
ಬೆಂಗಳೂರು, ಜೂ.20. (nawubadenews) : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಹೊಸ ಗ್ರಾಮಾವಾರು ಪಡಿತರ ಚೀಟಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಪರಿಶೀಲಿಸಬಹುದು.
ಹತ್ತಿರದ ಗ್ರಾಮ ಪಂಚಾಯತ್ ಅಥವಾ ನ್ಯಾಯಬೆಲೆ ಅಂಗಡಿಗೆ ಹೋಗದೇ ಅಧಿಕೃತ ವೆಬ್ಸೈಟ್ ಮೂಲಕ ಪಟ್ಟಿಯನ್ನು ಪರಿಶಿಲನೆ ಮಾಡಬಹುದಾಗಿದ್ದು, ಹಾಗೆಯೇ ಡಿಬಿಟಿ ಸ್ಥಿತಿ ಹಾಗೂ ತಿದ್ದುಪಡಿ ಅರ್ಜಿಯ ಸ್ಥಿತಿಯನ್ನೂ ಹಂತ ಹಂತವಾಗಿ ಪರಿಶೀಲಿಸಬಹುದು. ಒಂದು ವೇಳೆ ಈ ವೆಬ್ಸೈಟ್ ಕಾರ್ಯನಿರ್ವಹಿಸದಿದ್ದರೆ ಹತ್ತಿರದ ಪಂಚಾಯತ್ ಕಚೇರಿಗೆ ಬೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ. ಪಡಿತರ ಚೀಟಿ ಡೌನ್ಲೋಡ್ ಮಾಡುವ ವಿಧಾನ Ahara Karnataka ವೆಬ್ ಪೋರ್ಟಲ್ಗೆ ಭೇಟಿ ನೀಡಿ E-Services-E-Ration Card-Download Ration Card ಆಯ್ಕೆ ಮಾಡಿ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ ಆಧಾರ್ ಜೋಡನೆ ಮಾಡಿದ ಮೊಬೈಲ್ಗೆ ಒಟಿಪಿ ಬಂದ ಮೇಲೆ ಪಿಡಿಎಫ್ನಲ್ಲಿ ಡೌನ್ಲೋಡ್ ಮಾಡಿ.
ಡಿಬಿಟಿ ಸ್ಥಿತಿ ಪರಿಶೀಲಿಸಲು Ahara Karnataka ವೆಬ್ಸೈಟ್ಗೆ ಹೋಗಿ E-Status-DBT Status ಆಯ್ಕೆ ಮಾಡಿ ನಿಮ್ಮ ವಿಭಾಗ ಅಂದರೆ ಯಾವ ಜಿಲ್ಲೆ ಎಂದು ಆಯ್ಕೆ ಮಾಡಿ ಪಡಿತರ ಚೀಟಿ ಸಂಖ್ಯೆ ನಮೂದಿಸಿದ ಬಳಿಕ ವಿವರ ಲಭ್ಯವಾಗಲಿವೆ DBT ಮೂಲಕ ಬಿಪಿಎಲ್ ಕುಟುಂಬಗಳಿಗೆ ನೀಡುವ ಯಾವುದೇ ಯೋಜನೆಯ ಹಣ ಈ ಮೂಲಕ ತಲುಪುತ್ತದೆ.
ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸ್ಥಿತಿ ಪರಿಶೀಲಿಸುವ ವಿಧಾನ ಅಧಿಕೃತ ವೇಬ್ಸೈಟ್ಗೆ ಭೇಟಿ ನೀಡಿ New/Existing RC Request Status ಆಯ್ಕೆ ಮಾಡಿ ನಿಮ್ಮೆ ಜಿಲ್ಲೆಯನ್ನು ಆಯ್ಕೆ ಮಾಡಿ ಒಟಿಪಿ ಅಥವಾ No-OTP ಆಯ್ಕೆ ಮಾಡಿ ಆರ್ಸಿ ಸಂಖ್ಯೆ ನಮೂದಿಸಿ ನಿಮ್ಮ ತಿದ್ದುಪಡಿ ಸ್ಥಿತಿಯನ್ನು ಪರಿಶೀಲಿಸಬಹುದು ಪಡಿತರ ಚೀಟಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದ್ದು, ಇದನ್ನು ರೇಷನ್ ಪಡೆಯಲಷ್ಟೇ ಬಳಸುವುದಿಲ್ಲ. ಯಾವುದೇ ಸರ್ಕಾರಿ ಸೌಲಭ್ಯಗಳಿಗೆ ಅರ್ಜಿ ಸಲ್ಲಿಕೆಗೆ ಕಡ್ಡಾಯವಾಗಿ ಬೇಕಾಗುತ್ತದೆ.
ರಾಜ್ಯದಲ್ಲಿ ಹಿಂದಿನಿಂದಲೂ ಸಹ ಅರ್ಹರಲ್ಲದವರು ಸಹ ರೇಷನ್ ಕಾರ್ಡ್ ಹೊಂದಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಆದರೆ, ಇದೀಗ ಎಚ್ಚೆತ್ತ ಸರ್ಕಾರ ಇದಕ್ಕೆ ಬ್ರೇಕ್ ಹಾಕುವ ಕೆಲಸ ಮಾಡುತ್ತಿದೆ. ಈ ಮೂಲಕ ಅರ್ಹರಿಗೆ ಅನುಕೂಲ ಮಾಡಿಕೊಡಲು ಹೊರಟಿದೆ.