
ಮಡಿಕೇರಿ,ಮೇ,12(Nadubade News): ಸಿವಿಲ್ ಸರ್ವಿಸ್ ಪರೀಕ್ಷೆಗಳಾದ ಕೆ.ಪಿ.ಎಸ್.ಸಿ, ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಿರುವ ತರಬೇತಿಯನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗು ವಿರಾಜಪೇಟೆ ಶಾಸಕರೂ ಆಗಿರುವ ಶ್ರೀ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಮುಂದಾಗಿದ್ದು, evidhya.com, ‘ನಮ್ಮ ಕೆ.ಪಿ.ಎಸ್.ಸಿ’ ಮೂಲಕ ಕೊಡಗಿನ ಅರ್ಹ 10 ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ದೊರಕಲಿದೆ. 2022 ಹಾಗೂ ನಂತರದಲ್ಲಿ ಪದವಿ ಶಿಕ್ಷಣ ಪೂರೈಸಿರುವವರು ಉಚಿತ ತರಬೇತಿ ಪಡೆಯಲು ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿದಾರರು https://evidhya.com/test/ ವೆಬ್ ಸೈಟ್ ನಲ್ಲಿ Aptitude ಆನ್ಲೈನ್ ಪರೀಕ್ಷೆಯನ್ನು ಬರೆದ ನಂತರ ಪರೀಕ್ಷೆಯಲ್ಲಿ ಪಡೆದ ಅಂಕಗಳ ಅಂಕಪಟ್ಟಿ ದೊರಕಲಿದೆ. ಅರ್ಜಿದಾರರು ಈ ಅಂಕಪಟ್ಟಿಯ ಪ್ರತಿ, ಉಚಿತ ತರಬೇತಿ ಅಗತ್ಯತೆಯ ಕುರಿತ ಲಿಖಿತ ಅರ್ಜಿ, ಯಾವುದಾದರು 2 ಗುರುತಿನ ಚೀಟಿಗಳ ಪ್ರತಿ ಹಾಗೂ ಪದವಿ ಅಂಕಪಟ್ಟಿಯ ಪ್ರತಿಯೊಂದಿಗೆ ‘How will you contribute to the growth of Kodagu?’ (ಕೊಡಗಿನ ಬೆಳವಣಿಗೆಗೆ ನೀವು ಯಾವ ರೀತಿಯ ಕೂಡುಗೆ ನೀಡುತ್ತೀರಿ?) ಎಂಬ ವಿಷಯದ ಕುರಿತು 250 ಪದಗಳನ್ನು ಮೀರದಂತೆ ಪ್ರಬಂಧ ರಚಿಸಿ scholarships@evidhya.com ಗೆ ಈ-ಮೇಲ್ ಅಥವಾ ವಾಟ್ಸಾಪ್ ಸಂಖ್ಯೆ 7795784918ಗೆ ಕಳುಹಿಸಬೇಕಾಗಿ ವಿನಂತಿ. ಅರ್ಜಿದಾರರ ಅರ್ಜಿ ವಿವರ, ಚಿಂತನೆ, ಬರಹ ಎಲ್ಲವನ್ನೂ ಗಮನಿಸಿ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.