತಿ, ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಟಿ.ಸೌಮ್ಯ, ಕಛೇರಿ ಸಿಬ್ಬಂದಿ ಎಂ.ಉಷಾ ಹಾಗೂ ಅಡುಗೆ ಸಿಬ್ಬಂದಿ ಮಂಜುಳಾ ಮತ್ತು ವಿದ್ಯಾರ್ಥಿಗಳು ಇದ್ದರು.

Exit mobile version