ಇತ್ತೀಚಿನ ಬೆಳವಣಿಗೆಯಲ್ಲಿ ಕೊಡಗಿನ ಹಾಕಿಯೂ ಉತ್ತುಂಗಕ್ಕೆ ಏರಿದೆ. ಕೌಟುಂಬಿಕ ಹಾಕಿಯು 3 ಬಾರಿ ಲಿಮ್ಕಾ ದಾಖಲೆ, ಒಂದು ಬಾರಿ ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದೆ ಎಂಬುದು ವಿಶ್ವದಾದ್ಯಂತ ಪಸರಿಸಿದೆ.
ಹಾಕಿಯು ಆಡಂಬರಕ್ಕೆ ಮಾತ್ರ ಸೀಮಿತವಾಗಬಾರದು, ಎಂದರೆ ಕರ್ನಾಟಕದಿಂದ ಎಷ್ಟು ಆಟಗಾರರು ಭಾರತವನ್ನು ಪ್ರತಿನಿಧಿಸಿದ್ದಾರೆ ಎಂಬುದು ತಿಳಿಯಲೇಬೇಕಾದ ವಿಷಯ. ಎಂದು ಹೆಸರಾಂತ ಹಾಕಿ ವೀಕ್ಷಕ ವಿವರಣೆಕಾರ ಮತ್ತು ಅಂಕಣಕಾರ ಚೆಪ್ಪುಡಿರ ಕಾರ್ಯಪ್ಪ ಅವರು ಈ ಕೆಳಗಿನಂತೆ ವಿಶ್ಲೇಷಣೆ ಮಾಡಿದ್ದಾರೆ
ಅಂಕಿ ಅಂಶಗಳು
27 ಒಲಂಪಿಯನ್ ಹಾಕಿ ಆಟಗಾರರನ್ನು ಕೊಟ್ಟ ರಾಜ್ಯ ಕರ್ನಾಟಕ, ಇದರಲ್ಲಿ 11 ಒಲಂಪಿಯನ್ ಹಾಕಿ ಆಟಗಾರರು ಹಾಗು 69 ಅಂತರಾಷ್ಟ್ರೀಯ ಆಟಗಾರರು, ತೀರ್ಪುಗಾರರು, ತರಬೇತುದಾರನ್ನು ಹಾಗು ಇಬ್ಬರು 1975ನೇ ವಿಶ್ವಕಪ್ ವಿಜೇತ ಹಾಕಿ ಆಟಗಾರರನ್ನು ಕೊಟ್ಟಂತಹ ಪುಟ್ಟ ಜಿಲ್ಲೆ ಕೊಡಗು ಎಂಬುದು ಹೆಮ್ಮೆಯ ವಿಷಯ.
ಹಾಕಿ ಇಂಡಿಯಾ ಲೀಗ್
ಇತ್ತೀಚೆಗೆ ನಡೆದ ಹಾಕಿ ಇಂಡಿಯಾ ಲೀಗ್ ನಲ್ಲಿ ಕರ್ನಾಟಕದ ಆಟಗಾರರಾದ ಡ್ರ್ಯಾಗನ್ಸ್ ತಮಿಳುನಾಡು ತಂಡದಲ್ಲಿ ಶೇಷೆ ಗೌಡ, ಮೊಹದ್ ರಹೀಲ್.ಎಂ, ಮಜ್ಜಿ ಗಣೇಶ್, ಪೃಥ್ವಿ ಜಿ.ಎಂ, ಆಭರಣ್ ಸುದೇವ್. ಬೆಂಗಾಲ್ ಟೈಗರ್ಸ್ ತಂಡದಲ್ಲಿ ಪೂವಣ್ಣ.ಸಿ. ಗೋನಾಸಿಕ ವಿಜಾಗ್ ತಂಡದಲ್ಲಿ ಎಸ್. ವಿ. ಸುನಿಲ್, ನಿಕ್ಕಿನ್ ತಿಮ್ಮಯ್ಯ, ಎಸ್.ಕೆ. ಉತ್ತಪ್ಪ. ಸೂರ್ಮ ಹಾಕಿ ಕ್ಲಬ್ ಪಂಜಾಬ್ ತಂಡದಲ್ಲಿ ಮೋಹಿತ್ ಹೆಚ್ಎಸ್ ಹಾಗೂ ಹರೀಶ್ ಎಸ್ ಮುತಗಾರ್ ಭಾಗವಹಿಸಿದ್ದರು.
