Site icon nadubadenews.com

ಸೇನಾ ನೇಮಕಾತಿ ಅರಿವು ಕಾರ್ಯಾಗಾರ ಮೇ 10ರಂದು ತಾಳತ್ತಮನೆಯಲ್ಲಿ …

    ಮಡಿಕೇರಿ ಮೇ 5(ನಡುಬಾಡೆ ನ್ಯೂಸ್):‌  ತಾಳತ್ತಮನೆಯ ನೇತಾಜಿ ಯುವಕ ಮಂಡಲ ಹಾಗೂ ಹೊಟೇಲ್ ಆಕ್ಸಿರಿಚ್ ಸಂಯಕ್ತಾಶ್ರಯದಲ್ಲಿ ಮೇ 10 ರಂದು ತಾಳತ್ತಮನೆಯಲ್ಲಿ ಸೇನಾ ನೇಮಕಾತಿಯ ಬಗ್ಗೆ ಅರಿವು ಕಾರ್ಯಾಗಾರ ನಡೆಯಲಿದೆ. ಅಂದು ಅಪರಾಹ್ನ 2.30 ಗಂಟೆಗೆ ತಾಳತ್ತಮನೆಯ ಹೊಟೇಲ್ ಆಕ್ಸಿರಿಚ್ ಸಭಾಂಗಣದಲ್ಲಿ ಭಾರತೀಯ ಸೇನೆಗೆ ನೇಮಕಾತಿ ಬಯಸುವ ಆಕಾಂಕ್ಷಿತ 15 ರಿಂದ 25 ವರ್ಷದ ಯುವಕ ಮತ್ತು ಯುವತಿಯರಿಗೆ ಕಾರ್ಯಾಗಾರ ನಡೆಯಲಿದ್ದು, ಸೇನೆಯಲ್ಲಿ ಸೇನಾಧಿಕಾರಿ ಮತ್ತು ಅಗ್ನಿವೀರ್ ಹುದ್ದೆಗಳಿಗೆ ಆಯ್ಕೆಯಾಗಲು ಬೇಕಾದ ಉಪಯುಕ್ತ ಮಾಹಿತಿಗಳನ್ನು ನೀಡಲಾಗುವುದು. ಸಂಪನ್ಮೂಲ ವ್ಯಕ್ತಿಗಳಾಗಿ ಭಾರತೀಯ ನೌಕಾದಳದಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯಂತ್ ಸುಬ್ಬಯ್ಯ, ಆಡಿಯೋ ವಿಶುವಲ್ ಪ್ರಾತ್ಯಕ್ಷಿಕೆ ಮುಖಾಂತರ ಮಾಹಿತಿ ನೀಡಲಿದ್ದಾರೆ. ಆಸಕ್ತ ಪ್ರೌಢ ಶಾಲೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ಎನ್.ಸಿ.ಸಿ ಕೆಡೆಟ್‌ಗಳು ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9901677675, 9632007915, 7019716632, 9110862380 ಸಂಪರ್ಕಿಸಬಹುದಾಗಿದೆ.

Exit mobile version