
ಮಡಿಕೇರಿ,ಮೇ.01: ಕಾಫಿ ಬೆಳೆಗಾರರಿಗೆ 10HP ವರೆಗಿನ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡುವ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿದ್ದು. LT4C1 ಜಕಾತಿಯಲ್ಲಿ 10HP ವರೆಗೆ ವಿದ್ಯುತ್ ಪಡೆದಿರುವ ಗ್ರಾಹಕರಿಗೆ ತಾವು ಪಾವತಿಸಿರುವ ವಿದ್ಯುತ್ ಶುಲ್ಕವನ್ನು ತಮ್ಮ ಬ್ಯಾಂಕ್ ಖಾತೆಗೆ DBT ಮೂಲಕ ಮರುಪಾವತಿಸುವ ಯೋಜನೆಯಾಗಿರುತ್ತದೆ.
ಈ ಯೋಜನೆಗೆ ಸಂಬಂಧಿಸಿದ ಪ್ರಮುಖ ಅಂಶಗಳು:
ಅರ್ಜಿಗಳನ್ನು ಆನ್ಲೈನ್ ಮೂಲಕ ಸೇವಾಸಿಂಧು ಪೋರ್ಟಲ್ನಲ್ಲಿ ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಕೆಗೆ ಗ್ರಾಹಕರು ರೈತನ ಐಡಿ (FRUIT ID) ಕಡ್ಡಾಯವಾಗಿ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, RTC ಹಾಗೂ FRUIT ID ನಲ್ಲಿ ನಮೂದಿಸಿರುವ ಹೆಸರಿನೊಂದಿಗೆ ವಿದ್ಯುತ್ ಬಿಲ್ಲಿನಲ್ಲಿರುವ ಹೆಸರು ಹೊಂದಾಣಿಕೆಯಾಗುವಂತಿರಬೇಕು.
ಅರ್ಜಿ ಸಲ್ಲಿಸಲು ಗ್ರಾಹಕರ RTC ಯಲ್ಲಿ ಕಡ್ಡಾಯವಾಗಿ ಕಾಫಿ ಬೆಳೆ ನಮೂದಿಸಿರಬೇಕು.
ಅರ್ಜಿ ಸಲ್ಲಿಸಲು ಈ ಕೆಳಕಂಡ ದಾಖಲೆಗಳನ್ನು ಅಗತ್ಯವಾಗಿ ಸಲ್ಲಿಸಬೇಕು.
1. ವಿದ್ಯುತ್ ಬಿಲ್ಲು (ಐ.ಪಿ ಸೆಟ್)
2. ಆಧಾರ್ ಕಾರ್ಡ್ ಪ್ರತಿ
3.RTC ಪ್ರತಿ
4. FRUIT ID (ರೈತನ ಐಡಿ)
5. ಮೊಬೈಲ್ ಸಂಖ್ಯೆ
ಈ ಸೌಲಭ್ಯಕ್ಕೆ ಅರ್ಹ ಗ್ರಾಹಕರು ತಮಗೆ ಸಂಬಂಧಿಸಿದ ಸೆಸ್ಕಾಂ ಕಂದಾಯ ಶಾಖೆಯಲ್ಲಿ ನೊಂದಾಯಿಸಿಕೊಳ್ಳಲು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ (ವಿ) ಉಪ ವಿಭಾಗೀಯ ಕಛೇರಿ, ಸೆಸ್ಕ್ ಕುಶಾಲನಗರ ಇವರ ಪ್ರಕಟಣೆ ತಿಳಿಸಿದೆ.