ಇದೇ ರೀತಿ ತರಬೇತಿದಾರರಾಗಿ ಕರ್ನಾಟಕದಿಂದ ಕಾಳಿಂಗ ಲಾನ್ಸರ್ ತಂಡಕ್ಕೆ ಡಾ. ಎ.ಬಿ ಸುಬ್ಬಯ್ಯ, ಬಿ. ಜೆ. ಕಾರ್ಯಪ್ಪ. ಡ್ರ್ಯಾಗನ್ಸ್ ತಮಿಳುನಾಡು ತಂಡಕ್ಕೆ ವಿ.ಆರ್. ರಘುನಾಥ್. ಗೊನಾಸಿಕ ವಿಜಾಗ್ ತಂಡಕ್ಕೆ ಎಂ. ಎಂ. ಸೋಮಯ್ಯ. ಸೂರ್ಯ ಹಾಕಿ ಕ್ಲಬ್ ಪಂಜಾಬ್ ಗೆ ಅರ್ಜುನ ಹಾಲಪ್ಪ ಹಾಗು ಎಸ್. ಜಿ. ಪೈಪರ್ಸ್, ದೆಹಲಿ ಮಹಿಳಾ ಹಾಕಿ ತಂಡಕ್ಕೆ ಅಂಕಿತ ಬಿ. ಎಸ್ ಅವರು ತರಬೇತಿದಾರರಾಗಿದ್ದರು.
ಕರ್ನಾಟಕದಿಂದ ತಂಡ???
ಈ ಬಾರಿ ಹಾಕಿ ಇಂಡಿಯಾ ಲೀಗ್(HIL) ಒಂದೂವರೆ ತಿಂಗಳುಗಳ ಕಾಲ ನಡೆಯಿತು. ಕರ್ನಾಟಕದಿಂದ ಕೆಲವು ಆಟಗಾರರು ಇದರಲ್ಲಿ ಆಡಿದರು. ಇತ್ತೀಚೆಗೆ ಉತ್ತರಾಖಂಡದಲ್ಲಿ ನಡೆದ 38ನೇ ನ್ಯಾಷನಲ್ ಗೇಮ್ಸ್ ನಲ್ಲಿ ಕರ್ನಾಟಕ ಚಿನ್ನದ ಪದಕ ಗೆದ್ದಿತು. ಅದೇ ರೀತಿ ಕರ್ನಾಟಕದಿಂದ ಒಂದು ತಂಡವು HIL ನಲ್ಲಿ ಭಾಗವಹಿಸಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ಹಲವು ಕ್ರೀಡಾ ಪ್ರೇಮಿಗಳ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ.
ಸಾರಾಂಶ :
ಹಾಕಿ ಇಂಡಿಯಾ ಲೀಗ್ ನಲ್ಲಿ ಒಬ್ಬ ಆಟಗಾರ ಎರಡು ವರ್ಷಗಳ ಕಾಲ ಒಂದೇ ತಂಡಕ್ಕೆ ಆಡಬೇಕು ಎಂಬುದು ನಿಯಮ. ವರ್ಷಕ್ಕೊಮ್ಮೆ ಅವರ ಆಟದ ಪ್ರಕಾರ ಲಕ್ಷದಿಂದ 75 ಲಕ್ಷದವರೆಗಿನ ಮೊತ್ತವು ಒಬ್ಬ ಆಟಗಾರನಿಗೆ ಸಿಗುತ್ತದೆ. ಖ್ಯಾತ ಭಾರತ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಅವರು 75 ಲಕ್ಷ ಮೊತ್ತವನ್ನು ಪಡೆದು ದಾಖಲೆ ನಿರ್ಮಿಸಿದರು.
ಕೊಡಗಿನಲ್ಲಿ ಹಲವು ಹಾಕಿ ಪಂದ್ಯಾವಳಿಗಳು ನಡೆಯುತ್ತವೆ. ಇದಕ್ಕೆ ಆತಿಥೇಯ ಆಟಗಾರರನ್ನು ಕರೆತಂದು ಆಡಿಸುತ್ತಾರೆ. ಆಗ ಕೊಡಗಿನ ಆಟಗಾರರು ಅವಕಾಶದಿಂದ ವಂಚಿತರಾಗುತ್ತಾರೆ. ಆತಿಥೇಯ ಆಟಗಾರರಿಗೆ ಭಾರತದಲ್ಲಿಡೆ ಆಡಲು ಅವಕಾಶ ನೀಡುತ್ತದೆ. ಆತಿಥೇಯ ಆಟಗಾರರನ್ನು ಕರೆತಂದು ಆಡಿಸಲು ಬಹಳಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಕೆಲವು ವರ್ಷಗಳ ನಂತರ ಇದರಿಂದ ಕರೆತಂದು ಆಡಿಸುವ ಕ್ಲಬ್/ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ ಹದಗೆಡಬಹುದು. ಕೊಡಗಿನ(Coorg born) ಆಟಗಾರರಿಗೆ ಮಾತ್ರ ಕೊಡಗಿನ ಹಾಕಿ ಪಂದ್ಯಾವಳಿಗಳು ಸೀಮಿತವಾಗಬೇಕು ಹಾಗು ಸ್ಥಳೀಯ ಆಟಗಾರರನ್ನೇ ವಿವಿಧೆಡೆ ಆಡಿಸಲು ಉತ್ತೇಜಿಸಬೇಕು. ಈ ವಿಷಯವನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು.
