Site icon nadubadenews.com

ವಿದ್ಯುತ್ ವ್ಯತ್ಯಯ ,ಚೆಸ್ಕಾಂ ಸಿಬ್ಬಂದಿಗಳೊಂದಿಗೆ ಸಹಕರಿಸುವಂತೆ ಕೋರಿಕೆ…

ವಿದ್ಯುತ್ ವ್ಯತ್ಯಯ ,ಚೆಸ್ಕಾಂ ಸಿಬ್ಬಂದಿಗಳೊಂದಿಗೆ ಸಹಕರಿಸುವಂತೆ ಕೋರಿಕೆ…
ವಿದ್ಯುತ್ ವ್ಯತ್ಯಯ ,ಚೆಸ್ಕಾಂ ಸಿಬ್ಬಂದಿಗಳೊಂದಿಗೆ ಸಹಕರಿಸುವಂತೆ ಕೋರಿಕೆ…

   ಮಡಿಕೇರಿ ಮೇ28.(Nadubade News): ಕೊಡಗು ಜಿಲ್ಲೆಯಾದ್ಯಂತ  ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆ, ಬೀಸುತ್ತಿರುವ  ಗಾಳಿ ಯಿಂದಾಗಿ ವಿದ್ಯುತ್ ಮಾರ್ಗಗಳು, ಕಂಬಗಳು ಹಾಗೂ ಪರಿವರ್ತಕಗಳು ಹಾನಿಗೊಳಗಾಗಿದ್ದು, ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 594 ಸಂಖ್ಯೆ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುತ್ತದೆ. ನಿಗಮದ ನಿರ್ವಹಣಾ ಸಿಬ್ಬಂದಿಗಳು ಹಗಲಿರುಳು ವಿದ್ಯುತ್ ಮಾರ್ಗದ ದುರಸ್ಥಿ ಕಾರ್ಯವನ್ನು ನಿರ್ವಹಿಸಲು ಶ್ರಮಿಸುತ್ತಿದ್ದು, ಅತೀ ಹೆಚ್ಚಿನ ಗಾಳಿ ಮಳೆಯಿಂದಾಗಿ ದುರಸ್ಥಿ ಕಾರ್ಯಕ್ಕೆ ತೊಂದರೆ ಉಂಟಾಗುತ್ತಿದೆ. ಸಿಬ್ಬಂದಿಗಳ ಕೊರತೆಯ ನಡುವೆಯೂ ನಿರಂತರವಾಗಿ ವಿದ್ಯುತ್ ಮಾರ್ಗದ ದುರಸ್ಥಿ ಕಾರ್ಯವನ್ನು ನಿರ್ವಹಿಸುತ್ತಿದ್ದು, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸುವಂತೆ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಕೋರಿದ್ದಾರೆ

Exit mobile version