HIL ನಲ್ಲಿ ಕರ್ನಾಟಕದಿಂದ ತಂಡವಿಲ್ಲದ ಕಾರಣ ಪ್ರತಿಭಾವಂತ ಹಾಕಿ ಆಟಗಾರರಾದ ಕುಪ್ಪಂಡ ಸೋಮಯ್ಯ, ಕುಂಡ್ಯೋಳಂಡ ಕಾರ್ಯಪ್ಪ, ಬಿದ್ದಾಟಂಡ ಚೆಲ್ಸಿ ಮೇದಪ್ಪ, ಮಾತಂಡ ಆರ್ಯನ್ ಉತ್ತಪ್ಪ, ಶಾನ್ ಮೊಣ್ಣಪ್ಪ, ಲಿಖಿತ್, ಸೂರ್ಯ, ಬಿಪಿನ್, ಪೃಥ್ವಿ ರಾಜ್ ಹಾಗು ಇನ್ನೂ ಹಲವಾರು ಪ್ರತಿಭಾವಂತ ಆಟಗಾರರು ಕೌಟುಂಬಿಕ ಹಾಕಿ ಹಬ್ಬದಲ್ಲಿ ಹಾಗು ವಿವಿಧ ಹಾಕಿ ಪಂದ್ಯಾವಳಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಇವರ ಆಟ ಇಂದು ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದರೂ ತಮ್ಮ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಇಲ್ಲದೆ ತೆರೆಯ ಮರೆಯ ಕಾಯಿಯಂತೆಯೇ ಉಳಿದಿದ್ದಾರೆ. ಇದನ್ನು ಸರಿಪಡಿಸಲು ಹಾಕಿಯ ಸಂಘ-ಸಂಸ್ಥೆಗಳು ಸಹಕರಿಸಬೇಕು ಹಾಗೂ ಕರ್ನಾಟಕದಿಂದ ಹಾಕಿ ಇಂಡಿಯಾ ಲೀಗ್ ನಲ್ಲಿ ಒಂದು ತಂಡ ಪಾಲ್ಗೊಳ್ಳುವಂತೆ ಮಾಡಲು ಎಲ್ಲಾ ರೀತಿಯಲ್ಲೂ ಶ್ರಮಿಸಬೇಕು.
ಕೌಟುಂಬಿಕ ಹಾಕಿ ಹಬ್ಬದಲ್ಲಿ ಸುಮಾರು 2 ಕೋಟಿಯಷ್ಟು ಹಣವು ಖರ್ಚಾಗುತ್ತದೆ. ಇದು ಆಡಂಬರಕ್ಕೆ ಮಾತ್ರ ಸೀಮಿತವಾಗಬಾರದು. ಇದರಲ್ಲಿ ಸ್ವಲ್ಪ ಮೊತ್ತವನ್ನು ಆಟಗಾರರ ಭವಿಷ್ಯ ರೂಪಿಸಲು ಮುಡಿಪಾಗಿಡಬೇಕು. ಮುಂದಿನ ಪೀಳಿಗೆಗೆ ಹಾಕಿಯ ತರಬೇತಿ ನೀಡಿ ಉಳಿಸಿ ಬೆಳೆಸಬೇಕು.
ಇದರಂತೆ ಕೊಡಗಿನಿಂದ ಕರ್ನಾಟಕದಲ್ಲಿ ಹಾಕಿ ತಂಡ ರಚನೆಯಾದರೆ ತೀರ್ಪುಗಾರರು, ಆಟಗಾರರು ಹಾಗು ತರಬೇತಿದಾರರಿಗೆ ಹಾಗು ಇಷ್ಟೆಲ್ಲಾ ಹಾಕಿ ವೈಭವವನ್ನು ಹೊಂದಿರುವ ಕರ್ನಾಟಕ, ಈ ರೀತಿ ತಂಡ ರಚಿಸಿ ಆಡಿದರೆ ಮುಂದಿನ ಪೀಳಿಗೆಗೂ ಮಾರ್ಗದರ್ಶನವಾಗುತ್ತದೆ, ಭವಿಷ್ಯದ ಹಾಕಿಗೆ ಇದು ಉತ್ತಮ ಅಡಿಪಾಯವಾಗುತ್ತದೆ, ಅಲ್ಲದೆ ಎಲ್ಲ ರಾಜ್ಯಗಳ ತಂಡ HIL ನಲ್ಲಿ ಇರುವಾಗ ಕರ್ನಾಟಕದ ತಂಡ ಇಲ್ಲದಿರುವುದು ಹಿರಿಯ ಆಟಗಾರರು, ಹಾಕಿಗಾಗಿ ಶ್ರಮಿಸಿದವರಿಗೂ ಹಾಗೂ ಕೌಟುಂಬಿಕ ಹಾಕಿ ಹಬ್ಬ ಆಯೋಜಿಸಿದ ಕುಟುಂಬದವರಿಗೂ ಕಾಡುತ್ತಿರುವ ಪ್ರಶ್ನೆಯಾಗಿ ಉಳಿದಿದೆ. ಇದಕ್ಕೆ ಸಮಯವೇ ಉತ್ತರಿಸಬೇಕು ???…..
ಕ್ರೀಡಾ ವಿಶ್ಲೇಷಣೆ